ಇನ್ನು ಕೆಲವೇ ಗಂಟೆಗಳಲ್ಲಿ ಈ ರಾಶಿಯವರ ಸುಖ ಶಾಂತಿ ಕಸಿದುಕೊಳ್ಳಲಿದ್ದಾನೆ ಗುರು

ಇದೀಗ ನಾಳೆ ಅಂದರೆ ನವೆಂಬರ್ 24 ರಂದು ಬೆಳಿಗ್ಗೆ 4.27 ಕ್ಕೆ ಗುರು ನೇರ ಚಲನೆ ಆರಂಭಿಸಲಿದ್ದಾನೆ. ಗುರು ನೇರ ಚಲನೆ ಆರಂಭಿಸುತ್ತಿದ್ದಂತೆಯೇ ಕೆಲವು ರಾಶಿಗಳ ಕೆಟ್ಟ ಸಮಯ ಕೂಡಾ ಆರಂಭವಾಗಲಿದೆ.  

ಬೆಂಗಳೂರು : ಜ್ಯೋತಿಷ್ಯದಲ್ಲಿ ನವಗ್ರಹಗಳು ಮತ್ತು ದ್ವಾದಶ ರಾಶಿಗಳು ಬಹಳ ಮುಖ್ಯವಾಗಿರುತ್ತದೆ.  ಅಲ್ಲದೆ ಯಾವ ಗ್ರಹ ಯಾವ ರಾಶಿಯ ಎಷ್ಟನೇ ಮನೆಯಲ್ಲಿದೆ ಎನ್ನುವುದು ಕೂಡಾ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಗ್ರಹಗಳು ವ್ಯಕ್ತಿಯ ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಅದರ ಶುಭ ಫಲ ಸಿಗುತ್ತದೆ. ಗ್ರಹಗಳು ಒಂದು ನಿರ್ದಿಷ್ಟ ಸಮಯದ ನಂತರ ತಮ್ಮ ರಾಶಿಯನ್ನು ಪರಿವರ್ತಿಸಿಕೊಳ್ಳುತ್ತದೆ. ಅಂದರೆ ಒಂದು ರಾಶಿಯನ್ನು ಬಿಟ್ಟು ಮತ್ತೊಂದು ರಾಶಿಗೆ ಪ್ರವೇಶಿಸುತ್ತದೆ. ಹೀಗೆ ಏಪ್ರಿಲ್ 13, 2022 ರಂದು, ಗುರು ಗ್ರಹವು ಮೀನ ರಾಶಿಯನ್ನು ಪ್ರವೇಶಿಸಿದ್ದು, ಜುಲೈ 24 ರಿಂದ ಈ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದೆ. ಇದೀಗ ನಾಳೆ ಅಂದರೆ ನವೆಂಬರ್ 24 ರಂದು ಬೆಳಿಗ್ಗೆ 4.27 ಕ್ಕೆ  ಗುರು ನೇರ ಚಲನೆ ಆರಂಭಿಸಲಿದ್ದಾನೆ. ಗುರು ನೇರ ಚಲನೆ ಆರಂಭಿಸುತ್ತಿದ್ದಂತೆಯೇ ಕೆಲವು ರಾಶಿಗಳ ಕೆಟ್ಟ ಸಮಯ ಕೂಡಾ ಆರಂಭವಾಗಲಿದೆ.  
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಕುಂಭ ರಾಶಿ :ಬೃಹಸ್ಪತಿ ಈ ರಾಶಿಯ ಎರಡನೇ ಮನೆಯಲ್ಲಿ ಸಂಕ್ರಮಿಸಲಿದ್ದಾನೆ.  ಮೀನರಾಶಿಯಲ್ಲಿ ಗುರುವಿನ ನೇರ ಚಲನೆ ಆರಂಭವಾದ ತಕ್ಷಣ, ಕುಂಭ ರಾಶಿಯವರ ಜೀವನದಲ್ಲಿ ಮಿಶ್ರ ಫಲ ನೀಡಲು ಆರಂಭಿಸುತ್ತಾನೆ. ನಿಮ್ಮ ಜೀವನದಲ್ಲಿ ಘಟಿಸುವ ಪ್ರತಿಯೊಂದು ಘಟನೆಗಳನ್ನು ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ರೀತಿಯಲ್ಲಿಯೂ ಇಳಿಮುಖವಾಗುವುದಿಲ್ಲ ಎನ್ನುವುದು ಸಮಾಧಾನಕರ ಸಂಗತಿ. 

2 /4

ಧನು ರಾಶಿ :ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,  ಧನು ರಾಶಿಯ ನಾಲ್ಕನೇ ಮನೆಯಲ್ಲಿ ಗುರು ಸಾಗಲಿದ್ದಾನೆ.  ಹೀಗಾದಾಗ ಈ ರಾಶಿಯವರು ಅನೇಕ ತೊಂದರೆಗಳನ್ನು  ಎದುರಿಸಬೇಕಾಗಬಹುದು. ಇನ್ನು ಈ ಸಂದರ್ಭದಲ್ಲಿಯೂ ಆಗಾಗ ಧನಲಾಭವಾಗಬಹುದು.  ಈ ಸಮಯದಲ್ಲಿ ಮಾನಸಿಕ ಮತ್ತು ದೈಹಿಕ ಒತ್ತಡ ಹೆಚ್ಚಾಗುವ ಸಂಭವವಿದೆ. ವಾಹನದಲ್ಲಿ ತೆರಳುವ ಸಂದರ್ಭದಲ್ಲಿ ಜಾಗರೂಕರಾಗಿರಿ.  

3 /4

ತುಲಾ ರಾಶಿ :ತುಲಾ ರಾಶಿಯವರ ಜಾತಕದಲ್ಲಿ ಗುರುವು ಆರನೇ ಮನೆಯಲ್ಲಿ ಸಾಗಲಿದ್ದಾನೆ. ಆರನೇ ಮನೆಯನ್ನು ಶತ್ರುಗಳ ಮನೆ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ತುಲಾ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಇರುತ್ತದೆ. 

4 /4

ಸಿಂಹ ರಾಶಿ : ಗುರು ಗ್ರಹವು ನೇರ ಚಲನೆ ಆರಂಭಿಸುವುದರೊಂದಿಗೆ ಸಿಂಹ ರಾಶಿಯ  ಎಂಟನೇ ಮನೆಯಲ್ಲಿ ಸಾಗುತ್ತಿದೆ. ಹೀಗಾಗಿ ಈ ರಾಶಿಯವರ ಜೀವನ ಅನೇಕ ಏರಿಳಿತಗಳಿಗೆ ಸಾಕ್ಷಿಯಾಗಬಹುದು. ಈ ಅವಧಿಯಲ್ಲಿ ಎಚ್ಚರಿಕೆ ಅಗತ್ಯ.