Durga Saptashati: ಈ ರೀತಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿದ್ರೆ ಅದೃಷ್ಟದ ಜೊತೆಗೆ ಸುಖ-ಸಂಪತ್ತು ದೊರೆಯಲಿದೆ

ದುರ್ಗಾ ಸಪ್ತಶತಿ ಪಾರಾಯಣ: ಶಾರದೀಯ ನವರಾತ್ರಿಯಲ್ಲಿ ದುರ್ಗಾ ಸಪ್ತಶತಿಯನ್ನು ಪಠಿಸುವುದರಿಂದ ತಾಯಿ ದುರ್ಗಾದೇವಿಯ ಅಪಾರ ಕೃಪೆ ಸಿಗುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಓದುವುದರಿಂದ ಬಹಳಷ್ಟು ಸುಖ-ಸಂಪತ್ತು ಸಿಗುತ್ತದೆ.

Written by - Puttaraj K Alur | Last Updated : Sep 27, 2022, 12:20 PM IST
  • ದುರ್ಗಾ ಸಪ್ತಶತಿ ಪಾರಾಯಣ ಮಾಡುವುದರಿಂದ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ
  • ಸ್ತೋತ್ರವನ್ನು ಸರಿಯಾಗಿ ಪಠಿಸುವುದರಿಂದ ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ
  • ಕಡಿಮೆ ಸಮಯದಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಮಾಡುವುದು ಹೇಗೆಂದು ತಿಳಿಯಿರಿ
Durga Saptashati: ಈ ರೀತಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿದ್ರೆ ಅದೃಷ್ಟದ ಜೊತೆಗೆ ಸುಖ-ಸಂಪತ್ತು ದೊರೆಯಲಿದೆ title=
ದುರ್ಗಾ ಸಪ್ತಶತಿ ಪಾರಾಯಣ

ನವದೆಹಲಿ: ಶಾರದೀಯ ನವರಾತ್ರಿಯಲ್ಲಿ ದುರ್ಗಾ ಸಪ್ತಶತಿಯನ್ನು ಪಠಿಸುವುದರಿಂದ ಅನೇಕ ಪ್ರಯೋಜನಗಳು ಲಭಿಸುತ್ತವೆ. ಅನೇಕ ಜನರು ಪ್ರತಿದಿನವೂ ದುರ್ಗಾ ಸಪ್ತಶತಿ ಪಾರಾಯಣ ಮಾಡುತ್ತಾರೆ. ಹೀಗೆ ಮಾಡುವುದರಿಂದ ನೋವು-ದುಃಖಗಳು ದೂರವಾಗಿ ಜೀವನದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಆದರೆ, ದುರ್ಗಾ ಸಪ್ತಶತಿಯ ಪೂರ್ಣ ಪಾರಾಯಣವನ್ನು ಪೂರ್ಣಗೊಳಿಸಲು ಕನಿಷ್ಠ 3 ಗಂಟೆಗಳು ಬೇಕಾಗುತ್ತದೆ. ಆದ್ದರಿಂದ ಎಲ್ಲರಿಗೂ ಇಷ್ಟು ಸಮಯ ಪಾರಾಯಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಂಪೂರ್ಣ ದುರ್ಗಾ ಸಪ್ತಶತಿಯನ್ನು ಕಡಿಮೆ ಸಮಯದಲ್ಲಿ ಓದಲು ಸುಲಭ ಮಾರ್ಗವಿದೆ. ಈ ಸುಲಭ ಪರಿಹಾರದ ಬಗ್ಗೆ ಶಿವನೇ ಹೇಳಿದ್ದಾನೆ ಎಂದು ನಂಬಲಾಗಿದೆ.

ದುರ್ಗಾ ಸಪ್ತಶತಿ ಪಠ್ಯದಲ್ಲಿ 13 ಅಧ್ಯಾಯಗಳಿವೆ

ದುರ್ಗಾ ಸಪ್ತಶತಿಯಲ್ಲಿ 13 ಅಧ್ಯಾಯಗಳಿದ್ದು, ಇವುಗಳನ್ನು 3 ಪಾತ್ರಗಳಾಗಿ ವಿಂಗಡಿಸಲಾಗಿದೆ. ಮೊದಲ ಪಾತ್ರದಲ್ಲಿ ತಾಯಿ ಮಹಾಕಾಳಿ ಮಧು-ಕೈಟಭ ಎಂಬ ರಾಕ್ಷಸರನ್ನು ವಧೆ ಮಾಡುವ ಕಥೆಯಿದ್ದರೆ, 2ನೇ ಪಾತ್ರದಲ್ಲಿ ಮಾತೆ ರಾಣಿ ಮಹಿಷಾಸುರನನ್ನು ಕೊಂದ ಘಟನೆ ಮತ್ತು ಉತ್ತರ ಪಾತ್ರದಲ್ಲಿ ಶುಂಭ-ನಿಶುಂಭರ ಸಂಹಾರ ಮತ್ತು ಮಾತೃದೇವತೆಯಿಂದ ಪಡೆದ ವರದ ಬಗ್ಗೆ ವರ್ಣನೆ ಇದೆ.

ಇದನ್ನೂ ಓದಿ: ದೀಪಾವಳಿ ಮುನ್ನಾ ದಿನ ಈ ರಾಶಿಯವರಿಗೆ ಲಭಿಸುವುದು ಕುಬೇರನ ಖಜಾನೆ.!

ಕಡಿಮೆ ಸಮಯದಲ್ಲಿ ದುರ್ಗಾ ಸಪ್ತಶತಿ ಪಾರಾಯಣ

ಅಲ್ಪಾವಧಿಯಲ್ಲಿ ದುರ್ಗಾ ಸಪ್ತಶತಿಯ ಸಂಪೂರ್ಣ ಲಾಭ ಪಡೆಯಬಯಸಿದರೆ, ಮೊದಲು ಕವಚ, ಕೀಲಕಾ ಮತ್ತು ಅರ್ಗಲಾ ಸ್ತೋತ್ರವನ್ನು ಪಠಿಸಬೇಕು. ಇದರ ನಂತರ ಪ್ರಮುಖ ಮೂಲವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ದುರ್ಗಾ ಸಪ್ತಶತಿಯ ಸಂಪೂರ್ಣ ಪಾರಾಯಣದ ಫಲ ಸಿಗುತ್ತದೆ. ಈ ಪರಿಹಾರವನ್ನು ಶಿವನು ತಾಯಿ ಪಾರ್ವತಿಗೆ ಹೇಳಿದ್ದನೆಂದು ಪುರಾಣಗಳಲ್ಲಿ ಹೇಳಲಾಗಿದೆ.

ದುರ್ಗಾ ಸಪ್ತಶತಿ ಪಾರಾಯಣದ ಪ್ರಯೋಜನಗಳು

ಈ ರೀತಿ ದುರ್ಗಾ ಸಪ್ತಶತಿಯನ್ನು ಅಲ್ಪಾವಧಿಯಲ್ಲಿ ಪಾರಾಯಣ ಮಾಡುವುದರಿಂದ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೆ ನೀವು ಶತ್ರುಗಳಿಂದ ಬರುವ ತೊಂದರೆಗಳಿಂದ ಮುಕ್ತರಾಗುತ್ತೀರಿ. ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಹೊಂದಿರುವವರು ದುರ್ಗಾ ಸಪ್ತಶತಿಯನ್ನು ಪಠಿಸಿದರೆ ಖಚಿತ ಪರಿಹಾರ ದೊರಕುತ್ತದೆ. ದುರ್ಗಾ ಸಪ್ತಶತಿಯನ್ನು ಪಾರಾಯಣ ಮಾಡಿದ ನಂತರ ದಾನ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಬೇಕು. ಇದರಿಂದ ದುರ್ಗ ಮಾತೆ ಪ್ರಸನ್ನಳಾಗುತ್ತಾಳೆ ಮತ್ತು ಪ್ರತಿಯೊಂದು ಕೆಲಸದಲ್ಲಿ ನಿಮಗೆ ಯಶಸ್ಸನ್ನು ನೀಡುತ್ತಾಳೆ. ಇದಲ್ಲದೆ ನಿಮ್ಮ ಪ್ರತಿಯೊಂದು ಅಡೆತಡೆಗಳು ನಿವಾರಣೆಯಾಗುತ್ತವೆ.  

ಇದನ್ನೂ ಓದಿ: Chanakya Niti: ನಿತ್ಯ ಈ 6 ಕೆಲಸ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News