ಶುಕ್ರ ಗೋಚಾರ: ಇನ್ನು ನಾಲ್ಕೇ ದಿನದಲ್ಲಿ ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರೀತಿ, ಸಂತೋಷ, ಐಶಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಗ್ರಹ ಇನ್ನು ನಾಲ್ಕು ದಿನಗಳಲ್ಲಿ ಮೇಷ ರಾಶಿಯನ್ನು ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

Written by - Yashaswini V | Last Updated : Mar 8, 2023, 03:10 PM IST
  • ಶುಕ್ರ ಗ್ರಹವು ಮಾರ್ಚ್ 12 ರಂದು, ಮೇಷ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
  • ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ.
  • ಇದೇ ಸಂದರ್ಭದಲ್ಲಿ ಶುಕ್ರನು ಮೂರು ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ
ಶುಕ್ರ ಗೋಚಾರ: ಇನ್ನು ನಾಲ್ಕೇ ದಿನದಲ್ಲಿ ಬದಲಾಗಲಿದೆ ಈ ರಾಶಿಯವರ ಅದೃಷ್ಟ  title=
Shukra gochar 2023

ಬೆಂಗಳೂರು: ವೈದಿಕ ಜ್ಯೋತಿಷ್ಯದಲ್ಲಿ ಸಂಪತ್ತು, ಐಷಾರಾಮಿ, ಪ್ರೀತಿ, ಸಂತೋಷ ಮತ್ತು ಸೌಂದರ್ಯದ ಅಂಶ ಎಂದು ಕರೆಯಲ್ಪಡುವ ಶುಕ್ರನನ್ನು ಶುಭ ಗ್ರಹ ಎಂತಲೂ ಪರಿಗಣಿಸಲಾಗುತ್ತದೆ. ಶುಕ್ರ ಗ್ರಹವು ಮಾರ್ಚ್ 12 ರಂದು, ಮೇಷ ರಾಶಿಗೆ ಪದಾರ್ಪಣೆ ಮಾಡಲಿದ್ದು ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ. ಇದೇ ಸಂದರ್ಭದಲ್ಲಿ ಶುಕ್ರನು ಮೂರು ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ....

ನಾಲ್ಕು ದಿನಗಳಲ್ಲಿ ಮೇಷ ರಾಶಿಗೆ ಶುಕ್ರನ ಪ್ರವೇಶ: ಈ ರಾಶಿಯವರಿಗೆ ಭಾರೀ ಅದೃಷ್ಟ 
ಮೇಷ ರಾಶಿ: 

ಮೇಷ ರಾಶಿಯಲ್ಲಿಯೇ ಶುಕ್ರ ರಾಶಿ ಪರಿವರ್ತನೆ ಮಾಡುವುದರಿಂದ ಇದರ ಗರಿಷ್ಠ ಪರಿಣಾಮ ಈ ರಾಶಿಯವರ ಮೇಲೆಯೇ ಕಂಡು ಬರಲಿದೆ. ಮೇಷ ರಾಶಿಯಲ್ಲಿ ಈಗಾಗಲೇ ನೆರಳು ಗ್ರಹ ರಾಹು ನೆಲೆಸಿದ್ದು ಶುಕ್ರ-ರಾಹು ಸಂಯೋಗವು ಈ ರಾಶಿಯವರಿಗೆ ಶುಭ ಫಲಗಳನ್ನು ತರಲಿದೆ. ವ್ಯಾಪಾರ-ವ್ಯವಹಾರದಲ್ಲಿ ಅಪಾರ ಲಾಭದ ಜೊತೆಗೆ ಕೀರ್ತಿಯನ್ನು ಗಳಿಸುವಿರಿ. ಆರ್ಥಿಕ ಸ್ಥಿತಿ ಸುಧಾರಣೆಯಿಂದ ಸಂತೋಷದ ಜೀವನ ನಿಮ್ಮದಾಗಲಿದೆ.

ಇದನ್ನೂ ಓದಿ- Budha Gochar: ಈ ರಾಶಿಯವರಿಗೆ ವಿಪರೀತ ರಜಯೋಗದಿಂದ ಸರ್ವಾಂಗೀಣ ಅಭಿವೃದ್ಧಿ

ಮಿಥುನ ರಾಶಿ: 
ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ವಿಶೇಷ ಲಾಭವಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆ ಇದ್ದು ಕೌಟುಂಬಿಕ ಸುಖ ವೃದ್ಧಿಯಾಗಲಿದೆ.

ಇದನ್ನೂ ಓದಿ- ಮಾಸ ಭವಿಷ್ಯ: ಮಾರ್ಚ್ ತಿಂಗಳಿನಲ್ಲಿ ಪ್ರಕಾಶಿಸಲಿದೆ ಈ ರಾಶಿಯವರ ಅದೃಷ್ಟ

ಮಕರ ರಾಶಿ:
ಶುಕ್ರ ರಾಶಿ ಪರಿವರ್ತನೆಯು ಮಕರ ರಾಶಿಯವರ ಜೀವನದಲ್ಲಿಯೂ ಸಂಪತ್ತಿನ ಸುರಿಮಳೆ ಸುರಿಸಲಿದೆ. ಉದ್ಯೋಗದಲ್ಲಿ ಪ್ರಗತಿ, ಆಸ್ತಿ-ವಾಹನ ಖರೀದಿಯ ಯೋಗವೂ ಇದೆ. ಒಟ್ಟಾರೆಯಾಗಿ ಈ ಸಂದರ್ಭದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News