Kaala Sarpa Dosha: ಕಾಳಸರ್ಪ ದೋಷಕ್ಕೆ ಇಲ್ಲಿವೆ ಸುಲಭ ಪರಿಹಾರಗಳು

Kaala Sarpa Dosha: ಕಾಳಸರ್ಪ ದೋಷವಿದ್ದರೆ ಜೀವನದಲ್ಲಿ ಯಾವುದೇ ಒಳ್ಳೆಯ ಕೆಲಸ ಆಗುವುದಿಲ್ಲ. ನೀವು ಅದೆಷ್ಟೇ ಶ್ರದ್ಧೆಯಿಂದ ಹಾಗೂ ಒಳ್ಳೆಯತನಕದಿಂದ ಕೆಲಸ ಮಾಡಿದರೂ ನಿಮಗೆ ಕೆಟ್ಟದ್ದಾಗುತ್ತದೆ. ಇದಕ್ಕೆ ಪರಿಹಾರಗಳೇನು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Jun 5, 2024, 06:00 PM IST
  • ಕಾಳಸರ್ಪ ದೋಷವಿದ್ದರೆ ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ, ವ್ಯಾಪಾರ, ವ್ಯವಹಾರಗಳಿಗೆ ತೊಂದರೆ
  • ಹಣಕಾಸಿನ ನಷ್ಟ, ಅಪವಾದಗಳು ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆ ಕಂಡುಬರಬರುತ್ತದೆ
  • ಕಾಳಸರ್ಪ ದೋಷವಿದ್ದರೆ ಆರೋಗ್ಯ ಸಮಸ್ಯೆ ಕಾಡುತ್ತದೆ & ದಾಂಪತ್ಯದಲ್ಲಿ ಬಿರುಗಾಳಿ ಏಳುತ್ತದೆ
Kaala Sarpa Dosha: ಕಾಳಸರ್ಪ ದೋಷಕ್ಕೆ ಇಲ್ಲಿವೆ ಸುಲಭ ಪರಿಹಾರಗಳು title=
ಕಾಳಸರ್ಪ ದೋಷಕ್ಕೆ ಪರಿಹಾರಗಳು

Kaala Sarpa Dosha: ನಮ್ಮ ಜಾತಕದಲ್ಲಿ ಕಂಡುಬರುವ ದೋಷಗಳಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರುವ ದೋಷವೆಂದರೆ ಅದು ಕಾಳಸರ್ಪದೋಷ. ಇದು ಎದುರಾದರೆ ಜೀವನದಲ್ಲಿ ಸಾಕಷ್ಟು ಕಷ್ಟ-ನಷ್ಟಗಳನ್ನು ಎದುರಿಸಬೇಕಾಗುತ್ತದೆ.

ನಮ್ಮ ಕುಂಡಲಿಯಲ್ಲಿ ರಾಹು ಮತ್ತು ಕೇತುವಿನ ನಡುವೆ ಎಲ್ಲಾ ಗ್ರಹಗಳು ಒಟ್ಟಿಗೆ ಸೇರಿದಾಗ ಕಾಳ ಸರ್ಪದೋಷ ಕಂಡುಬರುತ್ತದೆ. ರಾಹು ಸರ್ಪದ ಶಿರದಂತೆ ಮತ್ತು ಕೇತು ಬಾಲದಂತೆ ಕಂಡುಬರುತ್ತದೆ. ಕುಂಡಲಿಯಲ್ಲಿ ಗ್ರಹಗತಿಗಳು ಈ ರೀತಿ ಇದ್ದಾಗ ನೀವು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತೀರಿ.

ಇದನ್ನೂ ಓದಿ: ಮನೆಯಂಗಳದಲ್ಲಿ ಈ ಗಿಡ ನೆಟ್ಟರೆ ಒಂದೇ ಒಂದು ಹಾವು ಕೂಡ ಅತ್ತಕಡೆ ಬರಲ್ಲ ಗ್ಯಾರಂಟಿ

ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ, ವ್ಯಾಪಾರ, ವ್ಯವಹಾರಗಳಿಗೆ ತೊಂದರೆ, ಹಣಕಾಸಿನ ನಷ್ಟ, ಅಪವಾದಗಳು, ವೈವಾಹಿಕ ಜೀವನದಲ್ಲಿ ಸಮಸ್ಯೆ ಕಂಡುಬರಬಹುದು. ಕೈಹಿಡಿದ ಕೆಲಸಗಳು ಕೈಗೂಡುವುದಿಲ್ಲ. ವಿಪರೀತ ಚಿಂತೆ ಮತ್ತು ಮಾನಸಿಕವಾಗಿಯೂ ನೀವು ಕುಗ್ಗಿ ಹೋಗುತ್ತೀರಿ.

ಕಾಳಸರ್ಪ ದೋಷವಿದ್ದರೆ ನಿಮಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಸಾಂಸಾರಿಕ ಜೀವನದ ಮೇಲೂ ಸಹ ಪರಿಣಾಮ ಬೀರುತ್ತದೆ. ನಿಮ್ಮ ದಾಂಪತ್ಯದಲ್ಲಿ ಬಿರುಗಾಳಿ ಏಳುತ್ತದೆ. ಕಾಳಸರ್ಪ ದೋಷದ ಪ್ರಭಾವ ಕಡಿಮೆಯಾಗಬೇಕಾದರೆ ಶಿವ ಮತ್ತು ನಾಗಪ್ಪನಿಗೆ ಭಕ್ತಿಯಿಂದ ಪೂಜೆ ಮಾಡಬೇಕು. 11 ಸೋಮವಾರಗಳವರೆಗೆ ಉಪವಾಸವಿದ್ದು, ಶಿವನ ಪೂಜೆ ಮಾಡಬೇಕು. ಯಾವುದೇ ಕಾರಣಕ್ಕೂ ಹಾವುಗಳಿಗೆ ಹಾನಿ ಮಾಡಬಾರದು.

ಇದನ್ನೂ ಓದಿ: Chanakya Niti: ಚಾಣಕ್ಯ ಹೇಳಿದ ಈ ಮೂರು ನಿಯಮಗಳನ್ನು ಪಾಲಿಸಿ.. ನಿಮ್ಮ ಅದೃಷ್ಟವೇ ಬದಲಾಗುತ್ತೆ!!

ಇದರ ಜೊತೆಗೆ ಪ್ರತಿದಿನ 108 ಬಾರಿ ʼಓಂ ನಮಃ ಶಿವಾಯʼ ಮಂತ್ರವನ್ನು ಜಪಿಸಬೇಕು. ನಾಗಪ್ಪನಿಗೆ ಸಂಬಂಧಿಸಿದಂತೆ ಪೂಜೆ ʼಓಂ ನಾಗಕುಲಾಯ ವಿದ್ಮಹೇ ವಿಷದಂತಾಯ ಧೀಮಹಿ ತನ್ನೋ ಸರ್ಪ ಪ್ರಚೋದಯಾತ್' ಮಂತ್ರವನ್ನು ಪಠಿಸಬೇಕು. ಇದರ ಜೊತೆಗೆ ಪ್ರತಿದಿನವೂ ವಿಷ್ಣು ಸಹಸ್ರ ನಾಮಾವಳಿಯನ್ನು ಓದುವುದರಿಂದ ದೋಷ ಪರಿಹಾರವಾಗುತ್ತದೆ ಎಂದು ನಂಬಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News