Auspicious times and astrology on Mouni Amavasye : ಹಿಂದೂ ಕ್ಯಾಲೆಂಡರ್‌ನಲ್ಲಿ, ಪ್ರತಿ ದಿನವೂ ಪ್ರಾಮುಖ್ಯತೆಯನ್ನು ಹೊಂದಿವೆ. ಇವುಗಳಲ್ಲಿ ಅಮವಾಸ್ಯೆ ಮತ್ತು ಹುಣ್ಣಿಮೆ ಬಹಳ ವಿಶೇಷವಾಗಿರುತ್ತದೆ. ಮೌನಿ ಅಮವಾಸ್ಯೆಯನ್ನು ಪ್ರತಿ ವರ್ಷ ಮಾಘ ಮಾಸದ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಈ ದಿನದಂದು ಮಾಡುವ ದಾನ ಮತ್ತು ಸ್ನಾನ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ವರ್ಷದ ಮೌನಿ ಅಮವಾಸ್ಯೆಯನ್ನು ಫೆಬ್ರವರಿ 9 ರಂದು ಆಚರಿಸಲಾಗುತ್ತದೆ. ಈ ದಿನದಂದು ದಾನ ಮಾಡುವುದರಿಂದ ಪುಣ್ಯ ಮತ್ತು ಪೂರ್ವಜರ ಆಶೀರ್ವಾದ ಸಿಗುತ್ತದೆ ಎನ್ನುವುದು ನಂಬಿಕೆ. ಜೋತಿಷ್ಯದಲ್ಲಿ ಮೌನಿ ಅಮಾವಾಸ್ಯೆಗೆ ಹೆಚ್ಚಿನ ಮಹತ್ವವಿದೆ. ಫೆಬ್ರವರಿ 8 ರಂದು ಅಂದರೆ ಮೌನಿ ಅಮಾವಾಸ್ಯೆಯ ಒಂದು ದಿನ ಮುಂಚಿತವಾಗಿ, ಬುಧ ಗ್ರಹವು ಮಕರ ರಾಶಿಯಲ್ಲಿ ಅಸ್ತಮಿಸಲಿದೆ. ಇದು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ 4 ರಾಶಿಯವರು ಇದರಿಂದ ವಿಶೇಷ ಲಾಭ ಪಡೆಯಲಿದ್ದಾರೆ.
ಸ್ನಾನ ಮತ್ತು ದಾನದ ಮಹತ್ವ
ಶಾಸ್ತ್ರಗಳ ಪ್ರಕಾರ, ಮೌನಿ ಅಮವಾಸ್ಯೆಯಂದು ಪುಣ್ಯ ನದಿಯಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ದೇವತೆಗಳು, ಮತ್ತು ಪೂರ್ವಜರು ಅಗೋಚರವಾಗಿ ಸ್ನಾನ ಮಾಡಲು ಇಲ್ಲಿಗೆ ಬರುತ್ತಾರೆ ಎಂದು ಹೇಳಲಾಗುತ್ತದೆ. ಮೌನಿ ಅಮಾವಾಸ್ಯೆಯಂದು ಮೌನ ವ್ರತವನ್ನು ಆಚರಿಸುವುದರಿಂದ ವಿಶೇಷ ಫಲ ಸಿಗುತ್ತದೆ.
ಇದನ್ನೂ ಓದಿ :Rajyog astrology: ಈ ರಾಶಿಗಳ ಅದೃಷ್ಟದ ಬಾಗಿಲು ಓಪನ್.. ಹಣ ಯಶಸ್ಸು ಹುಡುಕಿ ಬರಲಿದೆ, ಸಂತೋಷ ಸಂಪತ್ತಿನ ಸುರಿಮಳೆ!
ಮೇಷ ರಾಶಿ :
ಮಕರ ರಾಶಿಯಲ್ಲಿ ಬುಧ ಅಸ್ತವ್ಯಸ್ತವಾಗಿರುವುದರಿಂದ ಮೇಷ ರಾಶಿಯಲ್ಲಿ ಜನಿಸಿದವರು ಅಧ್ಯಯನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವೃತ್ತಿಜೀವನದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಆರ್ಥಿಕ ಲಾಭದ ಮೂಲಗಳು ಹೆಚ್ಚಾಗುತ್ತವೆ.ವಾಹನ ಸುಖ ಪ್ರಾಪ್ತಿಯಾಗಬಹುದು.
ವೃಷಭ ರಾಶಿ :
ಫೆಬ್ರವರಿ 8 ರಂದು ಮಕರ ರಾಶಿಯಲ್ಲಿ ಬುಧ ಅಸ್ತವಾಗುವ ಪರಿಣಾಮ ವೃಷಭ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಉತ್ತಮ ಲಾಭ ಪಡೆಯಬಹುದು. ದೀರ್ಘಕಾಲದಿಂದ ನಿಮ್ಮನ್ನು ಕಾಡುತ್ತಿರುವ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.
ಇದನ್ನೂ ಓದಿ : Astro Tips For Money: ಹಣಕಾಸಿನ ಬಿಕ್ಕಟ್ಟಿನಿಂದ ಹೊರಬರಲು ಇಂದೇ ಮಾಡಿ ತುಳಸಿ ಪರಿಹಾರ
ಕಟಕ ರಾಶಿ :
ಕರ್ಕಾಟಕ ರಾಶಿಯವರಿಗೆ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ.ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಕುಟುಂಬ ಸದಸ್ಯರ ನಡುವೆ ಉತ್ತಮ ಪ್ರೀತಿ ಸಂಬಂಧಗಳು ಉಳಿಯುತ್ತವೆ.
ಕನ್ಯಾರಾಶಿ :
ಕನ್ಯಾ ರಾಶಿಯವರ ಮನಸ್ಸಿನ ಶಾಂತಿ ನೆಮ್ಮದಿ ಹೆಚ್ಚಾಗುತ್ತದೆ. ವ್ಯಾಪಾರ ಮಾಡುವವರಿಗೆ ಸಾಕಷ್ಟು ಲಾಭವಾಗಲಿದೆ. ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಸಂಗಾತಿ ಅಥವಾ ಜೀವನ ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ.
ಇದನ್ನೂ ಓದಿ : Trigrahi Yog: ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗ- ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭ
( ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.