ಹೋಳಿಯ ರಂಗು ಚರ್ಮದ ಮೇಲೆ ನೆಲೆಗೊಂಡರೆ ಈ ಬಣ್ಣದ ಕಲೆಗಳನ್ನು ತೆಗೆಯುವುದು ಹೇಗಪ್ಪಾ ಅನ್ನೋ ಚಿಂತೆ ಎಲ್ಲರನ್ನೂ ಕಾಡುತ್ತದೆ. ಈ ಬಗ್ಗೆ ಚಿಂತೆ ಬಿಡಿ. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳ ಸಹಾಯದಿಂದ ನೀವು ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ಹೋಳಿ ಹಬ್ಬ ಬಂತೆಂದರೆ ಒಂದು ರೀತಿಯ ಸಂಭ್ರಮ, ಸಡಗರ ಎಲ್ಲೆಡೆ ಇರುತ್ತದೆ. ಹೋಳಿ ದಿನದಂದು ಎಲ್ಲರೂ ತಮ್ಮ ಆತ್ಮೀಯರಿಗೆ ಬಣ್ಣ ಹಚ್ಚುತ್ತಾ ಸಡಗರದಿಂದ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಆದರೆ, ಅದೇ ಹೋಳಿಯ ರಂಗು ಚರ್ಮದ ಮೇಲೆ ನೆಲೆಗೊಂಡರೆ ಈ ಬಣ್ಣದ ಕಲೆಗಳನ್ನು ತೆಗೆಯುವುದು ಹೇಗಪ್ಪಾ ಅನ್ನೋ ಚಿಂತೆ ಎಲ್ಲರನ್ನೂ ಕಾಡುತ್ತದೆ. ಈ ಬಗ್ಗೆ ಚಿಂತೆ ಬಿಡಿ. ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳ ಸಹಾಯದಿಂದ ನೀವು ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹೋಳಿ ಬಣ್ಣವನ್ನು ತ್ವರಿತವಾಗಿ ತೆಗೆದುಹಾಕಲು ಚರ್ಮವು ಶುಷ್ಕವಾಗಿರಬಾರದು. ಒಂದು ಪಾತ್ರೆಯಲ್ಲಿ 2 ಚಮಚ ಮೊಸರು, 4-5 ಹನಿ ನಿಂಬೆ ಸೇರಿಸಿ ಮತ್ತು ಮಿಶ್ರಣ ಮಾಡಿ. ತಯಾರಾದ ಮಿಶ್ರಣವನ್ನು ಪೀಡಿತ ಪ್ರದೇಶಗಳಿಗೆ ಅನ್ವಯಿಸಿ ಮತ್ತು 10-15 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ತಾಜಾ ನೀರಿನಿಂದ ವಾಶ್ ಮಾಡಿ.
ಒಂದೆರಡು ಹನಿ ಆಲಿವ್ ಆಯಿಲ್ ತೆಗೆದುಕೊಂಡು ಅದರಲ್ಲಿ ಒಂದು ಚಮಚ ಹಾಲನ್ನು ಮಿಕ್ಸ್ ಮಾಡಿ. ನಂತರ ಕಲೆ ಇರುವ ಪ್ರದೇಶಕ್ಕೆ ಈ ಮಿಶ್ರಣವನ್ನು ಹಚ್ಚಿ, ಹತ್ತು ನಿಮಿಷಗಳ ಬಳಿಕ ತೊಳೆಯಿರಿ. ಇದರಿಂದ ಹೋಳಿಯ ರಂಗು ಕಡಿಮೆ ಆಗುತ್ತದೆ.
ಅಕ್ಕಿ ಹಿಟ್ಟನ್ನು ನೈಸರ್ಗಿಕ ಸ್ಕ್ರಬ್ಬರ್ ಎಂದು ಪರಿಗಣಿಸಲಾಗುತ್ತದೆ. ಇದು ಹೋಳಿಯ ರಂಗನ್ನು ತೆಗೆಯಲು ಸಹ ನಿಮಗೆ ಪ್ರಯೋಜನಕಾರಿ ಆಗಿದೆ. ಇದಾಕ್ಕಾಗಿ, ಅಕ್ಕಿ ಹಿಟ್ಟಿಗೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸಿ ಈ ಮಿಶ್ರಣವನ್ನು ಕಲೆಯಿರುವ ಜಾಗಕ್ಕೆ ಹಚ್ಚಿ ನಯವಾಗಿ ಮಸಾಜ್ ರೀತಿಯಲ್ಲಿ ಉಜ್ಜಿರಿ. ಇದರಿಂದ ಕಲೆ ಮಾಯವಾಗುತ್ತದೆ.
ಸೌತೆಕಾಯಿಯ ರಸವನ್ನು ಹೊರತೆಗೆಯಿರಿ ಮತ್ತು ಅದರಲ್ಲಿ ಸ್ವಲ್ಪ ರೋಸ್ ವಾಟರ್ ಮತ್ತು ಒಂದು ಚಮಚ ವಿನೆಗರ್ ಅನ್ನು ಬೆರೆಸಿ ಪೇಸ್ಟ್ ತಯಾರಿಸಿ. ಗಾಢ ಬಣ್ಣಯಿರುವ ಜಾಗದಲ್ಲಿ ಲೇಪಿಸಿ. ಸ್ವಲ್ಪ ಸಮಯದ ನಂತರ ಸಾಮಾನ್ಯ ನೀರಿನಿಂದ ಸ್ವಚ್ಛಗೊಳಿಸಿ. ಹೋಳಿ ಕಲೆಯನ್ನು ಸುಲಭವಾಗಿ ತೆಗೆಯಬಹುದು.
ಒಂದು ಬಟ್ಟಲಿನಲ್ಲಿ ಒಂದು ಚಮಚ ಕಿತ್ತಳೆ ರಸವನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಕಲೆ ಇರುವ ಪ್ರದೇಶದಲ್ಲಿ ಹಚ್ಚಿ 10-15 ನಿಮಿಷಗಳ ಬಳಿಕ ಸರಳ ನೀರಿನಿಂದ ಸ್ವಚ್ಚಗೊಳಿಸಿ. ಇದೂ ಸಹ ಚರ್ಮದಲ್ಲಿ ನೆಲೆಯೂರಿರುವ ಗಾಢ ಬಣ್ಣದಿಂದ ನಿಮಗೆ ಮುಕ್ತಿ ನೀಡುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.