'ಮಲಾಂಗ್' ಬಿಡುಗಡೆಗೂ ಮುನ್ನ HOT ಲುಕ್‍‍ನಲ್ಲಿ ದಿಶಾ

ಚಲನಚಿತ್ರ ನಿರ್ದೇಶಕ ಮೋಹಿತ್ ಸೂರಿ ಅವರ ಬಹುನಿರೀಕ್ಷಿತ ರೊಮ್ಯಾಂಟಿಕ್ ಮತ್ತು ಆಕ್ಷನ್ ಥ್ರಿಲ್ಲರ್ ಚಿತ್ರ 'ಮಲಾಂಗ್' ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್ ಜೊತೆ ದಿಶಾ ಕಾಣಿಸಿಕೊಳ್ಳಲಿದ್ದಾರೆ.

Yashaswini V | Jan 24, 2020, 12:59 PM IST

ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ 'ಭಾರತ್' ಚಿತ್ರದ ನಂತರ ದಿಶಾ ಪಟಾನಿಯವರ ಅಭಿಮಾನಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಈಗ ದಿಶಾ ಶೀಘ್ರದಲ್ಲೇ ಆದಿತ್ಯ ರಾಯ್ ಕಪೂರ್ ಜೊತೆ ಚಿತ್ರ ನಿರ್ದೇಶಕ ಮೋಹಿತ್ ಸೂರಿ ಅವರ ರೋಮ್ಯಾಂಟಿಕ್ ಮತ್ತು ಆಕ್ಷನ್ ಥ್ರಿಲ್ಲರ್ ಚಿತ್ರ 'ಮಲಂಗ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈಗ 'ಮಲಾಂಗ್' ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ದಿನಗಳಲ್ಲಿ ಅವರ ಕೆಲವು ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 

1/6

ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು

ಬಾಲಿವುಡ್ ನಟಿ ದಿಶಾ ಪಟಾಣಿ ಅವರ ಕೆಲವು ಚಿತ್ರಗಳು ಈ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.

2/6

ಈ ದಿನ ರಿಲೀಸ್ ಆಗಲಿದೆ ಚಿತ್ರ

ದಿಶಾ ಪಟಾಣಿಯವರ 'ಮಲಾಂಗ್' ಚಿತ್ರ ಫೆಬ್ರವರಿ 7ರಂದು ತೆರೆಕಾಣಲು ಸಿದ್ಧವಾಗಿದೆ.

3/6

ಆದಿತ್ಯ ಮತ್ತು ಅನಿಲ್ ಕಪೂರ್ ಕೂಡ ಕಾಣಿಸಿಕೊಳ್ಳಲಿದ್ದಾರೆ

ಈ ಸಿನಿಮಾದಲ್ಲಿ ದಿಶಾ ಪಟಾಣಿ ಅವರೊಂದಿಗೆ ಆದಿತ್ಯ ರಾಯ್ ಕಪೂರ್ ಮತ್ತು ಅನಿಲ್ ಕಪೂರ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

4/6

ಚಿತ್ರದ ಶೂಟಿಂಗ್

ಚಿತ್ರದ ಹೆಚ್ಚಿನ ಶೂಟಿಂಗ್ ಮಾರಿಷಸ್ ಮತ್ತು ಗೋವಾದಲ್ಲಿ ಪೂರ್ಣಗೊಂಡಿದೆ. ಈ ಚಿತ್ರ ಟಿ-ಸೀರೀಸ್‌ನ ಭೂಷಣ್ ಕುಮಾರ್, ಲವ್ ರಂಜನ್ ಫಿಲ್ಮ್ಸ್ ಮತ್ತು ನಾರ್ದರ್ನ್ ಲೈಟ್ಸ್ ಎಂಟರ್‌ಟೈನ್‌ಮೆಂಟ್‌ನ ಜೈ ಶೆವಕರಮನ್ ಅವರ ಸಹ-ನಿರ್ಮಾಣದಲ್ಲಿ ಮೂಡಿ ಬಂದಿದೆ.  

5/6

ಚಿತ್ರದ ಟ್ರೈಲರ್

ಇತ್ತೀಚೆಗೆ ಬಿಡುಗಡೆಯಾದ 'ಮಲಂಗ್' ಚಿತ್ರದ ಟ್ರೈಲರ್ ಇದುವರೆಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಾಬಲ್ಯ ಸಾಧಿಸಿದೆ. ಈ ಚಿತ್ರದ ಟ್ರೈಲರ್ ಅನ್ನು ಜನರು ತುಂಬಾ ಇಷ್ಟಪಡುತ್ತಾರೆ.

6/6

ದಿಶಾ-ಆದಿತ್ಯ ಜೋಡಿ

ದಿಶಾ ಮತ್ತು ಆದಿತ್ಯ ಜೋಡಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನರು ಈ ಜೋಡಿಯನ್ನು ತುಂಬಾ ಇಷ್ಟಪಡುತ್ತಿದ್ದಾರೆ. (ಫೋಟೊ ಕೃಪೆ: ಎಲ್ಲಾ ಫೋಟೋಗಳು ಯೋಗನ್ ಷಾ Social Media ಖಾತೆಯಿಂದ ತೆಗೆದುಕೊಳ್ಳಲಾಗಿದೆ)