Salary Hike News :ಸರ್ಕಾರಿ ನೌಕರರ ನಿರೀಕ್ಷೆ ಅಂತ್ಯ! ವೇತನ ಹೆಚ್ಚಳದ ಬಗ್ಗೆ ಹೊರ ಬಿದ್ದಿದೆ ಬಿಗ್ ಅಪ್ಡೇಟ್

7th Pay Commission Salary Hike News :ಇದೀಗ ಸರ್ಕಾರಿ ನೌಕರರ ನಿರೀಕ್ಷೆ ಕೊನೆಯಾಗುವ ಕಾಲ ಹತ್ತಿರವಾಗಿದೆ. ಸರ್ಕಾರಿ ನೌಕರರ ವೇತನ ಹೆಚ್ಚಳ ಬಗ್ಗೆ ಸರ್ಕಾರ ಎರಡು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಿದೆ ಎಂದು ಹೇಳಲಾಗಿದೆ. 

7th Pay Commission : ಕುಟುಂಬದಲ್ಲಿ ಯಾರಾದರೂ ಕೇಂದ್ರ ಉದ್ಯೋಗಿ ಅಥವಾ ಪಿಂಚಣಿದಾರರಾಗಿದ್ದರೆ, ಇದು ನಿಮ್ಮ ಪಾಲಿಗೆ ಸಿಹಿ ಸುದ್ದಿಯಾಗಿರಲಿದೆ. ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆ ಶೀಘ್ರದಲ್ಲೇ ಅಂತ್ಯವಾಗಲಿದೆ. ಹೌದು, ಸರ್ಕಾರ ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರರ  ಡಿಎ ಜೊತೆಗೆ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲು ಹೊರಟಿದೆ.  ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಸರಕಾರದ ಈ ನಿರ್ಧಾರದಿಂದ ಸುಮಾರು 1 ಕೋಟಿಗೂ ಹೆಚ್ಚು ಕುಟುಂಬಗಳು ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಈ ಮೂಲಕ ನೌಕರರ ಮೂಲ ವೇತನದಲ್ಲಿ ಗಣನೀಯ ಏರಿಕೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

1 /5

ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಮೋದಿ ಸರ್ಕಾರ ಬಹು ದೊಡ್ಡ ಉಡುಗೊರೆಯನ್ನು ನೀಡಬಹುದು.ಈ ಬಾರಿ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಹೀಗಾದಾಗ ತುಟ್ಟಿಭತ್ಯೆ ಶೇ ೫೦ಕ್ಕೆ ಏರಲಿದೆ.   

2 /5

ಕೇಂದ್ರ ಸರ್ಕಾರವು ಪ್ರತಿ ವರ್ಷ ಎರಡು ಬಾರಿ ಡಿಎಯನ್ನು ಹೆಚ್ಚಿಸುತ್ತದೆ. ಈ ಹೆಚ್ಚಳವನ್ನು ಪ್ರತಿ ಅರ್ಧ ವರ್ಷಕ್ಕೊಮ್ಮೆ ಮಾಡಲಾಗುತ್ತದೆ.ಈ ಬಾರಿಯ ಡಿಎ ಹೆಚ್ಚಳ ಮಾರ್ಚ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.    

3 /5

ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಸುಮಾರು 4 ಪ್ರತಿಶತದಷ್ಟು ಹೆಚ್ಚಿಸಬಹುದು. ಇದರ ಹೊರತಾಗಿ, ಬಹು ಕಾಲದ ನಿರೀಕ್ಷೆಯ ನಂತರ ಫಿಟ್‌ಮೆಂಟ್ ಅಂಶದಲ್ಲಿಯೂ ಹೆಚ್ಚಳ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಹೀಗಾದಾಗ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗುವುದು. 

4 /5

ಸರ್ಕಾರವು ಕೇಂದ್ರ ನೌಕರರ ಫಿಟ್‌ಮೆಂಟ್ ಅಂಶವನ್ನು ಕೂಡಾ ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಉದ್ಯೋಗಿಗಳ ಫಿಟ್‌ಮೆಂಟ್ ಅಂಶವನ್ನು 2.60 ಶೇ.ದಿಂದ 3 ಶೇ ಕ್ಕೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

5 /5

ಫಿಟ್‌ಮೆಂಟ್ ಅಂಶದಲ್ಲಿ ಹೆಚ್ಚಳವಾದರೆ ಕನಿಷ್ಠ ಮೂಲ ವೇತನವೂ ಗಣನೀಯವಾಗಿ ಹೆಚ್ಚಾಗಲಿದೆ.ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.