Gold Rate Today: ಚಿನ್ನ ಮತ್ತು ಬೆಳ್ಳಿಗೆ ಪ್ರಪಂಚದಾದ್ಯಂತ ಯಾವಾಗಲೂ ಬೇಡಿಕೆಯಿದೆ.. ಅಂತರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ ಚಿನ್ನ ಬೆಳ್ಳಿ ಬೆಲೆಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ.. ಹಾಗಾದ್ರೆ ಇಂದು ಹೇಗಿದೆ ಆಭರಣದ ಬೆಲೆ ಎಂದು ಇಲ್ಲಿ ತಿಳಿಯಿರಿ..
ಇತ್ತೀಚೆಗಷ್ಟೇ ಇಳಿಕೆಯಾಗಿದ್ದ ಚಿನ್ನ ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ. ದಸರಾ ಮತ್ತು ದೀಪಾವಳಿ ಸಮಯದಲ್ಲಿ ಭರ್ಜರಿಯಾಗಿ ಬೆಲೆ ಹೆಚ್ಚುತ್ತಿದ್ದು, ಚಿನ್ನ ಬೆಳ್ಳಿ ಕೊಳ್ಳುವವರಿಗೆ ಶಾಕ್ ಎದುರಾದಂತಿದೆ.. ಸಾಮಾನ್ಯವಾಗಿ ಹಬ್ಬದಲ್ಲಿ ಚಿನ್ನ ಮತ್ತು ಬೆಳ್ಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.
ಇಂದು ಶನಿವಾರ (12 ಅಕ್ಟೋಬರ್ 2024) ಬೆಳಿಗ್ಗೆ ಆರು ಗಂಟೆಯವರೆಗೆ ದಾಖಲಾದ ಬೆಲೆಗಳ ಪ್ರಕಾರ ದಸರಾ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸ್ವಲ್ಪ ಹೆಚ್ಚಾಗಿದೆ. ಪ್ರತಿ ಕೆ.ಜಿ ಬೆಳ್ಳಿಯ ಬೆಲೆ ರೂ.96,100 ಆಗಿ ಮುಂದುವರಿದಿದೆ. ಚಿನ್ನ ರೂ. 10 ಮತ್ತು ಬೆಳ್ಳಿ 100 ರೂ. ಏರಿಕೆಯಾಗಿದೆ.. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ ಎಂದು ತಿಳಿಯಿರಿ..
ಹೈದರಾಬಾದ್ ನಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ ರೂ.70,960 ಮತ್ತು 24ಕ್ಯಾರೆಟ್ ಬೆಲೆ ರೂ.77,410 ಆಗಿದೆ.
ವಿಶಾಖಪಟ್ಟಣಂ ಮತ್ತು ವಿಜಯವಾಡ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.70,960 ಮತ್ತು 24 ಕ್ಯಾರೆಟ್ ಬೆಲೆ ರೂ.77,410 ಆಗಿದೆ.
ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.71,110 ಮತ್ತು 24 ಕ್ಯಾರೆಟ್ ಬೆಲೆ ರೂ.77,560 ಆಗಿದೆ.
ಮುಂಬೈನಲ್ಲಿ 22 ಕ್ಯಾರೆಟ್ ಬೆಲೆ ರೂ.70,960 ಮತ್ತು 24 ಕ್ಯಾರೆಟ್ ಬೆಲೆ ರೂ.77,410 ಆಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ ದರ ರೂ.70,960 ಮತ್ತು 24 ಕ್ಯಾರೆಟ್ ದರ ರೂ.77,410 ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಬೆಲೆ ರೂ.70,960 ಮತ್ತು 24 ಕ್ಯಾರೆಟ್ ಬೆಲೆ ರೂ.77,410 ಆಗಿದೆ.
ಬೆಳ್ಳಿ ಬೆಲೆ: ಪ್ರತಿ ಕೆಜಿ ಬೆಳ್ಳಿಯ ಬೆಲೆ ಹೈದರಾಬಾದ್ನಲ್ಲಿ ರೂ.102,100 ಮತ್ತು ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ ರೂ.102,100 ಆಗಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆ ದೆಹಲಿಯಲ್ಲಿ ರೂ.96,100, ಮುಂಬೈನಲ್ಲಿ ರೂ.96,100, ಬೆಂಗಳೂರಿನಲ್ಲಿ ರೂ.84,900 ಮತ್ತು ಚೆನ್ನೈನಲ್ಲಿ ರೂ.102,100 ಆಗಿದೆ.