Fitness Tips: ವ್ಯಾಯಾಮ ಮಾಡದಿದ್ರೆ ನಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ..?

ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ನೀವು ತೊಡಗಿಸಿಕೊಳ್ಳದೆ ಇದ್ದರೆ ನಿಮ್ಮ ದೇಹದಲ್ಲಿರುವ ಸ್ನಾಯುಗಳು ಬಲಹೀನ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿನಿತ್ಯ ಕನಿಷ್ಠ 40ರಿಂದ 45 ನಿಮಿಷ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಿರಿ.

ನವದೆಹಲಿ: ಜೀವನದಲ್ಲಿ ಉತ್ತಮ ಅಭ್ಯಾಸ ರೂಢಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಯಾವುದೇ ಒಬ್ಬ ವ್ಯಕ್ತಿ ಉತ್ತಮ ಆರೋಗ್ಯ ಹೊಂದಿದ್ದಾನೆಂದರೆ ಕೋಟಿ ಕೋಟಿ ಹಣಕ್ಕೆ ಸಮ. ಮದ್ಯ ಸೇವನೆ, ಧೂಮಪಾನ, ಜನ್ ಫುಡ್ ಸೇವನೆ ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರತಿದಿನವೂ ನಾವು ಸ್ವಲ್ಪ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ದಿನದಲ್ಲಿ 40 ನಿಮಿಷ ವ್ಯಾಯಾಮ ಮಾಡಿದ್ರೆ ನೀವು ಆರೋಗ್ಯವಾಗಿರುತ್ತೀರಿ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನಿಯಮಿತವಾಗಿ ಚುರುಕಾದ ವ್ಯಾಯಾಮ ಮಾಡುವುದರಿಂದ ವಯಸ್ಸಾಗುವಿಕೆ ಸಮಸ್ಯೆ ಬರುವುದಿಲ್ಲ. ಪ್ರತಿದಿನವೂ ದೈಹಿಕ ಚಟುವಟಿಕೆಯಲ್ಲಿ ತೋಡಗಿಕೊಂಡರೆ ನೀವು ಅಕಾಲಿಕ ಮರಣದ ಅಪಾಯದಿಂದ ಪಾರಾಬಹುದು. ವ್ಯಾಯಾಮ ಮಾಡದಿದ್ದರೆ ನಿಮಗೆ ಖಂಡಿತ ಸಮಸ್ಯೆಗಳು ಎದುರಾಗುತ್ತವೆ.

2 /5

ನಮ್ಮ ದೇಹಕ್ಕೆ ಯಾವುದೇ ರೀತಿಯ ಚಟುವಟಿಕೆ ನೀಡದಿದ್ದರೆ ಹೆಚ್ಚು ಹಾನಿಗೆ ಒಳಗಾಗುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡದಿದ್ದರೆ, ದೇಹಕ್ಕೆ ಯಾವುದೇ ರೀತಿಯ ಚಟುವಟಿಕೆ ನೀಡದಿದ್ದರೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. 

3 /5

ಮಾನವನ ದೇಹಕ್ಕೆ ಹೃದಯ ಅತ್ಯಂತ ಮುಖ್ಯವಾದ ಅಂಗ. ಇಡೀ ದೇಹಕ್ಕೆ ರಕ್ತವನ್ನು ಪಂಪು ಮಾಡುವ ಕೆಲಸವನ್ನು ಹೃದಯ ಮಾಡುತ್ತದೆ. ಏರೋಬಿಕ್ ಮತ್ತು ಕಾರ್ಡಿಯೋ ವ್ಯಾಯಾಮಗಳು ಉತ್ತಮ ಹೃದಯ ಬಡಿತ ಮತ್ತು ಹೃದಯದ ಕಾಯಿಲೆಗಳ ಅಪಾಯಕ್ಕೆ ಸಂಬಂಧಿಸಿದೆ. ನೀವು ಯಾವುದೇ ರೀತಿಯ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಮಾಡದಿದ್ದರೆ ನಿಮ್ಮ ಹೃದಯ ಕಾರ್ಯನಿರ್ವಹಿಸುವುದನ್ನೆ ನಿಲ್ಲಿಸಬಹುದು.

4 /5

ವ್ಯಾಯಾಮ ಮಾಡದಿದ್ದರೆ ನಿಮ್ಮ ಹೃದಯದ ಬಡಿತವು ತೊಂದರೆಗೊಳಗಾದಬಹುದು, ಇದು ನಿಮ್ಮ ಉಸಿರಾಟದ ಮೇಲೂ ಪರಿಣಾಮ ಬೀರಬಹುದು. ಕಳಪೆ ಆಹಾರದ ಸೇವನೆ ಹೆಚ್ಚಿನ ಹೃದಯ ಸಮಸ್ಯೆಗಳು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.

5 /5

ನಾವು ಆರೋಗ್ಯವಾಗಿರಬೇಕಾದ್ರೆ ನಮ್ಮ ದೇಹದಲ್ಲಿರುವ ಸ್ನಾಯು ಕೋಶಗಳನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳುವುದು ಮುಖ್ಯ. ಇವುಗಳನ್ನು ಬಲಪಡಿಸುವಲ್ಲಿ ವ್ಯಾಯಾಮ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ನೀವು ವ್ಯಾಯಾಮ ಮಾಡದಿದ್ದಾಗ ಅಥವಾ ಯಾವುದೇ ರೀತಿಯ ದೈಹಿಕ ಚಟುವಟಿಕೆ ನಡೆಸದಿದ್ದಾಗ ದೇಹದಲ್ಲಿರುವ ಸ್ನಾಯುಬಲ ಕಡಿಮೆಯಾಗುತ್ತದೆ. ಇದು ನಿಮ್ಮನ್ನು ತುಂಬಾ ದುರ್ಬಲರನ್ನಾಗಿ ಮಾಡುತ್ತದೆ.