ಬೆಂಗಳೂರು: ಉಡುಗೊರೆಯ ರೂಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ಮೈಲುಗಲ್ಲು ನೆಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಪ್ರಭಾವಿ ವ್ಯಕ್ತಿಯಿಂದ 1.30 ಕೋಟಿ ರೂ. ಕಿಕ್ಬ್ಯಾಕ್ ಪಡೆದಿರುವ ಬಗ್ಗೆ ಸಿದ್ದರಾಮಯ್ಯರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ #ಭ್ರಷ್ಟರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ನಾಯಕನ ವಿರುದ್ಧ ಕಿಡಿಕಾರಿದೆ.
ಇದನ್ನೂ ಓದಿ: ಶಾಸಕ ಎನ್. ಮಹೇಶ್ ಕಮಾಲ್...7 ಅನರ್ಹರಲ್ಲಿ 6 ಮಂದಿ ಜಯಭೇರಿ!!
‘ಶಿಕ್ಷಕರ ನೇಮಕದಲ್ಲಿ ಕಿಕ್ ಬ್ಯಾಕ್, ಕೈಗೆ ದುಬಾರಿ ವಾಚ್ ಕಟ್ಟಲು ಕಿಕ್ ಬ್ಯಾಕ್ ಮತ್ತು ಮನೆಕಟ್ಟಲು ಕಿಕ್ ಬ್ಯಾಕ್ ಹೀಗೆ ಉಡುಗೊರೆಯ ರೂಪದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರದ ಮೈಲುಗಲ್ಲನ್ನೇ ನೆಟ್ಟಿದ್ದಾರೆ’ ಅಂತಾ ಬಿಜೆಪಿ ಟೀಕಿಸಿದೆ.
‘ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಡಳಿತ ನಡೆಸಿದ್ದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರ ನಡೆಸಿದ್ದೇ ಜಾಸ್ತಿ ಎನ್ನುವುದು ಮತ್ತೆ ಮತ್ತೆ ರುಜುವಾತಾಗುತ್ತಿದೆ. ಸಿದ್ದರಾಮಯ್ಯನವರು ಕೈಗೆ ಕಟ್ಟುವ ವಾಚಿನಿಂದ ಹಿಡಿದು ಓಡಾಡುವ ಕಾರಿನವರೆಗೆ ಎಲ್ಲವನ್ನೂ "ಪ್ರತಿಫಲಾರ್ಥ" ವಾಗಿ ಪಡೆದಿದ್ದಾರೆ’ ಅಂತಾ ಬಿಜೆಪಿ ಆರೋಪಿಸಿದೆ.
ಇದನ್ನೂ ಓದಿ: ಸೋಲಾರ್ ಹಗರಣ ತನಿಖೆ, ಕಾದು ನೋಡಿ ಎಂದ್ರು ಸಿಎಂ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.