ವರ್ಷ ನಲವತ್ತೈದಾದರೂ ಈ ನಟಿಯರು ಅದ್ಬುತ ಫಿಗರ್ ಹೊಂದಿರುವ ಹಿಂದಿನ ರಹಸ್ಯ

ಸೌಂದರ್ಯ ಮತ್ತು ಫಿಟ್ನೆಸ್ ವಿಷಯದಲ್ಲಿ ಐಶ್ವರ್ಯಾ ರೈ ಬಚ್ಚನ್ 48 ನೇ ವಯಸ್ಸಿನಲ್ಲಿಯೂ ಎಲ್ಲರನ್ನೂ ಹಿಂದಿಕ್ಕುತ್ತಾರೆ. 

ಬೆಂಗಳೂರು : ಫಿಟ್ನೆಸ್ ವಿಷಯದಲ್ಲಿ ಬಾಲಿವುಡ್ ನಟರಿಗೆ ಸರಿಸಾಟಿಯಿಲ್ಲ. ಇಂದು ಅವರು ಕೋಟ್ಯಂತರ ಜನರಿಗೆ ಸ್ಪೂರ್ತಿಯಾಗಿದ್ದಾರೆ. 45 ವರ್ಷ ದಾಟಿದ ಅನೇಕ ಬಿ-ಟೌನ್ ಸುಂದರಿಯರಿದ್ದಾರೆ ಆದರೆ ಅವರ ಫಿಟ್ನೆಸ್ ನೋಡಿದರೆ ಆಶ್ಚರ್ಯವಾಗುತ್ತದೆ. ಈ ನಟಿಯರು ತಮ್ಮ ಫಿಗರ್ ಅನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡಿದ್ದಾರೆ. ಕರಿಷ್ಮಾ ಕಪೂರ್‌ನಿಂದ ಹಿಡಿದು ಐಶ್ವರ್ಯಾ ರೈವರೆಗೆ, ಈ ನಟಿಯರು ತಮ್ಮ ದೇಹ ಸೌಂದರ್ಯದ ಕಡೆಗೆ ವಿಶೇಷ ಗಮನ ಹರಿಸಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಐಶ್ವರ್ಯಾ ರೈ ಬಚ್ಚನ್: ಸೌಂದರ್ಯ ಮತ್ತು ಫಿಟ್ನೆಸ್ ವಿಷಯದಲ್ಲಿ ಐಶ್ವರ್ಯಾ ರೈ ಬಚ್ಚನ್ 48 ನೇ ವಯಸ್ಸಿನಲ್ಲಿಯೂ ಎಲ್ಲರನ್ನೂ ಹಿಂದಿಕ್ಕುತ್ತಾರೆ. ಫಿಟ್ ಆಗಿರಲು ಐಶ್ವರ್ಯಾ ಜಿಮ್‌ಗೆ ಹೋಗದೆ ವಾಕಿಂಗ್ ಗೆ ಆದ್ಯತೆ ನೀಡುತ್ತಾರೆ. ಇದಲ್ಲದೆ, ತನ್ನ ಆಹಾರದಲ್ಲಿ ತಾಜಾ  ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸುತ್ತಾರೆ.    

2 /5

ಕರಿಷ್ಮಾ ಕಪೂರ್: ಫಿಟ್ನೆಸ್ ವಿಷಯಕ್ಕೆ ಬಂದಾಗ, ಕರಿಷ್ಮಾ ಕಪೂರ್ ಹೆಸರು ಕೂಡಾ ಮನಸ್ಸಿಗೆ ಬಾರದೆ ಇರದು. ಕರಿಷ್ಮಾ ಕಪೂರ್ ಅವರಿಗೆ 47 ವರ್ಷ ವಯಸ್ಸಾಗಿದ್ದು, ಅವರು 2 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕರಿಷ್ಮಾ ವರ್ಕೌಟ್ ಮಾಡುವುದರ ಜೊತೆಗೆ ಗ್ಲುಟನ್-ಫ್ರೀ ಡಯಟ್ ಅನ್ನು ಸಹ ಅನುಸರಿಸುತ್ತಾರೆ.   

3 /5

ಮಲೈಕಾ ಅರೋರಾ: ಫಿಟ್‌ನೆಸ್ ವಿಷಯದಲ್ಲಿ ಮಲೈಕಾ ಅರೋರಾಗೆ ಪೈಪೋಟಿ ನೀಡುವವರು ಯಾರೂ ಇಲ್ಲ. 48ರ ಹರೆಯದಲ್ಲೂ ಮಲೈಕಾ ತಮ್ಮ ಫಿಗರ್ ಅನ್ನು ಕಾಪಾಡಿಕೊಂಡಿರುವ ರೀತಿ ನಿಜಕ್ಕೂ ಶ್ಲಾಘನೀಯ. ಅವರು ಫಿಟ್ನೆಸ್ ಫ್ರೀಕ್ ಆಗಿದ್ದು, ತನ್ನ ಆರೋಗ್ಯದ ಬಗ್ಗೆ ತುಂಬಾ ಜಾಗರೂಕರಾಗಿರುತ್ತಾರೆ . ಸರಿಯಾದ ವ್ಯಾಯಾಮದ ಜೊತೆಗೆ, ಅವಳು ಸಮಯಕ್ಕೆ ಆಹಾರವನ್ನು ಸೇವನೆಗೆ ಆದ್ಯತೆ ನೀಡುತ್ತಾರೆ.

4 /5

ಶಿಲ್ಪಾ ಶೆಟ್ಟಿ: ಶಿಲ್ಪಾ ಶೆಟ್ಟಿ ಕುಂದ್ರಾ ಅವರಿಗೆ 47 ವರ್ಷ ವಯಸ್ಸಾಗಿದ್ದು, ಇಬ್ಬರು ಮಕ್ಕಳ ತಾಯಿಯೂ ಆಗಿದ್ದಾರೆ. ಆದರೆ ಇಂದಿಗೂ ಅವಳ ಫಿಗರ್ ಹದಿ ಹರೆಯದವರನ್ನು ನಾಚಿಸುವಂತಿದೆ. ಶಿಲ್ಪಾ ತಮ್ಮ ಫಿಟ್ ನೆಸ್ ಕಾಪಾಡಿಕೊಳ್ಳಲು ಯೋಗದ ಜೊತೆಗೆ ಆರೋಗ್ಯಕರ ಆಹಾರ ಕ್ರಮವನ್ನೂ ಅನುಸರಿಸುತ್ತಿದ್ದಾರೆ.

5 /5

ರವೀನಾ ಟಂಡನ್: ರವೀನಾ ಟಂಡನ್ ಅವರ ವಯಸ್ಸು ಕೂಡ 47 ವರ್ಷಗಳು. ಎರಡು ಮಕ್ಕಳ ತಾಯಿಯಾದ ನಂತರವೂ ನಟಿ ತಮ್ಮ ಫಿಗರ್ ಅನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಂಡಿದ್ದಾರೆ. ರವೀನಾ ತಮ್ಮ ಫಿಟ್‌ನೆಸ್‌ಗಾಗಿ ಯೋಗದ ಮೊರೆ ಹೋಗಿದ್ದಾರೆ. ಇದಲ್ಲದೆ, ರವೀನಾ ಜಂಕ್ ಮತ್ತು ಎಣ್ಣೆಯುಕ್ತ ಆಹಾರದಿಂದ ಸಾಧ್ಯವಾದಷ್ಟು ದೂರವಿರುತ್ತಾರೆ.