ಆದಾಯ ತೆರಿಗೆಗೆ ಸಂಬಂಧಿಸಿದಂತೆ ಈ ಬಜೆಟ್ ನಲ್ಲಿ ಆಗಿರುವುದು ಅತಿ ದೊಡ್ಡ ಘೋಷಣೆ ಎಂದೇ ಹೇಳಬಹುದು. ಇದರ ಪ್ರಕಾರ 2023-24 ರ ಆರ್ಥಿಕ ವರ್ಷದಿಂದ ವರ್ಷಕ್ಕೆ 7 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗಿಲ್ಲ.
ಜುಲೈ 1 ರಿಂದ ದೇಶಾದ್ಯಂತ ಹೊಸ ವೇತನ ಸಂಹಿತೆಯನ್ನು ಸರ್ಕಾರ ಜಾರಿಗೊಳಿಸುವ ನಿರೀಕ್ಷೆಯಿದೆ. ಅದರ ಅನುಷ್ಠಾನದ ನಂತರ, ಕೆಲಸದ ಸಮಯ, ಟೇಕ್ ಹೋಂ ಸ್ಯಾಲರಿ ಪಿಎಫ್ ಎಲ್ಲಾ ನಿಯಮಗಳು ಕೂಡಾ ಬದಲಾಗಲಿವೆ.
ಏಪ್ರಿಲ್ 1ರಿಂದ ಜಾರಿಗೆ ಬರಬೇಕಿದ್ದು, ನಂತರ ಜುಲೈನಲ್ಲಿ ಜಾರಿಗೊಳಿಸುವ ಚರ್ಚೆ ವೇಗ ಪಡೆದುಕೊಂಡಿದ್ದು, ಅಕ್ಟೋಬರ್ 1ರಿಂದ ಜಾರಿಗೆ ತರಲು ಸಿದ್ಧತೆ ನಡೆದಿದೆ. ಈಗ ಇದು ಹೊಸ ವರ್ಷದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ.
ಯಾವುದೇ ಉದ್ಯೋಗಿಯ CTCಯಲ್ಲಿ ಮೂರರಿಂದ ನಾಲ್ಕು ಘಟಕಗಳಿವೆ. ಮೂಲ ವೇತನ, ಎಚ್ಆರ್ಎ , ರಿಟೈರನ್ ಮೆಂಟ್ ಬೆನಿಫಿಟ್ ನಂಥ ಪಿಎಫ್, ಗ್ರಾಚ್ಯುಟಿ ಮತ್ತು ಪಿಂಚಣಿ ಮತ್ತು ತೆರಿಗೆ ಉಳಿತಾಯ ಭತ್ಯೆಗಳು ಎಲ್ಟಿಎ ಮತ್ತು ಮನರಂಜನಾ ಭತ್ಯೆ ಹೀಗೆ.
New Wage Code Update: ನೂತನ ಕರಡು ನೀತಿಯ ಪ್ರಕಾರ್ 15 ರಿಂದ 30 ನಿಮಿಷಗಳ ಹೆಚ್ಚುವರಿ ಕೆಲಸವನ್ನು 30 ನಿಮಿಷಕ್ಕೆ ಪರಿಗಣಿಸಿ ಓವರ್ ಟೈಮ್ ನಲ್ಲಿ ಶಾಮೀಲುಗೊಳಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಇರುವ ನೀತಿಯಲ್ಲಿ ಈ ಸಮಯವನ್ನು ಪರಿಗಣಿಸಲಾಗುವುದಿಲ್ಲ .
ಜುಲೈ ತಿಂಗಳೊಂದಿಗೆ, ಹೊಸ ವೇತನ ಸಂಹಿತೆ (New Wages Code) ಬಗ್ಗೆ ಮತ್ತೊಮ್ಮೆ ಚರ್ಚೆಗಳು ಪ್ರಾರಂಭವಾಗಿವೆ. ಹೊಸ ವೇತನ ಸಂಹಿತೆ ಏಪ್ರಿಲ್ 1 ರಿಂದ ಜಾರಿಗೆ ಬರಬೇಕಾಗಿತ್ತು, ಆದರೆ ಕಾರ್ಮಿಕ ಸಚಿವಾಲಯ ಅದನ್ನು ಮುಂದೂಡಿತು. ಇದನ್ನು ಈಗ ಜುಲೈನಿಂದ ಜಾರಿಗೆ ತರಬಹುದ ಎನ್ನಲಾಗುತ್ತಿದ್ದು, ಒಂದು ವೇಳೆ ಇದು ಸಂಭವಿಸಿದರೆ, ಉದ್ಯೋಗಾಕಾಂಕ್ಷಿಗಳ ವೇತನ ರಚನೆಯು ದೊಡ್ಡ ಬದಲಾವಣೆಯನ್ನು ಕಾಣಬಹುದು ಎನ್ನಲಾಗುತ್ತಿದೆ.
ಕೊರೊನಾ ಎರಡನೇ ಅಲೆಯು ಈಗಾಗಲೇ ದೇಶದಲ್ಲಿ ಭೀಕರ ಪರಿಸ್ಥಿತಿಯನ್ನು ಸೃಷ್ಟಿಸಿದೆ.ಆದರೆ 2019 ರ ವೇತನ ಸಂಹಿತೆಯಡಿ ಕಾರ್ಮಿಕ ಸುಧಾರಣೆಗಳನ್ನು ಜಾರಿಗೆ ತರಲು ಸರ್ಕಾರ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗುತ್ತದೆ.ಸುಧಾರಣೆಗಳ ಅನುಷ್ಠಾನವು ಏಪ್ರಿಲ್ 1, 2021 ರಿಂದ ಜಾರಿಗೆ ಬರಬೇಕಾಗಿದ್ದರಿಂದ ಇದನ್ನು ಈಗಾಗಲೇ ಮುಂದೂಡಲಾಗಿತ್ತು.
ಏಪ್ರಿಲ್ 1 ರಿಂದ (1st april 2021) , ಕೇಂದ್ರ ಸರ್ಕಾರವು ಉದ್ಯೋಗದಲ್ಲಿರುವ ಜನರಿಗೆ ದೊಡ್ಡ ಬದಲಾವಣೆಗಳನ್ನು ಮಾಡಬಹುದು. ಉದ್ಯೋಗದಾತರ ಗ್ರಾಚ್ಯುಟಿ, ಪಿಎಫ್ ಮತ್ತು ಕೆಲಸದ ಸಮಯಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಬಹುದು. ನೌಕರರ ಪಿಎಫ್ನಲ್ಲಿ ಹೆಚ್ಚಳವಾಗಬಹುದು ಎಂದು ನಂಬಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.