ವಾರದ ಬಳಿಕ ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿವೆ ಮಾಲವ್ಯ & ಹಂಸ ರಾಜ ಯೋಗ

Malavya-Hamsa Raja Yoga Effects: ವೈದಿಕ ಜ್ಯೋತಿಷ್ಯದ ಪ್ರಕಾರ,  ಪ್ರೇಮಿಗಳ ದಿನಾಚರಣೆಯ ಮರುದಿನ ಮೀನ ರಾಶಿಯಲ್ಲಿ  ಅತ್ಯಂತ ಮಂಗಳಕರವಾದ ಮಾಲವ್ಯ ರಾಜ ಯೋಗ ಮತ್ತು ಹಂಸ ರಾಜ ಯೋಗ ನಿರ್ಮಾಣವಾಗುತ್ತಿದೆ. ಇದು ಕೆಲವು ರಾಶಿಯವರ ಜೀವನವನ್ನೇ ಬದಲಾಯಿಸಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Feb 6, 2023, 12:33 PM IST
  • ಫೆಬ್ರವರಿ 15ರಂದು ಗುರು-ಶುಕ್ರರ ಸಂಯೋಗದಿಂದ ರೂಪುಗೊಳ್ಳಲಿರುವ ಮಾಲವ್ಯ ರಾಜಯೋಗ ಮತ್ತು ಹಂಸ ರಾಜ ಯೋಗ ಸೃಷ್ಟಿಯಾಗಲಿದೆ.
  • ಈ ಯೋಗಗಳು ಐದು ರಾಶಿಯವರ ಜೀವನದಲ್ಲಿ ಬಹಳ ಮಂಗಳಕರ ಫಲಿತಾಂಶಗಳನ್ನು ತರಲಿದೆ.
  • ಇದರ ಪರಿಣಾಮವಾಗಿ ಅವರ ಜೀವನದ ದಿಕ್ಕೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ವಾರದ ಬಳಿಕ ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿವೆ ಮಾಲವ್ಯ &  ಹಂಸ ರಾಜ ಯೋಗ  title=
Guru Shukra Yuti

Malavya-Hamsa Raja Yoga Effects: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಾಲೆಂಟೈನ್ಸ್ ಡೇ ಮರುದಿನ ಎಂದರೆ ಫೆಬ್ರವರಿ 15ರಂದು ಗುರು-ಶುಕ್ರ ಎರಡೂ ಶುಭ ಗ್ರಹಗಳು ಮೀನ ರಾಶಿಯಲ್ಲಿ ಪ್ರವೇಶಿಸಲಿವೆ. ಒಂದೇ ರಾಶಿಯಲ್ಲಿ ಗುರು-ಶುಕ್ರರ ಯುತಿಯಿಂದಾಗಿ ಬಹಳ ಮಂಗಳಕರ ಯೋಗಗಳಾದ ಮಾಲವ್ಯ ಮತ್ತು ಹಂಸ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಶುಭ ಯೋಗದಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. 

ವಾಸ್ತವವಾಗಿ, ಫೆಬ್ರವರಿ 15ರಂದು ಗುರು-ಶುಕ್ರರ ಸಂಯೋಗದಿಂದ ರೂಪುಗೊಳ್ಳಲಿರುವ ಮಾಲವ್ಯ ರಾಜಯೋಗ ಮತ್ತು ಹಂಸ ರಾಜ ಯೋಗವು ಐದು ರಾಶಿಯವರ ಜೀವನದಲ್ಲಿ ಬಹಳ ಮಂಗಳಕರ ಫಲಿತಾಂಶಗಳನ್ನು ತರಲಿದೆ. ಇದರ ಪರಿಣಾಮವಾಗಿ ಅವರ ಜೀವನದ ದಿಕ್ಕೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ವ್ಯಾಲೆಂಟೈನ್ಸ್ ಡೇ ಮರುದಿನದಿಂದ ಗುರು-ಶುಕ್ರರ ಯುತಿಯಿಂದ ಬದಲಾಗಲಿದೆ ಈ ರಾಶಿಯವರ ಅದೃಷ್ಟ:
ಮೇಷ ರಾಶಿ:

ಗುರು-ಶುಕ್ರರ ಸಂಯೋಗದಿಂದ ರೂಪುಗೊಳ್ಳಲಿರುವ ಮಾಲವ್ಯ ರಾಜಯೋಗ ಮತ್ತು ಹಂಸ ರಾಜ ಯೋಗವು ಮೇಷ ರಾಶಿಯವರ ಸಂಸಾರಿಕ ಜೀವನದಲ್ಲಿ ಮಧುರತೆಯನ್ನು ತರಲಿದೆ. ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ.

ಇದನ್ನೂ ಓದಿ- ವ್ಯಾಲೆಂಟೈನ್ಸ್ ಡೇ- ರೋಸ್ ಡೇಯಂದು ರಾಶಿಗನುಗುಣವಾಗಿ ನಿಮ್ಮ ಪ್ರೇಮಿಗೆ ಯಾವ ಬಣ್ಣದ ರೋಸ್ ನೀಡಬೇಕು

ವೃಷಭ ರಾಶಿ: 
ಗುರು-ಶುಕ್ರರ ಯುತಿಯಿಂದ ರೂಪುಗೊಳ್ಳುತ್ತಿರುವ ಎರಡು ಶುಭ ಯೋಗಗಳು ವೃಷಭ ರಾಶಿಯವರ ಆದಾಯದ ಮೂಲವನ್ನು ಹೆಚ್ಚಿಸಲಿವೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿವೆ. ವೃತ್ತಿ ಜೀವನದಲ್ಲಿ ಯಶಸ್ಸಿನ ಹೊಸ ಉತ್ತುಂಗವನ್ನು ಏರುವಿರಿ. ವ್ಯಾಪಾರ-ವ್ಯವಹಾರದಲ್ಲಿಯೂ ಅಧಿಕ ಲಾಭವಾಗಲಿದ್ದು ಸಂಪತ್ತಿನ ಒಡೆಯರಾಗುತ್ತೀರಿ.

ಧನು ರಾಶಿ:
ಗುರು-ಶುಕ್ರರ ಸಂಯೋಗದಿಂದ ರೂಪುಗೊಳ್ಳಲಿರುವ ಮಾಲವ್ಯ ರಾಜಯೋಗ ಮತ್ತು ಹಂಸ ರಾಜ ಯೋಗದ ಪರಿಣಾಮವಾಗಿ ಈ ರಾಶಿಯವರು ವೃತ್ತಿ ರಂಗದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ಹೊಸ ಕೆಲಸ ಹುಡುಕುತ್ತಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗಲಿದೆ. ಮಾತ್ರವಲ್ಲ, ಉದ್ಯೋಗಸ್ಥರಿಗೆ ಪ್ರಯೋಶನ್ ಸಿಗುವ ಸಾಧ್ಯತೆಯೂ ಇದೆ.

ಇದನ್ನೂ ಓದಿ- ವಾಸ್ತು ಪ್ರಕಾರ, ಈ ವಸ್ತುಗಳನ್ನು ಎಂದಿಗೂ ನಿಮ್ಮ ಪ್ರೇಮಿಗಳಿಗೆ ನೀಡಲೇಬಾರದು

ಮೀನ ರಾಶಿ:
ಮೀನ ರಾಶಿಯಲ್ಲಿಯೇ ಗುರು-ಶುಕ್ರರ ಯುತಿ, ಮಾಲವ್ಯ ರಾಜಯೋಗ ಮತ್ತು ಹಂಸ ರಾಜ ಯೋಗ  ರೂಪುಗೊಳ್ಳುತ್ತಿದ್ದು ಇದರ ಗರಿಷ್ಠ ಪರಿಣಾಮ ಈ ರಾಶಿಯವರ ಮೇಲೆಯೇ ಕಂಡು ಬರಲಿದೆ. ಈ ಸಮಯದಲ್ಲಿ ಅಪಾರ ಸಂಪತ್ತು ನಿಮ್ಮನ್ನು ಹರಸಿ ಬರಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ವಾಹನ, ಮನೆ ಖರೀದಿ ಯೋಗವೂ ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News