ಸಾಯುತ್ತಿರುವವರ ವ್ಯಕ್ತಿಯ ಬಾಯಿಗೆ ಇವುಗಳಲ್ಲಿ ಒಂದನ್ನು ಹಾಕಿದರೂ ಮೋಕ್ಷ ಪ್ರಾಪ್ತಿ!

Death Rituals: ಪ್ರತಿಯೊಬ್ಬ ವ್ಯಕ್ತಿಯು ಸತ್ತ ಮೇಲೆ ತನಗೂ ಮೋಕ್ಷ ಸಿಗಬೇಕು ಎಂದು ಬಯಸುತ್ತಾನೆ.  ಹಿಂದೂ ಧರ್ಮಗ್ರಂಥಗಳಲ್ಲಿ ಸಾಯುವ ವ್ಯಕ್ತಿ ಮೋಕ್ಷವನ್ನು ಪಡೆಯಲು ಅನೇಕ ನಂಬಿಕೆಗಳನ್ನು ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಯಾವುದಾದರೂ ಒಂದನ್ನಾದರೂ ಸಾಯುವ ವ್ಯಕ್ತಿಯ ಬಾಯಿಗೆ ಹಾಕುವುದರಿಂದ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ. 

Written by - Yashaswini V | Last Updated : Sep 21, 2022, 02:41 PM IST
  • ಹಿಂದೂ ಧರ್ಮದಲ್ಲಿ ಗಂಗಾಜಲವನ್ನು ಅತ್ಯಂತ ಪವಿತ್ರ ಮತ್ತು ಪರಿಶುದ್ಧ ಜಲವೆಂದು ಪರಿಗಣಿಸಲಾಗಿದೆ.
  • ಗಂಗಾಜಲವನ್ನು ಯಾವುದೇ ಪೂಜೆಯಲ್ಲಿ ದೊಡ್ಡ ಆಚರಣೆಗಳಿಗೆ ಬಳಸಲಾಗುತ್ತದೆ.
  • ಮರಣದ ಸಮಯದಲ್ಲಿ ಗಂಗಾಜಲವನ್ನು ಬಾಯಿಯಲ್ಲಿ ಹಾಕಿದರೆ, ದೇಹವನ್ನು ಬಿಡುವಾಗ ಆತ್ಮಕ್ಕೆ ತೊಂದರೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಸಾಯುತ್ತಿರುವವರ ವ್ಯಕ್ತಿಯ ಬಾಯಿಗೆ ಇವುಗಳಲ್ಲಿ ಒಂದನ್ನು ಹಾಕಿದರೂ ಮೋಕ್ಷ ಪ್ರಾಪ್ತಿ! title=
Tips For Moksha

ಮೋಕ್ಷಕ್ಕಾಗಿ ಆಸ್ಟ್ರೋ ಸಲಹೆ: ಹುಟ್ಟಿದವರು ಒಂದಲ್ಲಾ ಒಂದು ದಿನ ಸಾಯಲೇ ಬೇಕು ಎಂಬುದು ಜೀವನದ ಸತ್ಯ. ಹುಟ್ಟಿದವನು ಸಾಯುವುದು ನಿಶ್ಚಿತ. ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಮಾನವ ಧರ್ಮದ ಅಂತಿಮ ಗುರಿ ಮೋಕ್ಷದ ಸಾಧನೆಯಾಗಿದೆ. ಇದಕ್ಕಾಗಿ, ಶಾಸ್ತ್ರಗಳಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಹುಟ್ಟಿನಂತೆಯೇ ಸಾವಿನ ಬಗ್ಗೆಯೂ ಅನೇಕ ನಂಬಿಕೆಗಳಿವೆ. ಸಾಯುವ ವ್ಯಕ್ತಿಯ ಬಾಯಿಗೆ ತುಳಸಿ, ಗಂಗಾಜಲ ಅಥವಾ ಚಿನ್ನ ಇತ್ಯಾದಿಗಳನ್ನು ಹಾಕುವುದರಿಂದ ಆ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಈ ನಂಬಿಕೆಗಳಲ್ಲಿ ಒಂದಾಗಿದೆ. ಇದರ ಹಿಂದಿನ ಸತ್ಯವನ್ನು ತಿಳಿಯೋಣ. 

ಗಂಗಾಜಲ: 
ಹಿಂದೂ ಧರ್ಮದಲ್ಲಿ ಗಂಗಾಜಲವನ್ನು ಅತ್ಯಂತ ಪವಿತ್ರ ಮತ್ತು ಪರಿಶುದ್ಧ ಜಲವೆಂದು ಪರಿಗಣಿಸಲಾಗಿದೆ. ಗಂಗಾಜಲವನ್ನು ಯಾವುದೇ ಪೂಜೆಯಲ್ಲಿ ದೊಡ್ಡ ಆಚರಣೆಗಳಿಗೆ ಬಳಸಲಾಗುತ್ತದೆ. ಗಂಗೆಯು ಭಗವಾನ್ ವಿಷ್ಣುವಿನ ಪಾದಗಳ ಮೂಲಕ ಹರಿಯುತ್ತದೆ ಮತ್ತು ಶಿವನ ರೋಮಗಳಲ್ಲಿ ನೆಲೆಸಿದ್ದಾಳೆ ಎಂಬ ಬಗ್ಗೆ ಪುರಾಣಗಳಲ್ಲಿ ವಿವರಣೆ ನೀಡಲಾಗಿದೆ. ಆದ್ದರಿಂದಲೇ ಗಂಗಾಜಲದ ಕುರಿತು ಹೇಳುವುದಾದರೆ, ಮರಣದ ಸಮಯದಲ್ಲಿ ಗಂಗಾಜಲವನ್ನು ಬಾಯಿಯಲ್ಲಿ ಹಾಕಿದರೆ, ದೇಹವನ್ನು ಬಿಡುವಾಗ ಆತ್ಮಕ್ಕೆ ತೊಂದರೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಐದು ದಿನಗಳಲ್ಲಿ ಕನ್ಯಾ ರಾಶಿಗೆ ಶುಕ್ರನ ಪ್ರವೇಶ: ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

ಚಿನ್ನ:
ಮೋಕ್ಷ ಪ್ರಾಪ್ತಿ ಮತ್ತು ಶಿಕ್ಷೆಯನ್ನು ತಪ್ಪಿಸುವ ಬಗ್ಗೆ ಇರುವ ಇನ್ನೊಂದು ನಂಬಿಕೆ ಎಂದರೆ ಸಾವಿಗೂ ಮೊದಲು ವ್ಯಕ್ತಿಯ ಬಾಯಿಗೆ ಚಿನ್ನ ಹಾಕುವುದರಿಂದಲೂ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಬಾಲ್ಕನಿಯಲ್ಲಿ ಈ ಮನಿ ಪ್ಲಾಂಟ್‌ಗಳನ್ನು ಇಟ್ಟರೆ, ಸುರಿಯಲಿದೆ ಹಣದ ಮಳೆ!

ತುಳಸಿ ದಳ:
ಗಂಗಾಜಲ, ಬಂಗಾರದ ಹೊರತಾಗಿ ತುಳಸಿ ಎಲೆಗಳ ಬಗ್ಗೆಯೂ ಕೆಲವು ವಿಷಯಗಳನ್ನು ಹೇಳಲಾಗಿದೆ. ಮರಣದ ಸಮಯದಲ್ಲಿ ವ್ಯಕ್ತಿಯ ಬಾಯಿಯಲ್ಲಿ ತುಳಸಿ ದಳವನ್ನು ಇಡುವುದರಿಂದ ವ್ಯಕ್ತಿಯು ಶಿಕ್ಷೆಯನ್ನು ಎದುರಿಸುವುದಿಲ್ಲ ಎಂದು ಹೇಳಲಾಗುತ್ತದೆ. ವಿಷ್ಣುವಿನ ತಲೆಯ ಮೇಲೆ ತುಳಸಿ ದಳವನ್ನು ಹಾಕುವುದರಿಂದ ವ್ಯಕ್ತಿಯು ನೇರ ಸ್ವರ್ಗಕ್ಕೆ ಹೋಗುತ್ತಾನೆ, ಅವನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News