ಗಣೇಶ ಚತುರ್ಥಿಯು ಭಾರತದಲ್ಲಿ ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ.ಈ ಹಬ್ಬವು ಪ್ರಮುಖವಾಗಿ ಗಣೇಶನ ಜನ್ಮದಿನವನ್ನು ಸೂಚಿಸುತ್ತದೆ.ಗಣೇಶನನ್ನು ಹಿಂದು ಧಾರ್ಮಿಕ ಗ್ರಂಥಗಳ ಪ್ರಕಾರ ಜ್ಞಾನ, ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ದೇವರೆಂದು ಭಾವಿಸಿದ್ದಾರೆ.ಇದನ್ನು ಬಹುತೇಕ ಭಾಗಗಳಲ್ಲಿ ವಿನಾಯಕ ಚತುರ್ಥಿ ಅಥವಾ ವಿನಾಯಕ ಚವಿತಿ ಎಂದೂ ಕರೆಯುತ್ತಾರೆ. ಈ ದಿನವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಮಂಗಳಕರವೆಂದು ಆಚರಿಸಲಾಗುತ್ತದೆ, ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ.
ಗಣೇಶ ಚತುರ್ಥಿ ಹಬ್ಬದ ಇತಿಹಾಸ:
ಗಣೇಶ ಚತುರ್ಥಿಯ ಹಬ್ಬವು ಮೊದಲ ಬಾರಿಗೆ ಮರಾಠರ ಆಳ್ವಿಕೆಯಲ್ಲಿ ಆರಂಭಿಸಲಾಯಿತು,ಅದರಲ್ಲೂ ಛತ್ರಪತಿ ಶಿವಾಜಿ ಮಹಾರಾಜರು ಈ ಹಬ್ಬವನ್ನು ತಮ್ಮ ಕಾಲಾವಧಿಯಲ್ಲಿ ಆರಂಭಿಸಿದರು.ಶಿವ ಪಾರ್ವತಿಯರ ಮಗನಾದ ಗಣೇಶನು ಹುಟ್ಟಿರುವ ಕುರಿತಾಗಿ ಹಲಾವಾರು ದಂತಕಥೆಗಳಿವೆ.ಅದರಲ್ಲಿ ಪ್ರಮುಖವಾದ ಕಥೆಯನ್ನು ನಾವಿಲ್ಲಿ ತಿಳಿಯಬಹುದಾಗಿದೆ.
ಪಾರ್ವತಿ ಸ್ನಾನ ಮಾಡಲು ಹೋಗಿರುವ ಸಂದರ್ಭದಲ್ಲಿ ಶ್ರೀಗಂಧದ ಪೌಡರ್ ಮೂಲಕ ಗಣೇಶನನ್ನು ಸೃಷ್ಟಿಸಿ ಅವನನ್ನು ಕಾವಲಿಗೆ ಇರಿಸಿರುತ್ತಾಳೆ. ಈ ಸಂದರ್ಭದಲ್ಲಿ ಶಿವನು ಬಾಗಿಲ ಬಳಿ ಬಂದು ಒಳಪ್ರವೇಶಿಸಲು ಪ್ರಯತ್ನಿಸುತ್ತಾನೆ. ಆಗ ಇದಕ್ಕೆ ಗಣೇಶನು ಆಸ್ಪದ ನೀಡದೆ ಶಿವನನ್ನು ತಡೆಹಿಡಿಯುತ್ತಾನೆ. ಇದಕ್ಕೆ ಕೋಪಗೊಂಡ ಶಿವನು ಗಣೇಶನ ತಲೆಯನ್ನು ಕತ್ತರಿಸುತ್ತಾನೆ.ಈ ದೃಶ್ಯವನ್ನು ನೋಡಿದ ಪಾರ್ವತಿಯು ಕಾಳಿ ದೇವಿಯ ರೂಪವನ್ನು ಧರಿಸಿ ಜಗತ್ತನ್ನು ನಾಶಮಾಡುವ ಬೆದರಿಕೆ ಹಾಕುತ್ತಾಳೆ. ಆಗ ಜನರೆಲ್ಲರೂ ಚಿಂತ್ರಾಕಾಂತರಾಗಿ ಕಾಳಿ ದೇವಿಯ ಕೋಪವನ್ನು ಶಮನಗೊಳಿಸಲು ಶಿವನ ಮೊರೆಹೋಗುತ್ತಾರೆ.ನಂತರ ಶಿವನು ತನ್ನ ಎಲ್ಲಾ ಅನುಯಾಯಿಗಳಿಗೆ ತಕ್ಷಣವೇ ಹೋಗಿ ಗಣೇಶನಿಗೆ ತಲೆ ಅಳವಡಿಸಲು ಮಗವಿನ ಶಿರವೊಂದನ್ನು ತರಲು ಆದೇಶಿಸುತ್ತಾನೆ.ಆಗ ಶಿವನ ಅನುಯಾಯಿಗಳು ಆನೆಯ ಶಿರವನ್ನು ಕತ್ತರಿಸಿ ತರುತ್ತಾರೆ. ಆಗ ಶಿವನು ತಕ್ಷಣವೇ ಗಣೇಶನ ದೇಹದ ಮೇಲೆ ತಲೆಯನ್ನು ಇರಿಸಿ ಅದನ್ನು ಮತ್ತೆ ಜೀವಂತಗೊಳಿಸಿದನು. ಕಾಳಿಯ ಕೋಪವು ಶಾಂತವಾಯಿತು.ಆಗ ಎಲ್ಲಾ ದೇವತೆಗಳು ಗಣೇಶನಿಗೆ ಹರಸಿ ಆಶೀರ್ವದಿಸಿದರು.ಅದೇ ಕಾರಣಕ್ಕಾಗಿ ಗಣೇಶನ ಚತುರ್ಥಿಯನ್ನು ಆಚರಿಸಲಾಗುತ್ತಿದೆ
ಆಚರಣೆ:
ಗಣೇಶ ಚತುರ್ಥಿಯ ಸಿದ್ಧತೆಗಳು ಹಬ್ಬಕ್ಕೆ ಒಂದು ತಿಂಗಳ ಮುಂಚೆಯೇ ಪ್ರಾರಂಭವಾಗುತ್ತವೆ. ಆಚರಣೆಗಳು ಸುಮಾರು ಹತ್ತು ದಿನಗಳವರೆಗೆ ಇರುತ್ತದೆ (ಭಾದ್ರಪದ ಶುದ್ಧ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ). ಮೊದಲ ದಿನ ಮನೆಗಳಲ್ಲಿ ಮಣ್ಣಿನ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮನೆಗಳನ್ನು ಹೂವಿನಿಂದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇಗುಲಗಳಿಗೆ ಭೇಟಿ ನೀಡುತ್ತಾರೆ.ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪೂಜೆಗಳು ಭಜನೆಗಳು ಪ್ರವಚನಗಳು ನಡೆಯುತ್ತವೆ. ಹಬ್ಬದ ಕೊನೆಯ ದಿನದಂದು ಗಣೇಶನ ವಿಗ್ರಹವನ್ನು ಮೆರವಣಿಗೆ ಮಾಡುವುದರ ಮೂಲಕ ಅಂತಿಮವಾಗಿ ನದಿ, ಕೆರೆ ಅಥವಾ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ
ಗಣೇಶ ಚತುರ್ಥಿ ಪೂಜೆ:
ನಿಮ್ಮ ಮನೆಯಲ್ಲಿ ಜೇಡಿಮಣ್ಣಿನ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸುವುದರಿಂದ ಗಣೇಶನ ಪೂಜೆ ಪ್ರಾರಂಭವಾಗುತ್ತದೆ. ನೈವೇದ್ಯಕ್ಕಾಗಿ (ಭೋಗ) ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ವಿಗ್ರಹಕ್ಕೆ ಶುದ್ಧ ನೀರಿನಿಂದ ಸ್ನಾನವನ್ನು ಮಾಡಿಸಿ ಮತ್ತು ನಂತರ ಹೂವಿನಿಂದ ಅಲಂಕರಿಸಲಾಗುತ್ತದೆ. ಜ್ಯೋತಿ ಬೆಳಗಿದ ನಂತರ ಆರತಿ ಹಾಗೂ ಮಂತ್ರಗಳನ್ನು ಪಠಿಸಲಾಗುತ್ತದೆ. ಮಂತ್ರಗಳನ್ನು ಸಂಪೂರ್ಣ ಭಕ್ತಿಯಿಂದ ಪಠಿಸುವುದರಿಂದ ವಿಗ್ರಹಕ್ಕೆ ಜೀವ ಬರುತ್ತದೆ ಎಂದು ನಂಬಲಾಗಿದೆ. ಈ ಅವಧಿಯಲ್ಲಿ ಗಣೇಶನು ತನ್ನ ಭಕ್ತರ ಮನೆಗೆ ಭೇಟಿ ನೀಡುತ್ತಾನೆ ಮತ್ತು ಅವನೊಂದಿಗೆ ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತಾನೆ ಎಂದು ನಂಬಲಾಗಿದೆ. ಅದೇ ಕಾರಣಕ್ಕಾಗಿ ಈ ದಿನವನ್ನು ಅತ್ಯಂತ ಮಂಗಳಕರ ದಿನವನ್ನಾಗಿ ಆಚರಿಸಲಾಗುತ್ತದೆ. .
ಹಬ್ಬದ ಭಕ್ಷ್ಯಗಳು:
ಪೂಜೆಯ ಸಮಯದಲ್ಲಿ ಗಣಪತಿಗೆ ಹೆಚ್ಚಿನ ಸಂಖ್ಯೆಯ ಸಿಹಿತಿಂಡಿಗಳನ್ನು ಅರ್ಪಿಸಲಾಗಿದ್ದರೂ, ಮೋದಕವು ಭಗವಂತನ ನೆಚ್ಚಿನ ಸಿಹಿತಿಂಡಿ ಎಂದು ತಿಳಿದುಬಂದಿದೆ ಮತ್ತು ಆದ್ದರಿಂದ ಈ ದಿನದಂದು ಮಾಡುವ ಮುಖ್ಯ ಭಕ್ಷ್ಯಗಳಲ್ಲಿ ಒಂದಾಗಿದೆ. ಇತರ ಭಕ್ಷ್ಯಗಳಲ್ಲಿ ಕಾರಂಜಿ, ಲಾಡು, ಬರ್ಫಿ ಮತ್ತು ಪೇಡೆಗಳು ಸೇರಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.