Ugadi 2023: 2 ರಾಜಯೋಗಗಳಿಂದ ಈ ಬಾರಿಯ ಚಂದ್ರಮಾನ ಯುಗಾದಿಯ ಆರಂಭ, ಈ ಜನರ ಜೀವನದಲ್ಲಿ ಅಪಾರ ಹಣ ಹರಿದುಬರಲಿದೆ!

Chandraman Ugadi 2023: ಈ ಬಾರಿ ಹಿಂದೂ ಹೊಸ ವರ್ಷ ಎಂದೇ ಕರೆಯಲಾಗುವ ಯುಗಾದಿ ಸಂವತ್ 2080ರ ಆರಂಭ ಹೊಸ ಕಾಕತಾಳೀಯದೊಂದಿಗೆ ಆರಂಭಗೊಳ್ಳುತ್ತಿದೆ. ಹೀಗಾಗಿ ಇದು ಕೆಲ ರಾಶಿಗಳ ಜನರ ಪಾಲಿಗೆ ಹೊಸ ವರ್ಷವೂ ಅತ್ಯಂತ ಮಂಗಳಕರ ಸಾಬೀತಾಗಲಿದೆ. ಆ ರಾಶಿಗಳು ಯಾವುವು ಮತ್ತು ಆ ಶುಭ ಕಾಕತಾಳೀಯಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
 

Hindu New Year Ugadi  2022: ಈ ಬಾರಿ ಮಾರ್ಚ್ 22 ರಿಂದ ಅಂದರೆ ಚೈತ್ರ ನವರಾತ್ರಿಯ ದಿನದಿಂದ ಹಿಂದೂ ಹೊಸವರ್ಷ (ವಿಕ್ರಮ್ ಸಂವತ್ಸ 2080) ಆರಂಭಗೊಳ್ಳುತ್ತಿದೆ. ಈ ದಿನದ ಮತ್ತೊಂದು ವಿಶೇಷತೆ ಎಂದರೆ ಈ ದಿನ ಎರಡು ರಾಜಯೋಗಗಳು ಕೂಡ ನಿರ್ಮಾಣಗೊಳ್ಳುತ್ತಿವೆ. ಬುದ್ಧಾದಿತ್ಯ ರಾಜಯೋಗ ಹಾಗೂ ಗಜಕೇಸರಿ ರಾಜಯೋಗ ಈ ಯೋಗಗಳಾಗಿವೆ. ಇನ್ನೊಂದೆಡೆ ಈ ಶುಭ ಸಂದರ್ಭದಂದು ಮೀನ ರಾಶಿಯಲ್ಲಿ 5 ಗ್ರಹಗಳ ಮೈತ್ರಿ ನೆರವೇರಲಿದೆ. ಮೀನ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ಜೊತೆಗೆ ಸೂರ್ಯ, ಬುಧ, ಚಂದ್ರ ಹಾಗೂ ನೆಪ್ಚೂನ್ ಗ್ರಹಗಳಿರಲಿವೆ. ಇವುಗಳ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ನೋಡಲು ಸಿಗಲಿದೆ. ಆದರೆ ಮೂರು ರಾಶಿಗಳ ಜನರ ಪಾಲಿಗೆ ವಿಶೇಷವಾಗಿ ಇದು ಭಾರಿ ಧನಲಾಭ ಹಾಗೂ ಉನ್ನತಿಯ ಯೋಗವನ್ನು ಸೃಷ್ಟಿಸಲಿದೆ.

 

ಇದನ್ನೂ ಓದಿ-ಮಂಗಳನ ಮನೆಯಲ್ಲಿ ಮಾಯಾವಿ ರಾಹು-ಧನದಾತ ಶುಕ್ರನ ಮೈತ್ರಿ, 3 ರಾಶಿಗಳ ಜನರಿಗೆ ಧನಲಾಭದ ಜೊತೆಗೆ ಉನ್ನತಿ ಪ್ರಾಪ್ತಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಮಿಥುನ ರಾಶಿ- ಹಿಂದೂ ಹೊಸ ವರ್ಷವು ನಿಮಗೆ ಪ್ರಯೋಜನಕಾರಿ ಸಾಬೀತಾಗಲಿದೆ. ಏಕೆಂದರೆ ಈ ವರ್ಷದಲ್ಲಿ ಗುರುವು ನಿಮ್ಮ ರಾಶಿಯ ಲಾಭದ ಸ್ಥಾನದಲ್ಲಿರಲಿದ್ದಾನೆ. ಮತ್ತೊಂದೆಡೆ, ಸೂರ್ಯದೇವನ ಅನುಕೂಲಕರ ಸ್ಥಾನದಲ್ಲಿರಲಿದ್ದು, ಉತ್ತಮ ಫಲಿತಾಂಶಗಳ ಕಾರಕನಾಗಲಿದ್ದಾನೆ. ಇದರೊಂದಿಗೆ, ನಿಮ್ಮ ಸಂಕ್ರಮಣದ ಜಾತಕದ ದಶಮ ಭಾವದಲ್ಲಿ 2 ರಾಜಯೋಗಗಳು ರೂಪುಗೊಳ್ಳುಟ್ಟಿವೆ. ಹೀಗಾಗಿ ನಿರುದ್ಯೋಗಿಗಳು ಈ ಅವಧಿಯಲ್ಲಿ ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಇದರೊಂದಿಗೆ, ಮಾರ್ಚ್ ನಂತರ ಉದ್ಯೋಗಿಗಳ ವೇತನ ಹೆಚ್ಚಳ ಮತ್ತು ಬಡ್ತಿ ಸಿಗುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮಗೆ ಹೊಸ ಜವಾಬ್ದಾರಿ ಕೂಡ ಸಿಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಬಹುದು. ಅಲ್ಲದೆ, ನಿಮ್ಮ ತಂದೆಯೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರಲಿದೆ.  

2 /3

ಸಿಂಹ ರಾಶಿ- ಹಿಂದೂ ಹೊಸ ವರ್ಷವು ಸಿಂಹ ರಾಶಿಯ ಜನರಿಗೆ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ಅಷ್ಟಮ ಭಾವದಲ್ಲಿ  ಬುಧಾದಿತ್ಯ ಮತ್ತು ಗಜಕೇಸರಿ ರಾಜಯೋಗವು ರೂಪುಗೊಳ್ಳಲಿವೆ. ಹೀಗಾಗಿ, ಈ ಅವಧಿಯಲ್ಲಿ ಸಂಶೋಧನೆ ಕ್ಷೇತ್ರಕ್ಕೆ ಸಂಬಂಧ ಹೊಂದಿರುವವರಿಗೆ, ಈ ಸಮಯವು ಅದ್ಭುತ ಸಾಬೀತಾಗಲಿದೆ. ಅಲ್ಲದೆ, ವೃತ್ತಿಪರರಿಗೆ ಅವಕಾಶಗಳು ಹೆಚ್ಚಾಗಲಿವೆ.ನೀವು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಭಾವದಿಂದ ಮುಂದುವರೆಯುವಿರಿ. ಅಲ್ಲದೆ, ಪಾಲುದಾರಿಕೆಯ ಮನೋಭಾವವು ಈ ಅವಧಿಯಲ್ಲಿ ನಿಮ್ಮ ಬಳಿ ಇರಲಿದೆ. ಇನ್ನೊಂದೆಡೆ ನೀವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಅಲ್ಲದೆ, ಈ ಸಮಯದಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು.  

3 /3

ಧನು ರಾಶಿ- ಹಿಂದೂ ಹೊಸ ವರ್ಷವು ನಿಮಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಚತುರ್ಥ ಭಾವದಲ್ಲಿ 2 ರಾಜಯೋಗಗಳು ರೂಪುಗೊಳ್ಳಲಿವೆ. ಹೀಗಾಗಿ  ಈ ಅವಧಿಯಲ್ಲಿ  ನಿಮ್ಮ ಸಂತೋಷ ಮತ್ತು ಸಂಪನ್ಮೂಲಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಅಲ್ಲದೆ, ಈ ಸಮಯದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ವ್ಯಕ್ತಿತ್ವವು ಮತ್ತಷ್ಟು ಸುಧಾರಿಸುತ್ತದೆ. ಭೂಮಿ-ಕಟ್ಟಡದ ವಿಷಯಗಳ ಕುರಿತು ಚರ್ಚೆ ನಡೆಸುವಿರಿ. ಪ್ರಯಾಣದ ಸಾಧ್ಯತೆಗಳು ಹೆಚ್ಚಾಗಲಿವೆ. ಈ ಅವಧಿಯಲ್ಲಿ  ನಿಮಗೆ ಪಿತ್ರಾರ್ಜಿತ ಆಸ್ತಿ ಪ್ರಾಪ್ತಿಯಾಗಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಯಾವುದೇ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಮತ್ತೊಂದೆಡೆ, ಆಸ್ತಿ ಕೆಲಸ ಮಾಡುವವರಿಗೆ, ಈ ಸಮಯವು ಅದ್ಭುತವಾಗಿರುತ್ತದೆ. ಇದರೊಂದಿಗೆ ಈ ರಾಜಯೋಗಗಳ ದೃಷ್ಟಿ ನಿಮ್ಮ ಜಾತಕದ ದಶಮ ಭಾವದ ಮೇಲೆ ಇರಲಿದೆ. ಹೀಗಾಗಿ ಈ ಸಮಯದಲ್ಲಿ ನೀವು ಕೆಲಸ-ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆದರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)