Health Tips: ಅತಿಯಾಗಿ ನೀರು ಕುಡಿದರೂ ನಿಮ್ಮ ಆರೋಗ್ಯಕ್ಕೆ ಡೇಂಜರ್!

Drinking Too Much Water: ‘ಅತಿಯಾದರೆ ಅಮೃತವೂ ವಿಷ’ ಎಂಬುದನ್ನು ಅರಿತು ನಾವು ನೀರು ಕುಡಿಯಬೇಕು. ಅತಿಯಾಗಿ ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಹೀಗಾಗಿ ಎಚ್ಚರಿಕೆ ಅಗತ್ಯ.

ನವದೆಹಲಿ: ನಮ್ಮ ದೇಹವು ಶೇ.80 ರಷ್ಟು ಪ್ರಮಾಣ ನೀರಿನಿಂದ ಕೂಡಿರುತ್ತದೆ. ದೇಹದ ಪ್ರತಿಯೊಂದು ಅಂಗ, ಕೋಶ ಮತ್ತು ಅಂಗಾಂಶಗಳು ಸರಿಯಾಗಿ ಕಾರ್ಯನಿರ್ವಹಿಸಲು ನೀರು ಅಗತ್ಯವಾಗಿ ಬೇಕು. ಹೀಗಾಗಿ ದಿನದಲ್ಲಿ ನಾವು ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಮುಖ್ಯ. ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ನೀರು ಕುಡಿಯಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದರೆ ನಮ್ಮ ಆರೋಗ್ಯದ ಮೇಲೆ ಅನೇಕ ಪರಿಣಾಮಗಳು ಉಂಟಾಗುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನೀವು ಅತಿಯಾಗಿ ನೀರು ಸೇವಿಸುತ್ತಿದ್ದೀರಿ ಅನ್ನೋದನ್ನು ತಿಳಿಯಲು ಇರುವ ಸುಲಭ ಮಾರ್ಗವೆಂದರೆ ಮೂತ್ರದ ಬಣ್ಣ ಪರಿಶೀಲಿಸುವುದು. ನಿಮ್ಮ ಮೂತ್ರ ಗಾಢ ಹಳದಿ ಬಣ್ಣದಾಗಿದ್ದರೆ ಇದು ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ. ನಿಮ್ಮ ಮೂತ್ರ ತಿಳಿ ಹಳದಿ ಬಣ್ಣದಿಂದ ಕೂಡಿದ್ದರೆ ನೀರು ಸೇವನೆ ಮಟ್ಟ ಉತ್ತಮವಾಗಿದೆ ಎಂದರ್ಥ. ನಿಮ್ಮ ಮೂತ್ರ ಸಂಪೂರ್ಣವಾಗಿ ಪಾರದರ್ಶಕವಾಗಿದ್ದರೆ ನೀವು ನೀರಿನ ಸೇವನೆ ಕಡಿಮೆ ಮಾಡಬೇಕು.  

2 /5

ಹೆಚ್ಚು ನೀರು ಸೇವನೆಯು ರಾತ್ರಿ ಸೇರಿದಂತೆ ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು. ಬಹುತೇಕ ಜನರು ದಿನಕ್ಕೆ 6 ರಿಂದ 8 ಬಾರಿ ಮೂತ್ರ ವಿಸರ್ಜಿಸುತ್ತಾರೆ. ಆದರೆ ನೀವು ದಿನಕ್ಕೆ 10 ಬಾರಿ ಮೂತ್ರ ವಿಸರ್ಜನೆ ಮಾಡಿದ್ರೆ ನಿಮ್ಮ ದೇಹದ ಅಗತ್ಯಕ್ಕಿಂತ ನೀವು ಹೆಚ್ಚು ನೀರು ಕುಡಿಯುತ್ತಿದ್ದೀರಿ ಎಂದರ್ಥ.

3 /5

ಹೆಚ್ಚು ನೀರು ಕುಡಿಯುವುದರಿಂದ ಹೈಪೋನಟ್ರೇಮಿಯಾ ಉಂಟಾಗುತ್ತದೆ. ಹೈಪೋನಾಟ್ರೀಮಿಯಾವನ್ನು ರಕ್ತದಲ್ಲಿನ ಕಡಿಮೆ ಸೋಡಿಯಂ ಮಟ್ಟದಿಂದ ಗುರುತಿಸಲಾಗುತ್ತದೆ. ಇದು ಅಧಿಕ ನಿರ್ಜಲೀಕರಣದ ಸಂಕೇತವಾಗಿದೆ. ಇದು ದೇಹದ ಶಕ್ತಿಯ ಮಟ್ಟ, ಅರೆನಿದ್ರಾವಸ್ಥೆ, ಆಯಾಸ ಮತ್ತು ದಣಿವಿನ ಭಾವನೆಗಳಿಗೆ ಕಾರಣವಾಗಬಹುದು.

4 /5

ನೀರು ದೇಹದಲ್ಲಿನ ಎಲೆಕ್ಟ್ರೋಲೈಟ್ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಎಲೆಕ್ಟ್ರೋಲೈಟ್ ಸಾಮಾನ್ಯವಾಗಿ ನಮ್ಮ ದೇಹದ ಶಕ್ತಿಯ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಹೆಚ್ಚಿನ ನೀರು ಸೇವಿಸಿದ್ದಲ್ಲಿ ಅಸಮತೋಲನ ಉಂಟಾಗುತ್ತದೆ. ಆಗ ಪಾದಗಳು, ಕೈಗಳು ಮತ್ತು ತುಟಿಗಳು ಊದಿಕೊಳ್ಳುವ ಸಾಧ್ಯತೆ ಇರುತ್ತದೆ.

5 /5

ದೇಹಕ್ಕೆ ನೀರು ಹೆಚ್ಚಾದರೆ ನಿಮ್ಮ ರಕ್ತದಲ್ಲಿನ ಸೋಡಿಯಂ ಮಟ್ಟ ಕುಸಿಯುತ್ತದೆ. ಇದು ಹೈಪೋನಾಟ್ರೀಮಿಯ ಎಂಬ ಸ್ಥಿತಿಗೆ ಕಾರಣವಾಗುತ್ತದೆ. ತಲೆನೋವು, ಮೆದುಳಿನ ದುರ್ಬಲತೆ, ವಾಕರಿಕೆ, ವಾಂತಿ ಮತ್ತು ಅತಿಸಾರ ಇವು ಇದರ ಲಕ್ಷಣಗಳಾಗಿವೆ.