ಪ್ರಸ್ತುತ, ಬದಲಾದ ಜೀವನ ಶೈಲಿಯಲ್ಲಿ ಬಹುತೇಕ ಜನರ ಸಾಮಾನ್ಯ ಸಮಸ್ಯೆ ಎಂದರೆ ಅದುವೇ ತೂಕ ಹೆಚ್ಚಳ. ತೂಕ ಹೆಚ್ಚಾಗುವಷ್ಟು ಸುಲಭವಾಗಿ ಇಳಿಕೆಯಾಗುವುದಿಲ್ಲ. ಆದರೆ, ಜಿಮ್ ಅಗತ್ಯವಿಲ್ಲ. ಬದಲಿಗೆ ನಿಮ್ಮ ನಿತ್ಯ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ನೀವು ಸುಲಭವಾಗಿ ಏಳು ದಿನಗಳಲ್ಲಿ ತೂಕವನ್ನು ಕಳೆದುಕೊಳ್ಳಬಹುದು. ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ನಿತ್ಯ ಯಾವ ಆಹಾರಗಳನ್ನು ಸೇವಿಸಬೇಕು ಎಂದು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿತ್ಯ ಮುಂಜಾನೆ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಸೇವಿಸಿ. ಇದು ತ್ವರಿತ ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.
ನಿತ್ಯ ನೀವು ಬೆಳಗಿನ ಉಪಹಾರ ಸೇವಿಸುವ ಮೊದಲು ಮತ್ತು ಹಸಿವಾದಾಗ ಒಂದೆರಡು ಬಾದಾಮಿ, ಕಡಲೆಕಾಯಿ, ವಾಲ್‌ನಟ್‌ಗಳನ್ನು ಸೇವಿಸಿ. ಇದರಿಂದ ಬೇರೆ ಏನನ್ನಾದರೂ ಅತಿಯಾಗಿ ತಿನ್ನುವುದು ತಪ್ಪುತ್ತದೆ. ಇದಲ್ಲದೆ, ನಟ್ಸ್ ಗಳು ಬಲು ಬೇಗ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತವೆ. ಹಾಗಾಗಿ, ತ್ವರಿತ ತೂಕ ಇಳಿಕೆಗಾಗಿ ನಿತ್ಯ ಇವುಗಳನ್ನು ಸೇವಿಸಿ.
ಧಾನ್ಯಗಳು ಫೈಬರ್ ಮತ್ತು ಆರೋಗ್ಯಕರ ಪ್ರಮಾಣದ ಪ್ರೋಟೀನ್ನಲ್ಲಿ ಸಮೃದ್ಧವಾಗಿವೆ. ನಿಮ್ಮ ನಿತ್ಯದ ಡಯಟ್ನಲ್ಲಿ ಧಾನ್ಯಗಳನ್ನು ಸೇವಿಸುವುದರಿಂದ ತ್ವರಿತ ತೂಕ ಇಳಿಕೆ ಸಾಧ್ಯವಾಗುತ್ತದೆ.
ರಾಜ್ಮಾ (ಕಿಡ್ನಿ ಬೀನ್ಸ್), ಅಲಸಂದೆಯಂತಹ ಬೀನ್ಸ್ ಜಾತಿಯ ಕಾಳುಗಳಲ್ಲಿ ಫೈಬರ್ ಸಮೃದ್ಧವಾಗಿದ್ದು, ಇದನ್ನು ಜೀರ್ಣಿಸಿಕೊಳ್ಳಲು ನಿಧಾನವಾಗುತ್ತದೆ. ಹಾಗಾಗಿ, ದೀರ್ಘ ಕಾಲ ಹೊಟ್ಟೆ ತುಂಬಿದ ಅನುಭವವಿರುತ್ತದೆ. ಇದು ನೀವು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಸಹಕಾರಿ ಆಗಿರುವುದರಿಂದ ತೂಕ ನಷ್ಟಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರುತುಮಾನದ ಹಣ್ಣುಗಳು ಕೂಡ ತುಂಬಾ ಪ್ರಯೋಜನಕಾರಿ. ನಿತ್ಯ ಯಾವುದಾರರೊಂದು ಋತುಮಾನದ ಹಣ್ಣುಗಳ ಸೇವನೆಯು ಆರೋಗ್ಯ ವೃದ್ಧಿಯ ಜೊತೆಗೆ ತೂಕ ನಷ್ಟಕ್ಕೂ ಸಹಕಾರಿ ಆಗಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.