Darshan Stroke: ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಸದ್ಯ ಬಳ್ಳಾರಿ ಜೈಲಿನಲ್ಲಿ ಇರುವ ದಾಸನ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಆದ್ಯಾವಾಗ ಜೈಲಿನಿಂದ ಹೊರಬರುತ್ತಾರೆ ಎಂದು ಎದುರು ನೋಡುತ್ತಿದ್ದಾರೆ.
1/7Darshan Stroke: ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಸದ್ಯ ಬಳ್ಳಾರಿ ಜೈಲಿನಲ್ಲಿ ಇರುವ ದಾಸನ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಆದ್ಯಾವಾಗ ಜೈಲಿನಿಂದ ಹೊರಬರುತ್ತಾರೆ ಎಂದು ಎದುರು ನೋಡುತ್ತಿದ್ದಾರೆ.
2/7ಬಳ್ಳಾರಿ ಜೈಲಿನಲ್ಲಿ ಶಿಕ್ಟೆ ಅನುಭಾವಿಸುತ್ತಿರುವ ದಾಸನಿಗೆ ತೀವ್ರವಾದ ಬೆನ್ನು ನೋವು ಕಾಡುತ್ತಿದೆ. ಇದಕ್ಕಾಗಿ ದಾಸ ಒಂದೆರೆಡುದಿನಗಳ ಹಿಂದೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಕೂಡ ಪಡೆದುಕೊಂಡು ಹೊರಬಂದಿದ್ದಾರೆ.
3/7ಈ ನಡುವೆ ದರ್ಶನ್ ಅವರ ಬೇಲ್ ವಿಚಾರಣೆ ಇಂದು ನಡೆಯಲಿದೆ, ಒಂದು ಕಡೆ ದಾಸನಿಗೆ ತಮ್ಮ ಅಭಿಮಾನಿಗಳೊಂದಿಗೆ ದೀಪಾವಳಿ ಹಬ್ಬ ಆಚರಿಸಿಕೊಳ್ಳುವ ಅವಕಾಶ ಸಿಗುತ್ತಾ ಅಥವಾ ಮತ್ತೆ ನಿರಾಶೆ ಎದುರಾಗುತ್ತಾ ಎನ್ನುವ ಕುತೂಹಲಕ್ಕೆ ಇಂದು ವಿಚಾರಣೆ ನಡೆದ ಮೇಲೆ ತೀರ್ಪು ಸಿಗಲಿದೆ.
4/7ಇದರ ಮಧ್ಯೆ ವೈದ್ಯರು ದರ್ಶನ್ ಅವರ ಆರೋಗ್ಯದ ಕುರಿತು ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹೌದು, ನಟ ದರ್ಶನ್ ಅವರಿಗೆ ಸ್ಟ್ರೋಕ್ ಹೊಡೆಯುವ ಸಾಧ್ಯತೆ ಇದೆ ಎಂದು ವಾದಗಳು ನಡೆಯುತ್ತಿದೆ.
5/7ಸದ್ಯ ತೀವ್ರವಾದ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರಿಗೆ, ಎಂಆರ್‌ಐ, ಸಿಟಿ ಸ್ಕ್ಯಾನ್ ಮಾಡಲಾಗಿದೆ, ಈ ಟೆಸ್ಟ್ ಮಾಡಿದ ವೈದ್ಯರ ದರ್ಶನ್ ಅವರ ಆರೋಗ್ಯದ ಕುರಿತು ಮೂರು ಪ್ರಮುಕ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.
6/7ಸದ್ಯ ವೈದ್ಯರು ದರ್ಶನ್ ಅವರ ಕುಟುಂಬಸ್ಥರಿಗೆ ಹೇಳಿರುವುದೇನೆಂದರೆ, ದರ್ಶನ್ ಅವರಿಗೆ ನಂಬ್‌ನೆಸ್ ಇದೆ ಅವರಿಗೆ ಸರಿಯಾಗಿ ರಕ್ತಪರಿಚಲನೆ ಆಗುತ್ತಿಲ್ಲ. ಇದರಿಂದಾಗ ಅವರ ಕಿಡ್ನಿಗೂ ಸಹ ಸಮಸ್ಯೆಯಾಗಬಹುದು. ತಕ್ಷಣ ಸರ್ಜರಿ ಮಾಡಲೇಬೇಕು, ಇಲ್ಲವಾದಲ್ಲಿ ನಟ ದರ್ಶನ್ ಅವರ ಕಾಲಿಗೆ ಲಕ್ವಾ ಹೊಡೆಯಲಿದೆ ಎಂದು ವೈದ್ಯರು ಸೂಚಿಸಿದ್ದಾರೆ.
7/7ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನಿಗೆ ಬೇಲ್ ಸಿಗುತ್ತಾ ಅಥವಾ ಇಲ್ವಾ ಎನ್ನುವ ಚಿಂತೆ ಒಂದು ಕಡೆಯಾದರೆ, ತಮ್ಮ ದಾಸನ ಪರಿಸ್ಥಿತಿ ಹೀಗಾಯಿತಲ್ಲಾ ಎಂದು ಅವರ ಆರೋಗ್ಯ ಸಮಸ್ಯೆಯ ಕುರಿತು ಚಿಂತಿತರಾಗಿದ್ದಾರೆ.