ಮಾರ್ಚ್ 15 ರಿಂದ ಈ ರಾಶಿಯವರು ಯಾವ ಕೆಲಸ ಮಾಡಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ

ಸೂರ್ಯ ಗುರುವಿನ ಅಧಿಪತ್ಯದ ಮೀನ ರಾಶಿಯನ್ನು ಪ್ರವೇಶಿಸುವುದರೊಂದಿಗೆ ಸೂರ್ಯ ಮತ್ತು ಗುರುವಿನ ಯುತಿ ನಿರ್ಮಾಣವಾಗಲಿದೆ. ಇದು ಕೆಲವೊಂದು ರಾಶಿಯವರಿಗೆ ಅನುಕೂಲಕರವಾಗಿರಲಿದೆ. 

Written by - Ranjitha R K | Last Updated : Mar 7, 2023, 01:58 PM IST
  • ಕೆಲವು ವಿಶೇಷ ಗ್ರಹಗಳು ಪ್ರತಿ ತಿಂಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ.
  • ಮಾರ್ಚ್ 15 ರಂದು, ಸೂರ್ಯನು ಶನಿಯ ಕುಂಭ ರಾಶಿಯಿಂದ ಹೊರಕ್ಕೆ
  • ಇದಾದ ನಂತರ ಮೀನ ರಾಶಿಯಲ್ಲಿ ಸೂರ್ಯ ಸಂಕ್ರಮಣ
ಮಾರ್ಚ್ 15 ರಿಂದ ಈ ರಾಶಿಯವರು ಯಾವ ಕೆಲಸ ಮಾಡಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ  title=

ಬೆಂಗಳೂರು : ಪ್ರತಿ ತಿಂಗಳು ಕೆಲವು ವಿಶೇಷ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಮಾರ್ಚ್ 15 ರಂದು, ಸೂರ್ಯನು ಶನಿಯ ಕುಂಭ ರಾಶಿಯಿಂದ ಹೊರಬರುತ್ತಿದ್ದಾನೆ. ಹೀಗೆ ಕುಂಭ ರಾಶಿಯಿಂದ ಹೊರಬಂದ ಮೇಲೆ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚಾರ ಬೆಳೆಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. 

ಮಾರ್ಚ್ 15 ರಂದು ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ ಇದನ್ನು ಮೀನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಇದೀಗ ಸೂರ್ಯ ಕುಂಭ ರಾಶಿಯಲ್ಲಿ ಇರುವುದರಿಂದ ಸೂರ್ಯ-ಶನಿಯ ಮೈತ್ರಿ ರಚನೆಯಾಗಿದೆ. ಇದು ಮಾರ್ಚ್ 15 ರಂದು ಸೂರ್ಯ ತನ್ನ ರಾಶಿ ಬದಲಾಯಿಸುವ ಮೂಲಕ ಈ ಮೈತ್ರಿ ಕೊನೆಗೊಳ್ಳುತ್ತದೆ. ನಂತರ ಸೂರ್ಯ ಗುರುವಿನ ಅಧಿಪತ್ಯದ ಮೀನ ರಾಶಿಯನ್ನು ಪ್ರವೇಶಿಸುವುದರೊಂದಿಗೆ ಸೂರ್ಯ ಮತ್ತು ಗುರುವಿನ ಯುತಿ ನಿರ್ಮಾಣವಾಗಲಿದೆ. ಇದು ಕೆಲವೊಂದು ರಾಶಿಯವರಿಗೆ ಅನುಕೂಲಕರವಾಗಿರಲಿದೆ. 

ಇದನ್ನೂ ಓದಿ : ತುಳಸಿ ಮಾಲೆ ಧರಿಸುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ, ಇಲ್ಲದಿದ್ರೆ ಭಾರೀ ನಷ್ಟ

ಈ ರಾಶಿಯವರ ಅದೃಷ್ಟ ಬೆಳಗಲಿರುವ ಸೂರ್ಯ : 
ವೃಷಭ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೀನ ರಾಶಿಯಲ್ಲಿ ಸೂರ್ಯನ ಸಂಚಾರವು ಈ ರಾಶಿಯವರಿಗೆ ಪ್ರಯೋಜನಕಾರಿಯಾಗಿರಲಿದೆ. ಈ ಅವಧಿಯಲ್ಲಿ, ನಿಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಯಶಸ್ಸು ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರ ವೇತನದಲ್ಲಿ ದಿಢೀರ್ ಬದಲಾವಣೆಯಾಗಲಿದೆ.  ಉದ್ಯಮಿಗಳು ಕೂಡಾ ಅಪಾರ ಲಾಭವನ್ನು ಗಳಿಸಲಿದ್ದಾರೆ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. 

ಮಿಥುನ ರಾಶಿ :
ಮಿಥುನ ರಾಶಿಯವರಿಗೆ ಕೂಡಾ ಸೂರ್ಯ ಸಂಚಾರ ಮಂಗಳಕರ ಮತ್ತು ಫಲಪ್ರದವಾಗಿರಲಿದೆ. ಮಾಡುವ ಪ್ರತಿಯೊಂದು ಕೆಲಸದಲ್ಲೂ ಸೂರ್ಯ ಅದೃಷ್ಟ ಕರುಣಿಸಲಿದ್ದಾನೆ. ಈ ಸಮಯದಲ್ಲಿ, ಯಾವ ಯೋಜನೆ ಕೈಗೆತ್ತಿಕೊಂಡರೂ ಅದರಲ್ಲಿ ಯಶಸ್ಸು ಶತಸಿದ್ದ. ಈ ಸಮಯದಲ್ಲಿ ಮನೆಯಲ್ಲಿ ಯಾವುದೇ ಧಾರ್ಮಿಕ ಅಥವಾ ಶುಭ ಕಾರ್ಯಕ್ರಮಗಳು ನಡೆಯುತ್ತವೆ.

ಇದನ್ನೂ ಓದಿ : Surya Grahan: ವರ್ಷದ ಮೊದಲ ಗ್ರಹಣದಿಂದ ಈ ರಾಶಿಯವರ ಮೇಲೆ ಅಶುಭ ಪರಿಣಾಮ!

ಕಟಕ ರಾಶಿ :
ಸೂರ್ಯ ಮತ್ತು ಗುರು ಗ್ರಹದ ಸಂಯೋಜನೆಯು  ಕಟಕ ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಹಳೆಯ ಹೂಡಿಕೆಯು ಈ ಸಮಯದಲ್ಲಿ  ಪ್ರಯೋಜನ ನೀಡಲಿದೆ. ವೃತ್ತಿಜೀವನದಲ್ಲಿ ಮುನ್ನಡೆಯಲು ಅನೇಕ ಅವಕಾಶಗಳಿವೆ. ಹೊಸ ಸದಸ್ಯರ ಆಗಮನವು ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News