ಅದೃಷ್ಟ ಹಿಂಬಾಲಿಸಬೇಕಾದರೆ ಗೋಡೆ ಗಡಿಯಾರವನ್ನು ಈ ದಿಕ್ಕಿನಲ್ಲಿಯೇ ಹಾಕಿ ! ಜೀವನದ ಶುಭ ಸಮಯವೂ ಶುರುವಾಗುವುದು !

ಮನೆಯಲ್ಲಿ ಗಡಿಯಾರ ನೇತು ಹಾಕುವುದಕ್ಕೂ ಶುಭ ದಿಕ್ಕು ಎನ್ನುವುದಿದೆ. ಆ ದಿಕ್ಕಿನಲ್ಲಿ ಗಡಿಯಾರ ಹಾಕಿದರೆ ಮನೆ ಮಂದಿಗೆ ಶ್ರೇಯಸ್ಸು. 

Written by - Ranjitha R K | Last Updated : Aug 30, 2024, 05:53 PM IST
  • ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿಗೆ ಹಾಕಿದರೆ ಶುಭ ?
  • ಈ ದಿಕ್ಕಿನಲ್ಲಿ ಗಡಿಯಾರ ಹಾಕಲೇ ಬಾರದು
  • ಸಮಯ ಬದಲಾಯಿಸಿ ಬಿಡುತ್ತದೆ ಗಡಿಯಾರದ ದಿಕ್ಕು
ಅದೃಷ್ಟ ಹಿಂಬಾಲಿಸಬೇಕಾದರೆ ಗೋಡೆ ಗಡಿಯಾರವನ್ನು ಈ ದಿಕ್ಕಿನಲ್ಲಿಯೇ ಹಾಕಿ ! ಜೀವನದ ಶುಭ ಸಮಯವೂ ಶುರುವಾಗುವುದು ! title=

ಬೆಂಗಳೂರು : ಜೀವನದಲ್ಲಿ ಸಮಯ ಅತ್ಯಂತ ಮಹತ್ವದ್ದಾಗಿದೆ.ಸಮಯ ಚೆನ್ನಾಗಿದ್ದರೆ ಯಾರು ಬೇಕಾದರೂ ರಾಜನಾಗಬಹುದು.ಸಮಯ ಕೆಟ್ಟದಾಗಿದ್ದರೆ ರಾಜನಿಂದ ಭಿಕ್ಷುಕನಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.ಸನಾತನ ಧರ್ಮದಲ್ಲಿ,ಕೆಟ್ಟ ಸಮಯವನ್ನು ತೊಡೆದುಹಾಕಲು ವಾಸ್ತು ಪರಿಹಾರಗಳನ್ನು ಸೂಚಿಸಲಾಗಿದೆ.ಗೋಡೆ ಗಡಿಯಾರ ಇದಕ್ಕೆ ಸಂಬಂಧಿಸಿದ ಈ ವಾಸ್ತು ಪರಿಹಾರಗಳಲ್ಲಿ ಒಂದಾಗಿದೆ.ವಾಸ್ತುಶಾಸ್ತ್ರಜ್ಞರ ಪ್ರಕಾರ, ಮನೆಯಲ್ಲಿ ಎಲ್ಲಿ ಬೇಕೋ ಅಲ್ಲಿ ಗಡಿಯಾರವನ್ನು ನೇತು ಹಾಕುವುದು ಸರಿಯಲ್ಲ.ಕೈಗಡಿಯಾರವನ್ನು ತಪ್ಪಾದ ದಿಕ್ಕಿನಲ್ಲಿ ನೇತು ಹಾಕುವುದರಿಂದ ಸಮಸ್ಯೆ ಎದುರಾಗುವುದು. 

ಗೋಡೆಯ ಗಡಿಯಾರವನ್ನು ನೇತುಹಾಕಲು ಮಂಗಳಕರ ದಿಕ್ಕುಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ,ಸಂಪತ್ತಿನ ದೇವರು ಕುಬೇರನು ಉತ್ತರ ದಿಕ್ಕಿನಲ್ಲಿ ಆಳ್ವಿಕೆ ನಡೆಸುತ್ತಾನೆ.ದೇವತೆಗಳ ರಾಜನು ಪೂರ್ವ ದಿಕ್ಕಿನಲ್ಲಿ ನೆಲೆಸುತ್ತಾನೆ.  ಈ ಕಾರಣಕ್ಕಾಗಿ ಈ ಎರಡೂ ದಿಕ್ಕುಗಳನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.ಈ ಎರಡೂ ದಿಕ್ಕುಗಳಲ್ಲಿ ಗೋಡೆ ಗಡಿಯಾರವನ್ನು ನೇತು ಹಾಕುವುದರಿಂದ ಮನೆಯಲ್ಲಿ ಧನಾತ್ಮಕ ಹರಿವು ಹೆಚ್ಚಾಗುತ್ತದೆ.ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಹಾಕುವುದರಿಂದ ಪೂರ್ಣಗೊಳ್ಳದೆ ಉಳಿದಿರುವ ಕೆಲಸ ಆದಷ್ಟು ಬೇಗ ನೆರವೇರುವುದು. 

ಇದನ್ನೂ ಓದಿ : ಕುಂಭದಲ್ಲಿ ಶನಿಯ ಹಿಮ್ಮುಖ ಚಲನೆ: ಈ 3 ರಾಶಿಯ ಜನರಿಗೆ ಭರ್ಜರಿ ಲಾಭ ಸಿಗಲಿದೆ!

ಗೋಡೆ ಗಡಿಯಾರವನ್ನು ಪಶ್ಚಿಮ ದಿಕ್ಕಿನಲ್ಲಿ ನೇತು ಹಾಕಬಹುದೇ? : 
ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಗಡಿಯಾರವನ್ನು ನೇತುಹಾಕಲು ಮನೆಯಲ್ಲಿ ಸೂಕ್ತ ಜಾಗ ಇಲ್ಲ ಎಂದಾದರೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಹಾಕಬಹುದು. ಪಶ್ಚಿಮ ದಿಕ್ಕಿನಲ್ಲಿ ನೇತು ಹಾಕಬಹುದೇ ಎನ್ನುವ ಪ್ರಶ್ನೆ ಕಾಡುತ್ತಿದ್ದರೆ ಅದಕ್ಕೆ ಉತ್ತರ ಇಲ್ಲ. ವಾಸ್ತು ತಜ್ಞರ ಪ್ರಕಾರ ಪಶ್ಚಿಮವು ಪೂರ್ವ ಮತ್ತು ಉತ್ತರ ದಿಕ್ಕಿನಷ್ಟು ಶುಭವಲ್ಲ. ಆದರೆ ಗಡಿಯಾರವನ್ನು ಅಲ್ಲಿ ನೇತುಹಾಕುವುದರಿಂದ ಯಾವುದೇ ಹಾನಿಯಾಗುವುದಿಲ್ಲ. ಕುಟುಂಬಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. 

ಯಾವ ದಿಕ್ಕಿನಲ್ಲಿ ಗೋಡೆ ಗಡಿಯಾರವನ್ನು  ಹಾಕಬಾರದು ? : 
ವಾಸ್ತು ಶಾಸ್ತ್ರದ ಪ್ರಕಾರ,ದಕ್ಷಿಣ ದಿಕ್ಕನ್ನು ಸಾವಿನ ದೇವರು ಯಮರಾಜನ ದಿಕ್ಕು ಎಂದು ಕರೆಯಲಾಗುತ್ತದೆ. ಹಾಗಾಗಿ ಇದು ಅಶುಭ ದಿಕ್ಕು ಎಂದೇ ಕರೆಯಲ್ಪಡುತ್ತದೆ. ಆದ್ದರಿಂದ,ಗೋಡೆ ಗಡಿಯಾರವನ್ನು ದಕ್ಷಿಣಕ್ಕೆ ತೂಗು ಹಾಕಬಾರದು. ಗಡಿಯಾರವನ್ನು ಈ ದಿಕ್ಕಿನಲ್ಲಿ ನೇತು ಹಾಕಿದರೆ ಯಮರಾಜನನ್ನು ಭೇಟಿಯಾಗುವ ಸಮಯ ಹತ್ತಿರ ಬರುತ್ತಿದೆ ಎಂದರ್ಥ.ಹೀಗೆ ಮಾಡುವುದರಿಂದ ಮನೆಯಲ್ಲಿ ರೋಗರುಜಿನಗಳು ಹೆಚ್ಚಾಗುತ್ತವೆ ಮತ್ತು ಆರ್ಥಿಕ ಮುಗ್ಗಟ್ಟು ಇಡೀ ಕುಟುಂಬವನ್ನು ಆವರಿಸುತ್ತದೆ.

ಇದನ್ನೂ ಓದಿ : ವೃತ್ತಿಯಲ್ಲಿ ಹಠಾತ್ ಬೆಳವಣಿಗೆ, ಸಾಕಷ್ಟು ಹಣ; ಗುರುವಿನ ಹಿಮ್ಮುಖ ಚಲನೆಯು 5 ರಾಶಿಯ ಜನರಿಗೆ ಸುಖ-ಸಂತೋಷ ನೀಡುತ್ತದೆ!

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News