Rudraksh Rule: ರುದ್ರಾಕ್ಷಿ ಧರಿಸುವ ಮುನ್ನ ಈ ನಿಯಮಗಳನ್ನು ತಪ್ಪದೇ ತಿಳಿಯಿರಿ

Rudraksh Rule: ಹಿಂದೂ ಧರ್ಮದಲ್ಲಿ ರುದ್ರಾಕ್ಷಿಯನ್ನು ಬಹಳ ಪವಿತ್ರ ಮಣಿ ಪರಿಗಣಿಸಲಾಗಿದೆ. ಮಾತ್ರವಲ್ಲ, ಇದಕ್ಕೆ ಬಹಳ ಮಹತ್ವವನ್ನು ನೀಡಲಾಗಿದೆ. ಆದರೆ, ರುದ್ರಾಕ್ಷಿಯನ್ನು ಧರಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. 

Written by - Yashaswini V | Last Updated : Apr 25, 2023, 02:19 PM IST
  • ರುದ್ರಾಕ್ಷಿಯನ್ನು ಧರಿಸುವುದರಿಂದ ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತದೆ.
  • ರುದ್ರಾಕ್ಷಿ ಧಾರಣೆಯಿಂದ ಪಾಪಗಳು ಕೊನೆಗೊಳ್ಳುತ್ತವೆ ಎಂಬ ನಂಬಿಕೆ
  • ರುದ್ರಾಕ್ಷಿಯನ್ನು ಧರಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ ಬರಲಿದೆ ಎಂದು ಹೇಳಲಾಗುತ್ತದೆ.
Rudraksh Rule: ರುದ್ರಾಕ್ಷಿ ಧರಿಸುವ ಮುನ್ನ ಈ ನಿಯಮಗಳನ್ನು ತಪ್ಪದೇ ತಿಳಿಯಿರಿ  title=

Rudraksh Dharan Niyam: ಭಗವಾನ್ ಭೋಲೇನಾಥನ ಕಣ್ಣೀರಿನಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿರುವ ರುದ್ರಾಕ್ಷಿಯನ್ನು ಪವಿತ್ರ ಮಣಿ ಎಂದು ಹೇಳಲಾಗುತ್ತಿದೆ. ಶಿವನಿಗೆ ಪ್ರಿಯವಾದ ರುದ್ರಾಕ್ಷಿಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಮನ್ನಣೆಯನ್ನು ನೀಡಲಾಗಿದೆ. ನೀವು ಉತ್ತಮ ಫಲಗಳನ್ನು ಬಯಸಿದರೆ ರುದ್ರಾಕ್ಷಿ ಧರಿಸುವಾಗ ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ. 

ರುದ್ರಾಕ್ಷಿ ಧಾರಣೆಯ ಪ್ರಯೋಜನಗಳು:
ಧರ್ಮ ಗ್ರಂಥಗಳ ಪರಕಾರ, ರುದ್ರಾಕ್ಷಿಯನ್ನು ಯಾವಾಗಲೂ 1, 3, 5 ಹೀಗೆ ಬೆಸ ಸಂಖ್ಯೆಯಲ್ಲಿ ಮಾತ್ರ ಧರಿಸಬೇಕು. ಇದಲ್ಲದೆ, ನೀವು ರುದ್ರಾಕ್ಷಿ ಮಾಲೆಯನ್ನು ಮಾಡಲು ಬಯಸಿದರೆ 27 ಮಣಿಗಳಿಗಿಂತ ಕಡಿಮೆ ಇರುವ ರುದ್ರಾಕ್ಷಿ ಮಾಲೆಯನ್ನು ಎಂದಿಗೂ ಮಾಡಬೇಡಿ. ಇದು ಶಿವ ದೋಷಕ್ಕೆ ಕಾರಣವಾಗಬಹುದು. ಇದನ್ನು ತಪ್ಪಿಸಲು ರುದ್ರಾಕ್ಷಿಯನ್ನು ಧರಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ.

ಇದನ್ನೂ ಓದಿ- Shani Vakri: ಕೆಲವೇ ದಿನಗಳಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭ- ಈ ರಾಶಿಯವರಿಗೆ ಭಾಗ್ಯೋದಯ

ರುದ್ರಾಕ್ಷಿ ಧಾರಣೆ ವೇಳೆ ಈ ನಿಯಮಗಳನ್ನು ಅನುಸರಿಸಿ: 
>> ಸ್ನಾನ ಮಾಡಿ ಶುಭ್ರ ಬಟ್ಟೆಯನ್ನು ಧರಿಸಿದ ನಂತರೇ ರುದ್ರಾಕ್ಷಿಯನ್ನು ಧರಿಸಬೇಕು. 
>> ರುದ್ರಾಕ್ಷಿಯನ್ನು ಕೆಂಪು, ಹಳದಿ ಅಥವಾ ಬಿಳಿ ದಾರದಲ್ಲಿ ಮಾತ್ರ ಧರಿಸಬೇಕು.
>> ರುದ್ರಾಕ್ಷಿಯನ್ನು ಬೆಳ್ಳಿ, ಚಿನ್ನ ಅಥವಾ ತಾಮ್ರದಲ್ಲಿಯೂ ಧರಿಸಬಹುದು. 
>> ರುದ್ರಾಕ್ಷಿ ಧಾರಣೆ ವೇಳೆ 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸಿ. 
>> ರಾತ್ರಿ ಮಲಗುವಾಗಲೂ ರುದ್ರಾಕ್ಷಿಯನ್ನು ತೆಗೆಯಬೇಕು.
>> ರುದ್ರಾಕ್ಷಿಯನ್ನು ತೆಗೆದು ದಿಂಬಿನ ಕೆಳಗೆ ಇಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ ಮತ್ತು ಕೆಟ್ಟ ಕನಸುಗಳು ದೂರವಾಗುತ್ತವೆ. 

ಇದನ್ನೂ ಓದಿ- ಇನ್ನೆರಡು ದಿನಗಳಲ್ಲಿ ಗುರು ಪುಷ್ಯ ಯೋಗ: ಈ ಕೆಲಸಗಳನ್ನು ಆರಂಭಿಸಿದರೆ ಭಾರೀ ಯಶಸ್ಸು

ರುದ್ರಾಕ್ಷಿ ಧರಿಸುವಾಗ ಎಂದಿಗೂ ಈ ತಪ್ಪುಗಳಾಗದಂತೆ ನಿಗಾವಹಿಸಿ:
* ರುದ್ರಾಕ್ಷಿಯನ್ನು ಯಾವಾಗಲೂ ನಿಮ್ಮ ಸ್ವಂತ ಹಣದಿಂದ ಮಾತ್ರವೇ ಖರೀದಿಸಿ.
* ಬೇರೆಯವರು  ಖರೀದಿಸಿದ ಅಥವಾ ಉಡುಗೊರೆಯಾಗಿ ನೀಡಿದ ರುದ್ರಾಕ್ಷಿಯನ್ನು ಎಂದಿಗೂ ಧರಿಸಬೇಡಿ. 
*  ನಿಮ್ಮ ಸ್ವಂತ ರುದ್ರಾಕ್ಷಿಯನ್ನು ಬೇರೆಯವರಿಗೆ ನೀಡಬೇಡಿ.
* ಸ್ಮಶಾನಕ್ಕೆ ಹೋಗುವ ಮೊದಲು, ಮನೆಯಲ್ಲಿ ರುದ್ರಾಕ್ಷಿಯ ಜಪಮಾಲೆಯನ್ನು ತೆಗೆದುಹಾಕಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News