ವಾಷಿಂಗ್ಟನ್ (ಯುಎಸ್) : ನ್ಯೂಜೆರ್ಸಿಯ ಎಡಿಸನ್ ಸಿಟಿಯಲ್ಲಿರುವ ತಮ್ಮ ಮನೆಯಲ್ಲಿ ಭಾರತೀಯ-ಅಮೆರಿಕನ್ ಕುಟುಂಬವೊಂದು ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ಗಾತ್ರದ ಪ್ರತಿಮೆಯನ್ನು ಸ್ಥಾಪಿಸಿದೆ. ಎಡಿಸನ್ ಸಿಟಿಯನ್ನು ಸಾಮಾನ್ಯವಾಗಿ ಲಿಟಲ್ ಇಂಡಿಯಾ ಎಂದು ಕರೆಯಲಾಗುತ್ತಿತ್ತು. ಇದು ಗಮನಾರ್ಹವಾದ ದೊಡ್ಡ ಭಾರತೀಯ-ಅಮೆರಿಕನ್ ಜನಸಂಖ್ಯೆಯ ನೆಲೆಯಾಗಿದೆ. ಎಡಿಸನ್‌ನಲ್ಲಿರುವ ರಿಂಕು ಮತ್ತು ಗೋಪಿ ಸೇಠ್ ಅವರ ಮನೆಯ ಹೊರಗೆ ಸುಮಾರು 600 ಜನರು ಜಮಾಯಿಸಿದ್ದರು. ಪ್ರತಿಮೆಯನ್ನು ಔಪಚಾರಿಕವಾಗಿ ಪ್ರಸಿದ್ಧ ಸಮುದಾಯದ ನಾಯಕ ಆಲ್ಬರ್ಟ್ ಜಸಾನಿ ಅವರು ಅನಾವರಣಗೊಳಿಸಿದರು. ಬಿಗ್ ಬಿ ಅವರ ಈ ಪ್ರತಿಮೆಯನ್ನು ದೊಡ್ಡ ಗಾಜಿನ ಪೆಟ್ಟಿಗೆಯೊಳಗೆ ಇರಿಸಲಾಗಿದೆ. ಪ್ರತಿಮೆ ಅನಾವರಣ ಸಮಾರಂಭವೂ ಅದ್ಧೂರಿಯಾಗಿ ನಡೆಯಿತು. ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಅಮೆರಿಕದಲ್ಲಿರುವ ಬಿಗ್ ಬಿ ಅಭಿಮಾನಿಗಳು ಸಂಭ್ರಮಿಸಿದರು.
ಇದನ್ನೂ ಓದಿ: ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್' ಭಾರಿ ಹವಾ..!
"ಅವರು ನನಗೆ ಮತ್ತು ನನ್ನ ಹೆಂಡತಿಗೆ ದೇವರಂತೆ" ಎಂದು ಇಂಟರ್ನೆಟ್ ಭದ್ರತಾ ಇಂಜಿನಿಯರ್ ಆಗಿರುವ ಗೋಪಿ ಸೇಠ್ ಪಿಟಿಐಗೆ ತಿಳಿಸಿದ್ದಾರೆ. "ಅವರ ಬಗ್ಗೆ ನನಗೆ ಸ್ಫೂರ್ತಿ ನೀಡುವ ದೊಡ್ಡ ವಿಷಯವೆಂದರೆ ರೀಲ್ ಜೀವನ ಮಾತ್ರವಲ್ಲ, ನಿಜ ಜೀವನವೂ ಆಗಿದೆ. ಅವರು ಸಾರ್ವಜನಿಕವಾಗಿ ಹೇಗೆ ತಮ್ಮನ್ನು ತಾವು ನಿರ್ವಹಿಸುತ್ತಾರೆ, ಬೇರೆಯವರ ಜೊತೆ ಹೇಗೆ ಸಂವಹನ ಮಾಡುತ್ತಾರೆ ಎಲ್ಲವೂ ನಿಮಗೆ ತಿಳಿದಿದೆ. ಅಮಿತಾಬ್ ತುಂಬಾ ಡೌನ್ ಟು ಅರ್ಥ್ ಆಗಿದ್ದಾರೆ. ಅವರು ತಮ್ಮ ಅಭಿಮಾನಿಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರು ಇತರ ಅನೇಕ ಸ್ಟಾರ್‌ಗಳಂತಲ್ಲ. ಅದಕ್ಕಾಗಿಯೇ ನಾನು ನನ್ನ ಮನೆಯ ಹೊರಗೆ ಅವರ ಪ್ರತಿಮೆ ಇಡಬೇಕೆಂದು ಭಾವಿಸಿದೆ" ಎಂದು ಸೇಠ್ ಹೇಳಿದರು.
👆🏻👆🏻On Saturday august 27th we have placed @SrBachchan statue 👆🏻👆🏻👆🏻👆🏻at outside in the front of our new home in edison NJ USA . Lots of Mr Bachchan’s fan’s participated on Mr Bachchan’s staue inoguration ceremony. pic.twitter.com/O3RklFS5eZ
— Gopi EFamily (@GopiSheth) August 28, 2022
1990 ರಲ್ಲಿ ಪೂರ್ವ ಗುಜರಾತ್‌ನ ದಾಹೋಡ್‌ನಿಂದ ಯುಎಸ್‌ಗೆ ಆಗಮಿಸಿದ ಸೇಠ್, ಕಳೆದ ಮೂರು ದಶಕಗಳಿಂದ "ಬಿಗ್ ಬಿ ಎಕ್ಸ್‌ಟೆಂಡೆಡ್ ಫ್ಯಾಮಿಲಿ" ಗಾಗಿ ವೆಬ್‌ಸೈಟ್ www.BigBEFamily.com ಅನ್ನು ನಡೆಸುತ್ತಿದ್ದಾರೆ. ವೆಬ್‌ಸೈಟ್, ಇತರ ವಿಷಯಗಳ ಜೊತೆಗೆ, ಅಮಿತಾಬ್ ಬಚ್ಚನ್ ಅವರ ಜಾಗತಿಕ ಅಭಿಮಾನಿಗಳ ಭಂಡಾರವಾಗಿದೆ ಎಂದು ಅವರು ಹೇಳಿದರು. ಡೇಟಾಬೇಸ್ ಅನ್ನು 79 ವರ್ಷದ ಬಾಲಿವುಡ್ ಸೂಪರ್‌ಸ್ಟಾರ್‌ನೊಂದಿಗೆ ಹಂಚಿಕೊಳ್ಳಲಾಗಿದೆ.
ಸೇಠ್ ಪ್ರಕಾರ, ಬಚ್ಚನ್ ಪ್ರತಿಮೆಯ ಬಗ್ಗೆ ತಿಳಿದಿದ್ದಾರೆ. ಈ ರೀತಿಯ ವಿಚಾರಗಳಿಗೆ ತಾಔಉ ಅರ್ಹರಲ್ಲ ಎಂದು ಅಮಿತಾಬ್ ಹೇಳಿದರು ಎಂದು ಸೇಠ್ ಹೇಳಿದ್ದಾರೆ. ಬಚ್ಚನ್ ಅವರ "ಕೌನ್ ಬನೇಗಾ ಕರೋಡಪತಿ" ಮೋಡ್‌ನಲ್ಲಿ ಕುಳಿತಿರುವ ಪ್ರತಿಮೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ರಾಜಸ್ಥಾನದಲ್ಲಿ ತಯಾರಿಸಲಾಗಿದೆ. ಭಾರತದಲ್ಲಿ ಸಿದ್ಧಗೊಂಡ ಈ ಪ್ರತಿಮೆಯನ್ನು ಬಳಿಕ ಯುನೈಟೆಡ್ ಸ್ಟೇಟ್ಸ್‌ಗೆ ರವಾನಿಸಲಾಗಿದೆ. ಇದಕ್ಕಾಗಿ ಸೇಠ್ USD75,000 (ಸುಮಾರು ರೂ 60 ಲಕ್ಷ) ಗಿಂತ ಹೆಚ್ಚು ವೆಚ್ಚ ಮಾಡಿದ್ದಾರೆ.
ಇದನ್ನೂ ಓದಿ: Pakistan Flood: ಪ್ರವಾಹದಿಂದ 1000 ಕ್ಕೂ ಹೆಚ್ಚು ಜನರ ಸಾವು : ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
1991 ರಲ್ಲಿ ನ್ಯೂಜೆರ್ಸಿಯಲ್ಲಿ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಅವರು ಅಮಿತಾಬ್ ಬಚ್ಚನ್ ಅವರನ್ನು ಮೊದಲ ಬಾರಿಗೆ ಭೇಟಿಯಾದರಂತೆ. ಅಂದಿನಿಂದ ಅವರು ದೊಡ್ಡ ಅಭಿಮಾನಿಯಾಗಿದ್ದಾರೆ. ಅವರು ಯುಎಸ್ ಮತ್ತು ಜಾಗತಿಕವಾಗಿ ಬಿಗ್ ಬಿ ಅಭಿಮಾನಿಗಳನ್ನು ಸಂಘಟಿಸುತ್ತಿದ್ದಾರೆ ಎಂದು ಸೇಠ್ ಹೇಳಿದ್ದಾರೆ. ಅದು ನಂತರ ವೆಬ್‌ಸೈಟ್ ಆಗಿ ಮಾರ್ಪಟ್ಟಿದೆ. ಬಚ್ಚನ್ ಸಾಹೇಬ್ ಅವರು ತಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ತಮ್ಮ ವಿಸ್ತೃತ ಕುಟುಂಬ ಎಂದು ಕರೆಯುತ್ತಾರೆ ಎಂದು ಸೇಠ್ ಹೇಳಿದ್ದಾರೆ. ಯುಎಸ್‌ನಲ್ಲಿ ಪ್ರತಿಮೆಯನ್ನು ಸ್ಥಾಪಿಸುವುದು ಬಹಳಷ್ಟು ಸವಾಲುಗಳೊಂದಿಗೆ ಬರುತ್ತದೆ ಮತ್ತು ಇದು ಇತರರಿಗಿಂತ ಹೆಚ್ಚು ಕಷ್ಟಕರವಾಗಿತ್ತು ಎಂದು ಸೇಠ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.