KISS ಮಾಡುವಾಗ ಕಣ್ಣುಗಳು ಏಕೆ ಮುಚ್ಚಿಗೊಳ್ಳುತ್ತವೆ? ವಿಜ್ಞಾನ ಏನು ಹೇಳುತ್ತೇ ಗೊತ್ತಾ

                      

Facts About Kiss: ಸುಖ-ದುಃಖಗಳಲ್ಲಿ ಸಂಗಾತಿಯ ಪ್ರೀತಿಯ ಅಪ್ಪುಗೆ, ಒಂದು ಚುಂಬನ ಮನಸ್ಸಿಗೆ ಮುದ ನೀಡುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸಲು, ನೊಂದ ಮನಸ್ಸಿಗೆ ಸಮಾಧಾನ ಪಡಿಸಲು ವರ್ಣಿಸಲಾಗದ ಒಂದು ಸುಲಭ ಮಾರ್ಗವೆಂದರೆ "ಮುತ್ತು".

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಕಿಸ್, ಚುಂಬನವು ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ಅತ್ಯುತ್ತಮ ಮಾರ್ಗ ಎಂದು ಹೇಳಲಾಗುತ್ತದೆ. ಆದರೆ, ಪ್ರೀತಿ ಪಾತ್ರರಿಗೆ ಚುಂಬಿಸುವಾಗ ನಮಗೇ ಗೊತ್ತಿಲ್ಲದಂತೆ ನಮ್ಮ ಕಣ್ಣುಗಳು ಮುಚ್ಚುತ್ತವೆ. ಆದರೆ, ಇದಕ್ಕೆ ಕಾರಣವೇನಿರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ವಾಸ್ತವವಾಗಿ, ಕಿಸ್ ನೀಡುವಾಗ ಕಣ್ಣುಗಳು ಮುಚ್ಚುವುದರ ಹಿಂದೆಯೂ ಕೂಡ ವೈಜ್ಞಾನಿಕ ಕಾರಣವಿದೆ. 

2 /4

ಪ್ರೀತಿ ಪಾತ್ರರಿಗೆ ಚುಂಬಿಸುವಾಗ 'ಸ್ಪರ್ಶ ಸಂವೇದನೆ'ಯಿಂದಾಗಿ ಕಣ್ಣುಗಳು ಮುಚ್ಚುತ್ತವೆ ಎಂದು ಲಂಡನ್ ವಿಶ್ವವಿದ್ಯಾನಿಲಯದ ರಾಯಲ್ ಹಾಲೋವೇ ಅವರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. 

3 /4

ಸಂಗಾತಿಗಳು ಪರಸ್ಪರ ಸನಿಹಕ್ಕೆ ಬಂದಾಗ ಮನಸ್ಸಿನಲ್ಲಿ ಒಂದು ರೀತಿಯ ಭಾವನೆ ಜಾಗೃತಗೊಳ್ಳುತ್ತದೆ. ಇದನ್ನು 'ಸ್ಪರ್ಶ ಸಂವೇದನೆ' ಎನ್ನಲಾಗುವುದು ಎಂದು ಮನಃ ಶಾಸ್ತ್ರಜ್ಞರಾದ  ಸಾಂಡ್ರಾ ಮರ್ಫಿ ಮತ್ತು ಪೊಲ್ಲಿ ಡಾಲ್ಟನ್ ವಿವರಿಸಿದ್ದಾರೆ.

4 /4

ಅಧ್ಯಯನವೊಂದರ ಪ್ರಕಾರ, ಕಿಸ್ ಮಾಡುವಾಗ ಎಂದರೆ ಚುಂಬಿಸುವಾಗ ಪರಸ್ಪರರು ಸಂಪೂರ್ಣವಾಗಿ ಇಡೀ ಜಗತ್ತನ್ನೇ ಮರೆತು ಆ ಕ್ಷಣವನ್ನು ಆಹ್ಲಾದಿಸುವುದು. ಈ ಸಮಯವು ತಮ್ಮನ್ನು ತಾವು ಸಂಪೂರ್ಣವಾಗಿ ತಮ್ಮ ಪಾಲುದಾರರಿಗೆ ಮೀಸಲಿಡುವುದು ಎಂಬುದನ್ನು ಖಾತರಿ ಪಡಿಸುತ್ತದೆ. ಹಾಗಾಗಿಯೇ ಪ್ರೀತಿಪಾತ್ರರು ಚುಂಬಿಸುವಾಗ ಕಣ್ಣುಗಳು ತನ್ನಿಂದ ತಾನೇ ಮುಚ್ಚುತ್ತವೆ. ಕಣ್ಣುಗಳು ತೆರೆದಿದ್ದಾಗ ಹೊರಗಿನ ವಿಷಯಗಳತ್ತ ಗಮನವು ಹೋಗುತ್ತದೆ.