ಎಕ್ಸ್‌ಪ್ರೆಸ್ ಎಂಟ್ರಿ ಡ್ರಾ ಪುನಾರಂಭ: ವಲಸೆ ಸೇವೆಗಳ ನಿರ್ಬಂಧ ತೆಗೆದುಹಾಕಲು ಕೆನಡಾ ನಿರ್ಧಾರ

ಫೆಡರಲ್ ಸ್ಕಿಲ್ಡ್ ವರ್ಕರ್ ಪ್ರೋಗ್ರಾಂ, ಫೆಡರಲ್ ಸ್ಕಿಲ್ಡ್ ಟ್ರೇಡ್ಸ್ ಪ್ರೋಗ್ರಾಂ ಮತ್ತು ಕೆನಡಿಯನ್ ಅನುಭವ ವರ್ಗದ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಎಂದು ವಲಸೆ ಸಚಿವ ಸೀನ್ ಫ್ರೇಸರ್ ಟ್ವಿಟರ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ. 

Written by - Bhavishya Shetty | Last Updated : Jul 6, 2022, 02:30 PM IST
  • ವಲಸೆ ಸೇವೆಗಳ ಮೇಲಿನ ನಿರ್ಬಂಧ ತೆಗೆದುಹಾಕಿದ ಕೆನಡಾ
  • ಶಾಶ್ವತ ನಿವಾಸಕ್ಕಾಗಿ ಅರ್ಜಿ ಸಲ್ಲಿಸಲು ಆಹ್ವಾನ
  • ಬೃಹತ್ ಪ್ರಕ್ರಿಯೆ ವಿಳಂಬ ನಿಭಾಯಿಸಲು ಹೊಸ ಕಾರ್ಯಪಡೆ
ಎಕ್ಸ್‌ಪ್ರೆಸ್ ಎಂಟ್ರಿ ಡ್ರಾ ಪುನಾರಂಭ: ವಲಸೆ ಸೇವೆಗಳ ನಿರ್ಬಂಧ ತೆಗೆದುಹಾಕಲು ಕೆನಡಾ ನಿರ್ಧಾರ title=
Express Entry Draw Reopens

ಕೆನಡಾ ತನ್ನ ವಲಸೆ ಸೇವೆಗಳ ಮೇಲಿನ ನಿರ್ಬಂಧವನ್ನು ತೆಗೆದುಹಾಕಲು ನಿರ್ಧರಿಸಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಎಲ್ಲಾ ಎಕ್ಸ್‌ಪ್ರೆಸ್ ಎಂಟ್ರಿ ಡ್ರಾಗಳು ಜುಲೈ 6 ರಿಂದ ಪುನರಾರಂಭಗೊಳ್ಳಲಿವೆ ಎಂದು ದೇಶವು ಘೋಷಿಸಿದೆ. 

ಇದನ್ನೂ ಓದಿ: ಸಿಎಂ ಆದ ಬಳಿಕ ಮೊದಲ ಬಾರಿಗೆ ಥಾಣೆಗೆ ಆಗಮಿಸಿದ ಏಕನಾಥ್ ಶಿಂಧೆ: ಪತ್ನಿಯಿಂದ ಅದ್ಧೂರಿ ಸ್ವಾಗತ

ಜುಲೈ 6ರಿಂದ ಅರ್ಹ ಅಭ್ಯರ್ಥಿಗಳನ್ನು ಈ ಕೆಳಗಿನ ಕಾರ್ಯಕ್ರಮಗಳಿಂದ ಶಾಶ್ವತ ನಿವಾಸಕ್ಕಾಗಿ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗುತ್ತದೆ:

ಫೆಡರಲ್ ಸ್ಕಿಲ್ಡ್ ವರ್ಕರ್ ಪ್ರೋಗ್ರಾಂ, ಫೆಡರಲ್ ಸ್ಕಿಲ್ಡ್ ಟ್ರೇಡ್ಸ್ ಪ್ರೋಗ್ರಾಂ ಮತ್ತು ಕೆನಡಿಯನ್ ಅನುಭವ ವರ್ಗದ ಮೂಲಕ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಎಂದು ವಲಸೆ ಸಚಿವ ಸೀನ್ ಫ್ರೇಸರ್ ಟ್ವಿಟರ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ. 

ಈ ಬೃಹತ್ ಪ್ರಕ್ರಿಯೆ ವಿಳಂಬವನ್ನು ನಿಭಾಯಿಸಲು ಕೆನಡಾ ಸರ್ಕಾರವು ಹೊಸ ಕಾರ್ಯಪಡೆಯನ್ನು ರಚಿಸಿದೆ. ಸದ್ಯ ದೇಶದಲ್ಲಿ 2.4 ಮಿಲಿಯನ್ ಜನರ ವಲಸೆ ಬ್ಯಾಕ್‌ಲಾಗ್ ಇದೆ ಎಂದು ತಿಳಿದುಬಂದಿದೆ. ಕಳೆದ ತಿಂಗಳು, ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಈ ವಿಳಂಬದ ಕುರಿತು ಮಾತನಾಡಿದ್ದು, ಈ ಪ್ರಕ್ರಿಯೆಯನ್ನುನಿಭಾಯಿಸಲು ಹೊಸ ಕಾರ್ಯಪಡೆಯನ್ನು ಘೋಷಿಸಿದ್ದರು. 

ಇದನ್ನೂ ಓದಿ: 7th pay commission : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ , ಮಹತ್ವದ ಘೋಷಣೆ

"ಇತ್ತೀಚಿನ ತಿಂಗಳುಗಳಲ್ಲಿ ಸೇವಾ ಪ್ರಕ್ರಿಯೆಯು ವಿಳಂಬವಾಗುತ್ತಿದ್ದು, ಇದು ಸ್ವೀಕಾರಾರ್ಹವಲ್ಲ ಎಂದು ನಮಗೆ ತಿಳಿದಿದೆ. ಈ ಪ್ರಕ್ರಿಯೆಯನ್ನು ಸುಧಾರಿಸಲು ನಾವು ಕ್ರಮಕೈಗೊಂಡಿದ್ದೇವೆ. ಈ ಸೇವೆಗಳು ಸಮರ್ಥ ಮತ್ತು ಸಮಯೋಚಿತ ರೀತಿಯಲ್ಲಿ, ಕೆನಡಿಯನ್ನರ ಬದಲಾಗುತ್ತಿರುವ ಅಗತ್ಯಗಳನ್ನು ಉತ್ತಮವಾಗಿ ಪೂರೈಸಲು, ಅಗತ್ಯವಿರುವ ಮತ್ತು ಅರ್ಹವಾದ ಉನ್ನತ ಗುಣಮಟ್ಟದ ಸೇವೆಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಈ ಹೊಸ ಕಾರ್ಯಪಡೆಯು ಸರ್ಕಾರದ ಕೆಲಸವನ್ನು ಮಾರ್ಗದರ್ಶನ ಮಾಡಲು ಸಹಾಯ ಮಾಡುತ್ತದೆ" ಎಂದರು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News