Sun Jupiter Rahu Conjunction: 12 ವರ್ಷಗಳ ಬಳಿಕ ಸೂರ್ಯ, ಗುರು ಹಾಗೂ ರಾಹುಗಳ ಮೈತ್ರಿ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ!

Sun-Jupiter-Rahu Conjunction: ಜೋತಿಷ್ಯ ಶಾಸ್ತ್ರದ ಪ್ರಕಾರ 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಸೂರ್ಯ-ರಾಹು ಹಾಗೂ ಗುರುವಿನ ಮೈತ್ರಿ ನೆರೆವೆರಲಿದೆ. ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಆದರೆ, ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರ ಮೇಲೆ ಇದು ಭಾರಿ ಸಕಾರಾತ್ಮಕ ಪ್ರಭಾವ ಬೀರಲಿದೆ. ಈ ಮೂರು ರಾಶಿಗಳ ಜನರ ಜೀವನದಲ್ಲಿ ಅಪಾರ ಧನ ಪ್ರಾಪ್ತಿಯಾಗಿ ಅವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. 
 

Sun-Jupiter-Rahu Conjunction In Aries: ಜೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿನ ಪ್ರತಿಯೊಂದು ಗ್ರಹ ಒಂದು ನಿರ್ಧಿಷ್ಟ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸುವ ಮೂಲಕ ಪರಸ್ಪರ ಮೈತ್ರಿ ಮಾಡಿಕೊಳ್ಳುತ್ತವೆ. ಗ್ರಹಗಳ ಈ ಮೈತ್ರಿ ಕೆಲ ರಾಶಿಗಳ ಜನರ ಪಾಲಿಗೆ ಶುಭ ಸಾಬೀತಾದರೇ, ಕೆಲ ರಾಶಿಗಳ ಜನರಿಗೆ ಅಶುಭ ಸಾಬೀತಾಗುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ ಗ್ರಹಗಳ ಈ ಮೈತ್ರಿ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಪ್ರಭಾವ ಬೀರುತ್ತವೆ. ಪ್ರಸ್ತುತ ಸುದೀರ್ಘ 12 ವರ್ಷಗಳ ಅವಗೀಯ ಬಳಿಕ ದೇವಗುರು ಬೃಹಸ್ಪತಿ ಮೇಷರಾಶಿಯನ್ನು ಪ್ರವೇಶಿಸಲಿದೆ.

 

ಇದನ್ನೂ ಓದಿ-Budh Vakri 2023: 10 ದಿನಗಳ ಬಳಿಕ ಈ ರಾಶಿಯ ಜನರು ಭಾರಿ ಶ್ರೀಮಂತರಾಗಲಿದ್ದಾರೆ, ವಕ್ರಿ ಬುಧನ ಕಾರಣ ತಿಜೋರಿ ಹಣದಿಂದ ತುಂಬಿ ತುಳುಕಲಿದೆ!

 

ಮೇಷರಾಶಿಯಲ್ಲಿ ಈಗಾಗಲೇ ಸೂರ್ಯ ಹಾಗೂ ರಾಹುಗಳು ಮೈತ್ರಿಯನ್ನು ಮಾಡಿಕೊಂಡಿವೆ. ಇದರಿಂದ ಏಪ್ರಿಲ್ 14 ರಿಂದ ಅಲ್ಲಿ ಗ್ರಹಣ ದೋಷ ನಿರ್ಮಾಣಗೊಂಡಿದೆ. ಇದನ್ನು ಅತ್ಯಂತ ಅಶುಭ ಎಂದು ಭಾವಿಸಲಾಗುತ್ತದೆ. ಆದರೆ ಇದೀಗ ಈ ಮೈತ್ರಿಗೆ ಗುರುವಿನ ಎಂಟ್ರಿಯಾಗುತ್ತಿದ್ದು, 3 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Gajkesari Yog: ಏಪ್ರಿಲ್ 17 ರಂದು ನಿರ್ಮಾಣಗೊಳ್ಳುತ್ತಿದೆ ಗಜಕೇಸರಿ ಯೋಗ,4 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮೇಷ ರಾಶಿ: ಸೂರ್ಯ, ಗುರು ಹಾಗೂ ರಾಹುವಿನ ಮೈತ್ರಿ ಮೇಷ ರಾಶಿಯಲ್ಲಿಯೇ ನೆರವೇರುತ್ತಿರುವ ಕಾರಣ  ಮೇಷ ರಾಶಿಯ ಜನರ ಪಾಲಿಗೆ ಅತ್ಯಂತ ಶುಭ ಸಿದ್ಧ ಸಾಬೀತಾಗಲಿದೆ. ಈ ಮೈತ್ರಿ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರಿಂದ ನಿಮಗೆ ನಿಮ್ಮ ಜೀವನಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳಲು ಸುಲಭವಾಗಲಿದೆ. ವೃತ್ತಿಜೀವನದಲ್ಲಿ ಅತ್ಯುತ್ತಮ ಅವಕಾಶ ನಿಮ್ಮ ಬಳಿ ನಡೆದುಕೊಂಡು ಬರಲಿದೆ. ನೌಕರಿ ಮಾಡುವವರಿಗೆ ಅತ್ಯುತ್ತಮ ಇಂಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ. ಅವಿವಾಹಿತರ ಸಂಬಂಧ ಕೂಡಿಬರಲಿದೆ. ಈ ಅವಧಿಯಲ್ಲಿ ನಿಮ್ಮ ಹಲವು ಯೋಜನೆಗಳು ಯಶಸ್ವಿಯಾಗಲಿವೆ. ಇನ್ನೊಂದೆಡೆ ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೈತನ್ಯ, ಹುರುಪು, ಹೊಳಪು ಕಾಣಿಸಿಕೊಳ್ಳಲಿದೆ.   

2 /3

ಕರ್ಕ ರಾಶಿ: ಗುರು, ರಾಹು, ಸೂರ್ಯನ ಈ ಮೈತ್ರಿ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿ ನಿಮ್ಮ ಗೋಚರ ಜಾತಕದ ಕರ್ಮಭಾವದಲ್ಲಿ ರೂಪುಗೊಳ್ಳುತ್ತಲಿದೆ. ಈ ಅವಧಿಯಲ್ಲಿ ವ್ಯಾಪಾರ ವರ್ಘದ ಜನರಿಗೆ ಭಾರಿ ಧನಲಾಭವಾಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಒದಗಿ ಬರುವ ಸಾಧ್ಯತೆ ಇದೆ. ನೌಕರವರ್ಗದವರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಒದಗಿ ಬರಲಿವೆ. ಈ ಅವಧಿಯಲ್ಲಿ ನಿಮಗೆ ತಂದೆಯಿಂದ ಬೆಂಬಲ ಸಿಗಲಿದೆ. ಆದರೆ, ಪ್ರಸ್ತುತ ನಿಮ್ಮ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟ ನಡೆಯುತ್ತಿರುವ ಕಾರಣ. ಶನಿಯ ಆರಾಧನೆ ನಿಮಗೆ ಕೊಂಚ ನೆಮ್ಮದಿಯನ್ನು ನೀಡಲಿದೆ.  

3 /3

ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರ ಪಾಲಿಗೆ ಸೂರ್ಯ, ಗುರು ಹಾಗೂ ರಾಹುವಿನ ಈ ಮೈತ್ರಿ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿ ನಿಮ್ಮ ಗೋಚರ ಜಾತಕದ ಅದೃಷ್ಟ ಭಾವದಲ್ಲಿ ನಿರ್ಮಾಣಗೊಳ್ಳುತ್ತಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಭಾರಿ ಬೆಂಬಲ ಸಿಗಲಿದೆ. ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನೀವು ಬಯಸುವ ಕೆಲಸ ಮಾಡುವ ಅವಕಾಶ ನಿಮಗೆ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನೀವು ಅಪಾರ ಹಣ ಉಳಿತಾಯ ಮಾಡುವಿರಿ. ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಈ ಮೈತ್ರಿಯಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. ಧಾರ್ಮಿಕ ಕಾರ್ಯಗಳ ಪ್ರತಿ ನಿಮ್ಮ ಅಭಿರುಚಿ ಹೆಚ್ಚಾಗಲಿದೆ.  (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)