ಕಾಲಿಗೆ ಚಿನ್ನದ ಉಂಗುರ ಧರಿಸಬೇಡಿ: ಪತಿ-ಪತ್ನಿಗೆ ಈ ಸಮಸ್ಯೆ ಕಟ್ಟಿಟ್ಟಬುತ್ತಿ!

ಚಿನ್ನ-ಬೆಳ್ಳಿ, ವಜ್ರ ಸೇರಿದಂತೆ ಒಟ್ಟಾರೆ ಒಡವೆಗಳು ವಿವಾಹಿತ ಮಹಿಳೆ ಅಥವಾ ಮದುಮಗಳಿಗೆ ಅತೀ ಮುಖ್ಯವಾದ ಅಂಶಗಳು. ಅದರಲ್ಲಿ ಕೆಲವು ಬೆಳ್ಳಿಯಲ್ಲಿ ತಯಾರಿಸಿದ ವಸ್ತುಗಳನ್ನು ಮಾತ್ರ ಧರಿಸಬೇಕು ಎಂಬ ನಿಯಮವೂ ಇದೆ. ಚಿನ್ನದಿಂದ ಮಾಡಿದ ಅಂತಹ ಆಭರಣಗಳನ್ನು ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. 

Written by - Bhavishya Shetty | Last Updated : Jul 26, 2022, 02:58 PM IST
  • ಹಿಂದೂ ಧರ್ಮದಲ್ಲಿ ಚಿನ್ನದ ಕಾಲುಂಗುರ ಧರಿಸಬಾರದು
  • ಚಿನ್ನದಿಂದ ಮಾಡಿದ ಅಂತಹ ಆಭರಣಗಳನ್ನು ಕಾಲಿಗೆ ಹಾಕಬಾರದು
  • ಲಕ್ಷ್ಮೀ ಸಂಕೇತವಾದ ಚಿನ್ನವನ್ನು ಪಾದಗಳಲ್ಲಿ ಧರಿಸುವುದು ಅಗೌರವವನ್ನು ತೋರಿದಂತೆ!
ಕಾಲಿಗೆ ಚಿನ್ನದ ಉಂಗುರ ಧರಿಸಬೇಡಿ: ಪತಿ-ಪತ್ನಿಗೆ ಈ ಸಮಸ್ಯೆ ಕಟ್ಟಿಟ್ಟಬುತ್ತಿ!  title=
Astro Tips

ಹಿಂದೂ ಧರ್ಮದಲ್ಲಿ, ವಿವಾಹಿತ ಮಹಿಳೆಯರಿಗೆ ಕೆಲವು ಪ್ರಮುಖ ನಿಯಮಗಳನ್ನು ನೀಡಲಾಗಿದೆ. ಇದರಲ್ಲಿ ಅವರ ಆಭರಣಗಳಿಗೆ ಸಂಬಂಧಿಸಿದ ನಿಯಮಗಳೂ ಸೇರಿವೆ. ಭಾರತೀಯ ಸಂಸ್ಕೃತಿಯಲ್ಲಿ, ವಿವಾಹಿತ ಮಹಿಳೆಯರು ಹದಿನಾರು ಬಗೆಯ ಅಂಶಗಳನ್ನು ಧರಿಸಬೇಕು. ಇದರಲ್ಲಿ ಆಭರಣಗಳು ಸಹ ಒಂದು. 

ಚಿನ್ನ-ಬೆಳ್ಳಿ, ವಜ್ರ ಸೇರಿದಂತೆ ಒಟ್ಟಾರೆ ಒಡವೆಗಳು ವಿವಾಹಿತ ಮಹಿಳೆ ಅಥವಾ ಮದುಮಗಳಿಗೆ ಅತೀ ಮುಖ್ಯವಾದ ಅಂಶಗಳು. ಅದರಲ್ಲಿ ಕೆಲವು ಬೆಳ್ಳಿಯಲ್ಲಿ ತಯಾರಿಸಿದ ವಸ್ತುಗಳನ್ನು ಮಾತ್ರ ಧರಿಸಬೇಕು ಎಂಬ ನಿಯಮವೂ ಇದೆ. ಚಿನ್ನದಿಂದ ಮಾಡಿದ ಅಂತಹ ಆಭರಣಗಳನ್ನು ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. 

ಇದನ್ನೂ ಓದಿ: ಕಾರ್ಗಿಲ್ ವಿಜಯ್ ದಿವಸ್: ಪಾಕ್‌ ಕ್ರೂರಿಗಳ ಹುಟ್ಟಡಗಿಸಲು ವೀರ ಯೋಧರಿಗೆ ಸಹಾಯ ಮಾಡಿದ್ದರು ಈ ಜನ!

ಈ ಆಭರಣಗಳು ಕಾಲುಗಳಿಗೆ ಧರಿಸುವ ಕಾಲುಂಗುರಗಳಿಗೂ ಅನ್ವಯಿಸುತ್ತದೆ. ಹಿಂದೂ ಧರ್ಮದಲ್ಲಿ ಚಿನ್ನದ ಕಾಲುಂಗುರ ಮತ್ತು ಗೆಜ್ಜೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಚಿನ್ನದ ಕಾಲುಂಗುರ ಅಥವಾ ಗೆಜ್ಜೆ ಧರಿಸಿದರೆ ಧಾರ್ಮಿಕ-ಜ್ಯೋತಿಷ್ಯ ದೋಷಗಳು ಉಂಟಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.

ಚಿನ್ನದ ಕಾಲುಂಗುರ ಅಶುಭ:
ಮಹಿಳೆಯರು ಬೆಳ್ಳಿಯ ಕಾಲುಂಗುರುಗಳನ್ನು ಮಾತ್ರ ಧರಿಸಬೇಕು. ಚಿನ್ನದ ಕಾಲುಂಗುರ ಧರಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಮಹಿಳೆಯರು ತಲೆಯಿಂದ ಸೊಂಟದವರೆಗೆ ಮಾತ್ರ ಚಿನ್ನದ ಆಭರಣಗಳನ್ನು ಧರಿಸಬೇಕು. ಪಾದಗಳಲ್ಲಿ ಚಿನ್ನವನ್ನು ಧರಿಸುವುದು ಅಶುಭ. ವಾಸ್ತವವಾಗಿ ಬೆಳ್ಳಿ ಚಂದ್ರನ ಗ್ರಹಕ್ಕೆ ಸಂಬಂಧಿಸಿದೆ. ಮತ್ತೊಂದೆಡೆ, ಚಿನ್ನವು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ಲಕ್ಷ್ಮೀ ಸಂಕೇತವಾದ ಚಿನ್ನವನ್ನು ಪಾದಗಳಲ್ಲಿ ಧರಿಸುವುದು ದೇವಿಗೆ ಅಗೌರವವನ್ನು ತೋರಿದಂತೆ ಎಂಬುದು ಹಿಂದೂ ಧರ್ಮದಲ್ಲಿರುವ ನಂಬಿಕೆ. ಆದ್ದರಿಂದ ಪಾದಗಳಿಗೆ ಚಿನ್ನವನ್ನು ಧರಿಸಬಾರದು. ಮತ್ತೊಂದೆಡೆ, ವೈಜ್ಞಾನಿಕ ದೃಷ್ಟಿಕೋನದಿಂದ ಬೆಳ್ಳಿಯ ಪರಿಣಾಮವು ತಂಪಾಗಿರುತ್ತದೆ ಮತ್ತು ಇದು ಪಾದಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ: Birth month personality: ನಿಮ್ಮ ಹುಟ್ಟಿದ ತಿಂಗಳು ಹೇಳುತ್ತೆ ನೀವು ಎಂಥವರು ಅಂತಾ!

ಕಾಲುಂಗುರ ಧರಿಸುವಲ್ಲಿ ಈ ನಿಯಮಗಳನ್ನು ಪಾಲಿಸಿ
ಚಿನ್ನದ ಕಾಲುಂಗುರ ಧರಿಸಬಾರದು ಎಂಬ ಮಾತು ಒಂದೆಡೆಯಾದರೆ, ಇನ್ನೂ ಕೆಲ ನಿಯಮಗಳು ಕಾಲುಂಗುರಕ್ಕೆ ಇದೆ. ಅಂತಹ ಕೆಲವು ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಇದರ ಪ್ರಕಾರ, ಮಹಿಳೆಯರು ಬೇರೊಬ್ಬರ ಕಾಲುಂಗುರ ಧರಿಸಬಾರದು, ಜತೆಗೆ ಬೇರೆಯವರಿಗೆ ನೀಡಬಾರದು. ಒಂದು ವೇಳೆ ಈ ತಪ್ಪುಗಳನ್ನು ಮಾಡಿದರೆ, ಅವಿವಾಹಿತ ಹೆಣ್ಣು ಮಗಳಿಗೆ ಸಮಸ್ಯೆಯಾಗುತ್ತದೆ. ಅಷ್ಟೇ ಅಲ್ಲದೆ, ವಿವಾಹಿತ ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ಆಕೆಯ ಗಂಡನಿಗೆ ಸಾಲಬಾಧೆಯು ಹೆಚ್ಚಾಗತೊಡಗಬಹುದು. ಪತಿ ಮತ್ತು ಪತ್ನಿಯ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಸೇರಿದಂತೆ ಇತರ ಸಮಸ್ಯೆಗಳೂ ಸಹ ಕಂಡುಬರಬಹುದು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News