Relationship Tips: ಪುರುಷ ಸಂಗಾತಿಯ ಈ 4 ವರ್ತನೆಗಳನ್ನು ಮಹಿಳೆಯರು ದ್ವೇಷಿಸುತ್ತಾರೆ..!

ಹುಡುಗಿಯರು ತಮ್ಮ ಪುರುಷ ಸಂಗಾತಿಯ ಕೆಲವು ಅಭ್ಯಾಸಗಳನ್ನು ಇಷ್ಟಪಡುವುದಿಲ್ಲ. ಸಂಗಾತಿಯ ಬೇಕು-ಬೇಡಗಳು, ಕಷ್ಟ ಮತ್ತು ಸುಖಗಳ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುತ್ತದೆ. 

Written by - Puttaraj K Alur | Last Updated : Nov 1, 2022, 01:21 PM IST
  • ಪ್ರೀತಿಸುವಾಗ ನಿಮ್ಮ ಬಗ್ಗೆಯಲ್ಲದೆ ಸ್ತ್ರೀ ಸಂಗಾತಿಯ ಅಗತ್ಯತೆಗಳ ಬಗ್ಗೆಯೂ ಯೋಚಿಸಬೇಕು
  • ಸಂಗಾತಿಗೆ ಮೋಸ ಮತ್ತು ವಂಚನೆ ಮಾಡಬಾರದು ಮತ್ತು ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು
  • ಪುರುಷರು ಸಂಬಂಧದಲ್ಲಿ ಯಾವುದೇ ರೀತಿ ತಪ್ಪು ತಿಳುವಳಿಕೆ ಬರದಂತೆ ನೋಡಿಕೊಳ್ಳಬೇಕು
Relationship Tips: ಪುರುಷ ಸಂಗಾತಿಯ ಈ 4 ವರ್ತನೆಗಳನ್ನು ಮಹಿಳೆಯರು ದ್ವೇಷಿಸುತ್ತಾರೆ..!  title=
Healthy Relationship Tips

ನವದೆಹಲಿ: ಒಬ್ಬ ಮಹಿಳೆ ತನ್ನ ಹೃದಯವನ್ನು ಯಾವುದೇ ಒಬ್ಬ ವ್ಯಕ್ತಿಗೆ ಒಪ್ಪಿಸಿದಾಗ ಮತ್ತು ಆತನೊಂದಿಗೆ ತನ್ನ ಇಡೀ ಜೀವನ ಕಳೆಯಲು ಉದ್ದೇಶಿಸಿದಾಗ, ಆ ಗೆಳತಿಯ ಪ್ರತಿಯೊಂದು ಅಗತ್ಯ ನೋಡಿಕೊಳ್ಳುವುದು ಪುರುಷ ಸಂಗಾತಿಯ ಜವಾಬ್ದಾರಿ. ಹೆಣ್ಣುಮಕ್ಕಳು ತಮ್ಮ ಪುರುಷ ಸಂಗಾತಿಯೊಂದಿಗೆ ಭಾವನಾತ್ಮಕ ಬಾಂಧವ್ಯವನ್ನು ನಿರೀಕ್ಷಿಸುತ್ತಾರೆ.

ಸಂಬಂಧಗಳಲ್ಲಿರುವಾಗ ಪುರುಷರು ಸಾಮಾನ್ಯವಾಗಿ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಇದು ಮುಂದೆ ಸಂಬಂಧಗಳಲ್ಲಿ ಬಿರುಕುಗಳಿಗೆ ಕಾರಣವಾಗುತ್ತದೆ. ವಾಸ್ತವವಾಗಿ ಪುರುಷ ಸಂಗಾತಿಯ ಕೆಲವು ಕ್ರಿಯೆಗಳನ್ನು ಮಹಿಳೆಯರು ಇಷ್ಟಪಡುವುದಿಲ್ಲ, ಪದೇ ಪದೇ ಈ ಬಗ್ಗೆ ಹೇಳಿದ ನಂತರವೂ ಪುರುಷರು ಒಪ್ಪದಿದ್ದರೆ, ಮಹಿಳೆಯರು ಸಂಬಂಧ ಕಡಿದುಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ.   

ನಿಮ್ಮ ಬಗ್ಗೆ ಮಾತ್ರ ಯೋಚಿಸುವುದು

ನಿಮ್ಮ ಬಗ್ಗೆ ಯೋಚಿಸುವುದು ತಪ್ಪಲ್ಲ. ಆದರೆ, ನೀವು ಸಂಬಂಧದಲ್ಲಿರುವಾಗ ಸ್ತ್ರೀ ಸಂಗಾತಿಯ ಅಗತ್ಯತೆಗಳ ಬಗ್ಗೆಯೂ ಯೋಚಿಸಬೇಕು. ನೀವು ಅವರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುವುದಿಲ್ಲವೆಂದು ಅವರು ಭಾವಿಸುವ ಯಾವುದೇ ಕೆಲಸ ಮಾಡುವುದು ಸರಿಯಲ್ಲ. ಇಲ್ಲದಿದ್ದರೆ ನಿಮ್ಮ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ.

ಇದನ್ನೂ ಓದಿ: Vastu Tips For Health : ಉತ್ತಮ ಆರೋಗ್ಯಕ್ಕಾಗಿ ಈ 5 ವಾಸ್ತು ಸಲಹೆಗಳನ್ನು ಅನುಸರಿಸಿ

ಸುಳ್ಳು ಹೇಳುವ ಅಭ್ಯಾಸ

ಪ್ರತಿಯೊಂದು ಸಂಬಂಧವು ನಂಬಿಕೆ ಎಂಬ ಸೂಕ್ಷ್ಮ ಹಳಿಯ ಮೇಲೆ ನಿಂತಿರುತ್ತದೆ. ಇದರಲ್ಲಿ ಮೋಸ ಮತ್ತು ವಂಚನೆ ಕಾಣಿಸಿಕೊಳ್ಳಲು ಶುರುವಾದರೆ, ನೀವು ನಿಧಾನವಾಗಿ ವಿಘಟನೆಯತ್ತ ಹೆಜ್ಜೆ ಹಾಕುತ್ತಿದ್ದೀರಿ ಎಂದೇ ಅರ್ಥಮಾಡಿಕೊಳ್ಳಿ. ಸುಳ್ಳು ಹೇಳುವುದು ಅಥವಾ ಸತ್ಯವನ್ನು ಮರೆಮಾಚುವುದನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಹೀಗಾಗಿ ನೀವು ತಪ್ಪು ಮಾಡಿದರೂ ಕ್ಷಮೆ ಯಾಚಿಸುವುದು ಉತ್ತಮ. ಇಲ್ಲವಾದಲ್ಲಿ ನಿಮ್ಮ ಬಗ್ಗೆ ಅವರಲ್ಲಿ ಅನಗತ್ಯ ಸಂದೇಹಗಳು ಮೂಡುತ್ತವೆ.

ತಪ್ಪು ತಿಳುವಳಿಕೆ ಬರದಂತೆ ನೋಡಿಕೊಳ್ಳಿರಿ

ಪುರುಷರು ಸಂಬಂಧದಲ್ಲಿದ್ದರೂ ತಮ್ಮ ಸ್ತ್ರೀ ಸಂಗಾತಿಯತ್ತ ಗಮನ ಕೊಡದಿದ್ದರೆ ಅಥವಾ ಅವರಿಗೆ ಸಮಯ ನೀಡದಿದ್ದರೆ ಹುಡುಗಿಯರ ಮನಸ್ಸಿನಲ್ಲಿ ಕೋಪ ಮತ್ತು ತಪ್ಪು ತಿಳುವಳಿಕೆ ಬೆಳೆಯಲು ಪ್ರಾರಂಭಿಸುತ್ತದೆ. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯಲು ಸಮಯ ತೆಗೆದುಕೊಳ್ಳಿ. ಅವರನ್ನು ಸಿನಿಮಾ ನೋಡಲು, ಪ್ರವಾಸಕ್ಕೆ ಅಥವಾ ಲಾಂಗ್ ಡ್ರೈವ್‌ಗಳಿಗೆ ಕರೆದೊಯ್ಯಿರಿ. ಇದು ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ.

ಇತರ ಹುಡುಗಿಯರೊಂದಿಗೆ ಫ್ಲರ್ಟಿಂಗ್

ನೀವು ನಿಮ್ಮ ಸಂಗಾತಿಯ ಜೊತೆ ಪ್ರೀತಿಯ ಸಂಬಂಧ ಹೊಂದಿರುವಾಗ, ಬೇರೆ ಯಾವುದೇ ಹುಡುಗಿಯೊಂದಿಗೆ ಫ್ಲರ್ಟ್ ಮಾಡಬಾರದು. ಸಾಮಾನ್ಯವಾಗಿ ಪುರುಷರು ಸಂಬಂಧದಲ್ಲಿದ್ದರೂ, ಮಹಿಳಾ ಸಹೋದ್ಯೋಗಿ, ನೆರೆಹೊರೆಯವರು ಅಥವಾ ತಮ್ಮ ಆಪ್ತ ಸ್ನೇಹಿತೆಯರೊಂದಿಗೆ ಸಲುಗೆಯಿಂದ ಇರುತ್ತಾರೆ. ಇದು ನಿಮ್ಮ ಸಂಗಾತಿಗೆ ಇಷ್ಟವಾಗುವುದಿಲ್ಲ. ಮುಂದೆ ಆಕೆ ನಿಮ್ಮ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಬಹುದು. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ.  

ಇದನ್ನೂ ಓದಿ: Hair Care Tips: ಕೂದಲು ಉದುರುವ ಸಮಸ್ಯೆಗೆ ಕುಂಬಳಕಾಯಿ ಬೀಜದಲ್ಲಿದೆ ಪರಿಹಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News