Vastu Tips: ಈ ಗಿಡಗಳು ಮನೆಯಲ್ಲಿ ಅಥವಾ ಮನೆಯ ಹತ್ತಿರದಲ್ಲಿರಬಾರದು, ಕಾರಣ ಇಲ್ಲಿದೆ

Vastu Tips For Home - ಮನೆಯಲ್ಲಿ ಗಿಡಗಳನ್ನು ನೆಡುವುದರಿಂದ ಹಲವಾರು ಪ್ರಯೋಜನಗಳಿವೆ. ವಾಸ್ತು (Home Vastu Tips) ಪ್ರಕಾರ ತುಳಸಿ, ಕಮಲದಂತಹ ಗಿಡಗಳು (Unlucky Plants) ಮನೆಯಲ್ಲಿದ್ದರೆ, ಮನೆ ಸುತ್ತಲಿನ ಗಾಳಿಯ ಗುಣಮಟ್ಟ ಚೆನ್ನಾಗಿರುತ್ತದೆ. ಅಲ್ಲದೆ ವಾಸ್ತು ದೋಷವೂ ಇರುವುದಿಲ್ಲ. 

Vastu Tips For Home - ಮನೆಯಲ್ಲಿ ಗಿಡಗಳನ್ನು ನೆಡುವುದರಿಂದ ಹಲವಾರು ಪ್ರಯೋಜನಗಳಿವೆ. ವಾಸ್ತು (Home Vastu Tips) ಪ್ರಕಾರ ತುಳಸಿ, ಕಮಲದಂತಹ ಗಿಡಗಳು (Unlucky Plants) ಮನೆಯಲ್ಲಿದ್ದರೆ, ಮನೆ ಸುತ್ತಲಿನ ಗಾಳಿಯ ಗುಣಮಟ್ಟ ಚೆನ್ನಾಗಿರುತ್ತದೆ. ಅಲ್ಲದೆ ವಾಸ್ತು ದೋಷವೂ ಇರುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ (Vastu Shstra), ಕೆಲ ಗಿಡಗಳ ಬಗ್ಗೆ ಹೇಳಲಾಗಿದ್ದು, ಅವು ಮನೆಗೆ ದುರದೃಷ್ಟವನ್ನು (Unlucky Plants For Home) ತರುತ್ತದೆ ಎನ್ನಲಾಗಿದೆ.

 

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
 

 

ಇದನ್ನೂ ಓದಿ-ಮಹಿಳೆಯರು ತಪ್ಪಿಯೂ ಈ ತಪ್ಪುಗಳನ್ನು ಮಾಡದಿರಿ, ಸಂಸಾರ ಜೀವನ ಹಾಳಾಗುವುದಕ್ಕೆ ಇದೂ ಕಾರಣವಾಗಬಹುದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಅಕೇಶಿಯಾ ಗಿಡ - ಅಕೇಶಿಯಾ ಗಿಡವನ್ನು ಮನೆಯೊಳಗೆ ಅಥವಾ ಹತ್ತಿರ ನೆಡಬಾರದು. ವಾಸ್ತುವಿನ ದೃಷ್ಟಿಯಿಂದ ಇದು ಅಶುಭವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ನೆಟ್ಟ ಮನೆಯಲ್ಲಿನ ಸದಸ್ಯರ ಮಧ್ಯೆ ಪರಸ್ಪರ ಹೊಂದಾಣಿಕೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಮನೆಯಲ್ಸಲಿ ದಾ ಗಲಾಟೆ ನಡೆಯುತ್ತಲೇ ಇರುತ್ತದೆ.  

2 /5

2. ಹತ್ತಿ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹತ್ತಿ ಅಥವಾ ರೇಷ್ಮೆ  ಹತ್ತಿಯ ಗಿಡ ನೆಡಬಾರದು. ಈ ಗಿಡಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಇವು ಜೀವನದಲ್ಲಿ ದುರದೃಷ್ಟ ಮತ್ತು ಬಡತನವನ್ನು ಹೆಚ್ಚಿಸುತ್ತವೆ.

3 /5

3. ಗೋರಂಟಿ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೆಹಂದಿ ಗಿಡ ಅಥವಾ ಗೋರಂಟಿ ಗಿಡ ನೆಡಬಾರದು. ಈ ಸಸ್ಯದಲ್ಲಿ ದುಷ್ಟಶಕ್ತಿಗಳು ವಾಸಿಸುತ್ತವೆ ಎಂದು ನಂಬಲಾಗಿದೆ. ಅಲ್ಲದೆ, ಈ ಸಸ್ಯವು ಎಲ್ಲೆಲ್ಲಿ ಇರುತ್ತದೆಯೋ, ಅದರ ಸುತ್ತಲೂ ನಕಾರಾತ್ಮಕ ಶಕ್ತಿಯು ಹರಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸಸ್ಯವನ್ನು ಎಂದಿಗೂ ಮನೆಯೊಳಗೆ ಅಥವಾ ಮನೆಯ ಹತ್ತಿರ ನೆಡಬಾರದು.  

4 /5

4. ಹುಣಸೆ ಮರ - ವಾಸ್ತು ಪ್ರಕಾರ, ಮನೆಯಲ್ಲಿ ಅಥವಾ ಮನೆಯ ಹತ್ತಿರದಲ್ಲಿ  ಹುಣಸೆ ಮರವನ್ನು ನೆಡಬಾರದು. ವಾಸ್ತವದಲ್ಲಿ ನಕಾರಾತ್ಮಕ ಶಕ್ತಿಯು ಈ ಸಸ್ಯದಲ್ಲಿ ನೆಲೆಸಿರುತ್ತದೆ. ಇದಲ್ಲದೇ ಹುಣಸೆ ಮರ ಇರುವ ಜಾಗದಲ್ಲಿ ಮನೆ ಕಟ್ಟುವುದನ್ನು ತಪ್ಪಿಸಬೇಕು.  

5 /5

5. ಒಣಗಿದ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಒಣ ಗಿಡಗಳು ಮನೆಯಲ್ಲಿ ಅಥವಾ ಮನೆಯ ಆವರಣದಲ್ಲಿ ಇರಬಾರದು. ಮನೆಯಲ್ಲಿ  ಮಡಿಕೆಯಲ್ಲಿ ಯಾವುದೇ ಒಂದು ಸಸ್ಯ ಒಣಗಿದ್ದರೆ, ಅದನ್ನು ತಕ್ಷಣವೇ ತೆಗೆದುಹಾಕಬೇಕು, ಏಕೆಂದರೆ ಇಂತಹ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಇದರಿಂದಾಗಿ ಜೀವನದಲ್ಲಿ ದುಃಖಗಳು ಮತ್ತು ತೊಂದರೆಗಳು ಎದುರಾಗುತ್ತಲೇ ಇರುತ್ತವೆ.