ಗಿನ್ನಿಸ್ ದಾಖಲೆ ಬರೆದ ಬಾಲಿವುಡ್ ತಾರೆಯರು ಇವರು..!

ಬಾಲಿವುಡ್ ನ ಸೂಪರ್ ಹೀರೋ ಎಂದೇ ಕರೆಸಿಕೊಳ್ಳುವ ಅಮಿತಾಭ್ ಬಚ್ಚನ್ ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ . ಗಿನ್ನಿಸ್ ಬುಕ್ ನಲ್ಲಿ ಬಿಗ್ ಬಿ ಅವರ ಹೆಸರೂ ದಾಖಲಾಗಿದೆ. 


ನವದೆಹಲಿ : ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೆಸರು ಸೇರುವುದೆಂದರೆ ಅದೊಂದು ದೊಡ್ಡ ಸಾಧನೆ. ಅನೇಕ ಬಾಲಿವುಡ್ ತಾರೆಯರು ಅನೇಕ ದಾಖಲೆಗಳನ್ನು ಮಾಡಿದ್ದಾರೆ.ಯಾವ ನಟ ನತಯಾಯರು ಈ ಸಾಧನೆಯ ಪಟ್ಟಿಯಲ್ಲಿದ್ದಾರೆ ನೋಡೋಣ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

1 /6

ಬಾಲಿವುಡ್ ನ ಸೂಪರ್ ಹೀರೋ ಎಂದೇ ಕರೆಸಿಕೊಳ್ಳುವ ಅಮಿತಾಭ್ ಬಚ್ಚನ್ ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ . ಗಿನ್ನಿಸ್ ಬುಕ್ ನಲ್ಲಿ ಬಿಗ್ ಬಿ ಅವರ ಹೆಸರೂ ದಾಖಲಾಗಿದೆ. ಅಮಿತಾಬ್ ಬಚ್ಚನ್ ಅವರು 19 ಪ್ರಸಿದ್ಧ ಗಾಯಕರೊಂದಿಗೆ 'ಶ್ರೀ ಹನುಮಾನ್ ಚಾಲೀಸಾ' ಹಾಡಿದ ಏಕೈಕ ನಟ ಎಂಬ ಬಿರುದನ್ನು ಹೊಂದಿದ್ದಾರೆ. ಕುಮಾರ್ ಸಾನು, ಕೈಲಾಶ್ ಖೇರ್, ಶಾನ್, ಶಂಕರ್ ಮಹಾದೇವನ್, ಸೋನು ನಿಗಮ್, ಸುಖ್ವಿಂದರ್ ಸಿಂಗ್, ಉದಿತ್ ನಾರಾಯಣ್, ಆದೇಶ್ ಶ್ರೀವಾಸ್ತವ, ಅಭಿಜೀತ್, ಬಾಬುಲ್ ಸುಪ್ರಿಯೋ ಮತ್ತು ಹಂಸರಾಜ್ ಹನ್ಸ್ ಅವರಂತಹ ಗಾಯಕರೊಂದಿಗೆ ಅಮಿತಾಬ್ ಬಚ್ಚನ್ ಹಾಡಿದ್ದಾರೆ. 

2 /6

ಅಮಿತಾಭ್ ಬಚ್ಚನ್ ಮಾತ್ರವಲ್ಲದೆ ಅವರ ಪುತ್ರ ಮತ್ತು ನಟ ಅಭಿಷೇಕ್ ಬಚ್ಚನ್ ಕೂಡ ತಮ್ಮ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಅವರ ಚಿತ್ರ ದೆಹಲಿ 6 ರ ಪ್ರಚಾರಕ್ಕಾಗಿ, ಅಭಿಷೇಕ್ 12 ಗಂಟೆಗಳಲ್ಲಿ 1800 ಕಿಮೀ ಪ್ರಯಾಣಿಸಿದ್ದರು. 12 ಗಂಟೆಗಳಲ್ಲಿ ಹಲವಾರು ನಗರಗಳಲ್ಲಿ ಚಲನಚಿತ್ರ ತಾರೆಯೊಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಂಡ ದಾಖಲೆಯನ್ನು ಹೊಂದಿದ್ದಾರೆ. ಈ ಸಮಯದಲ್ಲಿ, ಅಭಿಷೇಕ್ ಗಾಜಿಯಾಬಾದ್, ನೋಯ್ಡಾ, ಫರಿದಾಬಾದ್, ಚಂಡೀಗಢ ಮತ್ತು ಮುಂಬೈನ ಮಾಲ್‌ಗಳಿಗೆ ಭೇಟಿ ನೀಡಿದ್ದರು. 

3 /6

ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ 2013 ರಲ್ಲಿ ಗಿನ್ನೆಸ್ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂದಿದ್ದಾರೆ.  ಅವರು  220.5 ಕೋಟಿ ಸಂಪಾದಿಸುವ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಕಾರಣದಿಂದಾಗಿ ಅವರ ಹೆಸರನ್ನು ಗಿನ್ನೆಸ್ ಪುಸ್ತಕದಲ್ಲಿ ದಾಖಲಿಸಲಾಯಿತು. 

4 /6

ಬಾಲಿವುಡ್ ನ ಟಾಪ್ ನಟಿಯರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕತ್ರಿನಾ ಕೈಫ್ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲೂ ಸೇರಿದೆ. 2013 ರಲ್ಲಿ, ಕತ್ರಿನಾ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟಿಯಾಗುವ ಮೂಲಕ ಈ ದಾಖಲೆ ಬರೆದಿದ್ದಾರೆ. ಕತ್ರಿನಾ 63.75 ಕೋಟಿ ಗಳಿಸಿದ್ದರು. 

5 /6

2016ರ ಮಾರ್ಚ್ ನಲ್ಲಿ ನಟಿ ಸೋನಾಕ್ಷಿ ಸಿನ್ಹಾ ಅವರ ಹೆಸರು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ. ಇದಕ್ಕೆ ಕಾರಣ ಕೊಂಚ ವಿಚಿತ್ರವಾಗಿದೆ. ಸೂನಕ್ಷಿ ಒಮ್ಮೆ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಲ್ಲಿ ಒಂದೇ ಸಮಯದಲ್ಲಿ ಹೆಚ್ಚಿನ ಮಹಿಳೆಯರು ತಮ್ಮ ಉಗುರುಗಳಿಗೆ ಬಣ್ಣ ಬಳಿದಿದ್ದರು. 

6 /6

ಬಾಲಿವುಡ್ ನ ಕಪೂರ್ ಕುಟುಂಬದ ಹೆಸರೂ ಗಿನ್ನೆಸ್ ಬುಕ್ ನಲ್ಲಿ ದಾಖಲಾಗಿದ್ದು, ಅವರ ಕುಟುಂಬದ ಬಹುತೇಕ ಮಂದಿ ಬಾಲಿವುಡ್ ಇಂಡಸ್ಟ್ರಿಯಲ್ಲಿರುವುದು ಇದಕ್ಕೆ ಕಾರಣ. ಕಪೂರ್ ಕುಟುಂಬದ ಬಾಲಿವುಡ್ ಪ್ರಯಾಣವು 1929 ರಲ್ಲಿ ಪೃಥ್ವಿರಾಜ್ ಕಪೂರ್ ಅವರೊಂದಿಗೆ ಪ್ರಾರಂಭವಾಯಿತು.

You May Like

Sponsored by Taboola