ಒಂದು ವರ್ಷದ ಬಳಿಕ ತುಲಾ ರಾಶಿಯಲ್ಲಿ ಮಂಗಳ-ಸೂರ್ಯರ ಮೈತ್ರಿ, ಈ ಜನರಿಗೆ ಧನಕುಬೇರ ಯೋಗ ಪ್ರಾಪ್ತಿಯಿಂದ ಅಪಾರ ಧನಲಾಭ!

Sun Mars Conjunction In Libra 2023: ವೈದಿಕ ಪಂಚಾಂಗದ ಪ್ರಕಾರ ಬರುವ ಅಕ್ಟೋಬರ್ 18 ರಂದು ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯನ ತುಲಾ ಗೋಚರ ನೆರವೇರಲಿದೆ. ಇದರಿಂದ ಈಗಾಗಲೇ ತುಲಾ ರಾಶಿಯಲ್ಲಿ ಮಂಗಳ ಇರುವ ಕಾರಣ ಅಲ್ಲಿ ಸೂರ್ಯ-ಮಂಗಳರ ಮೈತ್ರಿ ನೆರವೇರಲಿದೆ. ಇದರಿಂದ ಮೂರು ರಾಶಿಗಳ ಜನರಿಗೆ ಧನಕುಬೇರ ಯೋಗ ಪ್ರಾಪ್ತಿಯಾಗಿ ಅವರ ಜೀವನದಲ್ಲಿ ಒಳ್ಳೆಯ ಕಾಲ ಆರಂಭಗೊಳ್ಳಲಿದೆ. Spiritual News In Kannada

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಒಂದು ನಿರ್ಧಿಷ್ಟವಾದ ಕಾಲಾಂತರದಲ್ಲಿ ತಮ್ಮ ತಮ್ಮ ರಾಶಿಗಳನ್ನು ಪರಿವರ್ತಿಸಿ ಇತರ ಗ್ರಹಗಳ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳುತ್ತವೆ. ಈ ಮೈತ್ರಿಗಳ ಪ್ರಭಾವ ದ್ವಾದಶ ರಾಶಿಗಳು ಸೇರಿದಂತೆ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತವೆ. ಪ್ರಸ್ತುತ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ಬರುವ ಅಕ್ಟೋಬರ್ 18, 2023 ರಂದು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಆದರೆ, ತುಲಾ ರಾಶಿಯಲ್ಲಿ ಈಗಾಗಲೇ ಮಂಗಳ ವಿರಾಜಮಾನನಾಗಿರುವ ಕಾರಣ, ಅಲ್ಲಿ ಸೂರ್ಯ-ಮಂಗಳರ ಮೈತ್ರಿ ರೂಪುಗೊಳ್ಳಲಿದೆ. ಈ ಯುತಿ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಅದರಲ್ಲಿಯೂ ವಿಶೇಷವಾಗಿ 3 ರಾಶಿಗಳ ಜನರಿಗೆ ಈ ಅವಧಿಯಲ್ಲಿ ಆಕಸ್ಮಿಕ ಧನಲಾಭ ಹಾಗೂ ವೃತ್ತಿಜೀವನದಲ್ಲಿ ಉನ್ನತಿಯ ಯೋಗವನ್ನು ಇದು ತಂದುಕೊಡಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೂ ತಿಳಿದುಕೊಳ್ಳೋಣ, Spiritual News In Kannada

 

ಇದನ್ನೂ ಓದಿ-ಏಳು ದಿನಗಳ ಬಳಿಕ ಸೂರ್ಯನಿಂದ ನೀಚ್ ಭಂಗ್ ರಾಜಯೋಗ ನಿರ್ಮಾಣ, ಈ ರಾಶಿಗಳ ಜನರ ಧನ-ಸಂಪತ್ತಿನಲ್ಲಿ ಅಪಾರ ವೃದ್ಧಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

Sun Mars Conjunction In Libra 2023: ವೈದಿಕ ಪಂಚಾಂಗದ ಪ್ರಕಾರ ಬರುವ ಅಕ್ಟೋಬರ್ 18 ರಂದು ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯನ ತುಲಾ ಗೋಚರ ನೆರವೇರಲಿದೆ. ಇದರಿಂದ ಈಗಾಗಲೇ ತುಲಾ ರಾಶಿಯಲ್ಲಿ ಮಂಗಳ ಇರುವ ಕಾರಣ ಅಲ್ಲಿ ಸೂರ್ಯ-ಮಂಗಳರ ಮೈತ್ರಿ ನೆರವೇರಲಿದೆ. ಇದರಿಂದ ಮೂರು ರಾಶಿಗಳ ಜನರಿಗೆ ಧನಕುಬೇರ ಯೋಗ ಪ್ರಾಪ್ತಿಯಾಗಿ ಅವರ ಜೀವನದಲ್ಲಿ ಒಳ್ಳೆಯ ಕಾಲ ಆರಂಭಗೊಳ್ಳಲಿದೆ. Spiritual News In Kannada

2 /5

ಸಿಂಹ ರಾಶಿ: ಸೂರ್ಯ-ಮಂಗಳರ ಈ ಮೈತ್ರಿ ಯೋಗ ನಿಮ್ಮ ಜಾತಕದ ತೃತೀಯ ಭಾವದಲ್ಲಿ ರೂಪುಗೊಳ್ಳಲಿದೆ. ಇದರಿಂದ ಈ ಮೈತ್ರಿ ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮದಲ್ಲಿ ಅಪಾರ ಹೆಚ್ಚಳವಾಗುವ ಸಾಧ್ಯತೆ ಇದೆ. ಇದಲ್ಲದೆ ಶತ್ರುಗಳ ಮೇಲೆ ಜಯ ಸಾಧಿಸುವಲ್ಲಿ ನೀವು ಯಶಸ್ಸನ್ನು ಕಾಣುವಿರಿ. ಕುಟುಂಬ ಸದಸ್ಯರ ನಡುವೆ ಐಕ್ಯತೆ ಹೆಚ್ಚಾಗಲಿದೆ. ವಿದೇಶಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದವರಿಗೆ ಈ ಸಮಯ ಅತ್ಯಂತ ಶುಭವಾಗಿರಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಬಂಧು-ಮಿತ್ರರ ಸಹಾಯ ಕೂಡ ಸಿಗಲಿದೆ. 

3 /5

ಧನು ರಾಶಿ: ಸೂರ್ಯ ಮಂಗಳರ ಈ ಯುತಿ ಧನು ರಾಶಿಯ ಜಾತಕದವರಿಗೆ ಅಪಾರ ಅನುಳೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ಲಾಭ ಹಾಗೂ ಆದಾಯ ಎರಡೂ ಭಾಗಗಳಲ್ಲಿ ರಚನೆಯಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳವನ್ನು ನೀವು ಕಾಣುವಿರಿ. ಆದಾಯದ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಲಿವೆ. ವಿದೇಶಕ್ಕೆ ಹೋಗಬಯಸುವವರ ಆಸೆ ಈಡೇರಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಹಳೆ ಹೂಡಿಕೆಗಳಿಂದ ಅಪಾರ ಲಾಭ ಸಿಗಲಿದೆ. ಮಕ್ಕಳಿಗೆ ಸಂಬಂಧಿಸಿದ ಯಾವುದಾದರೊಂದು ಗುಡ್ ನ್ಯೂಸ್ ನಿಮಗೆ ಸಿಗಲಿದೆ. ಷೇರುಪೇಟೆ, ಲಾಟರಿಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಸಮಯ ಅನುಕೂಲಕರವಾಗಿದೆ. 

4 /5

ಕನ್ಯಾ ರಾಶಿ: ಕನ್ಯಾ ರಾಶಿಯ ಜಾತಕದವರಿಗೆ ಈ ಯುತಿ ಸಾಕಷ್ಟು ಲಾಭಗಳನ್ನು ತಂದುಕೊಡಲಿದೆ. ಏಕೆಂದರೆ ಈ ಯುತಿ ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ರಚನೆಯಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಎಲ್ಲಿಂದಲೋ ಬರಬೇಕಾದ ನಿಮ್ಮ ಹಣ ನಿಮ್ಮ ಕೆಸೇರುವ ಸಾಧ್ಯತೆ ಇದೆ. ನೌಕರವರ್ಗದ ಜನರು ಕಚೇರಿಯಲ್ಲಿ ತಮ್ಮ ವಿಶೇಷ ಛಾಪು ಮೂಡಿಸುವಲ್ಲಿ ಯಶಸ್ವಿಯಾಗುವರು. ಮೀಡಿಯಾ, ಮಾರ್ಕೆಟಿಂಗ್, ಶಿಕ್ಷಣ ಇತ್ಯಾದಿ ಕ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಈ ಸಮಯ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)