Mantra Jaap: ಪೂಜೆಯ ವೇಳೆ ಮಂತ್ರಗಳ ಪಠಣ, ಈ ರೀತಿ ರುದ್ರಾಕ್ಷಿಮಾಲೆ ಬಳಸಿ

ದೇವರು ಮತ್ತು ದೇವತೆಗಳನ್ನು ಪೂಜಿಸುವಾಗ ಮಂತ್ರಗಳನ್ನು ಪಠಿಸಲು ವಿವಿಧ ರೀತಿಯ ಮಾಲೆಗಳನ್ನು ಬಳಸಲಾಗುತ್ತದೆ. ಸಂಖ್ಯೆಗಳ ಆಧಾರದ ಮೇಲೆ ಮಂತ್ರಗಳನ್ನು ಪಠಿಸಲಾಗುತ್ತದೆ.

Written by - Puttaraj K Alur | Last Updated : Aug 21, 2022, 06:59 AM IST
  • ಹಿಂದೂ ಧರ್ಮದಲ್ಲಿ ಮಂತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ
  • ಮಂತ್ರಗಳಿಲ್ಲದ ಪೂಜೆ-ಯಾಗವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ
  • ಮಂತ್ರಗಳ ಪಠಣವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ
Mantra Jaap: ಪೂಜೆಯ ವೇಳೆ ಮಂತ್ರಗಳ ಪಠಣ, ಈ ರೀತಿ ರುದ್ರಾಕ್ಷಿಮಾಲೆ ಬಳಸಿ title=
ಮಂತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ

ನವದೆಹಲಿ: ಹಿಂದೂ ಧರ್ಮದಲ್ಲಿ ಮಂತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಂತ್ರಗಳಿಲ್ಲದ ಪೂಜೆ, ಯಾಗವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಮಂತ್ರಗಳ ಪಠಣವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ತರುತ್ತದೆ. ಆದರೆ, ಮಂತ್ರಗಳನ್ನು ಸರಿಯಾಗಿ ಪಠಿಸಿದರೆ ಮಾತ್ರ ಪ್ರಯೋಜನಕಾರಿ. ಸಾಮಾನ್ಯವಾಗಿ ಮಂತ್ರಗಳನ್ನು ಪಠಿಸಲು ರುದ್ರಾಕ್ಷಿ ಮಾಲೆಗಳನ್ನು ಬಳಸುವುದನ್ನು ನೀವು ನೋಡಿರಬೇಕು. ಮಂತ್ರಗಳನ್ನು ಪಠಿಸುವಾಗ ಈ ಮಾಲೆಯನ್ನು ಹೇಗೆ ಬಳಸಬೇಕು ಎಂದು ತಿಳಿಯಿರಿ.

108 ಮಣಿಗಳ ಮಾಲೆ

ದೇವರು ಮತ್ತು ದೇವತೆಗಳನ್ನು ಪೂಜಿಸುವಾಗ ಮಂತ್ರಗಳನ್ನು ಪಠಿಸಲು ವಿವಿಧ ರೀತಿಯ ಮಾಲೆಗಳನ್ನು ಬಳಸಲಾಗುತ್ತದೆ. ಸಂಖ್ಯೆಗಳ ಆಧಾರದ ಮೇಲೆ ಮಂತ್ರಗಳನ್ನು ಪಠಿಸಲಾಗುತ್ತದೆ. ಈ ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವಲ್ಲಿ ಮಾಲೆ ಪ್ರಮುಖ ಪಾತ್ರ ವಹಿಸುತ್ತದೆ. ಜಪಮಾಲೆಯಲ್ಲಿ 108 ಮಣಿಗಳು ಇರುತ್ತವೆ. ಮಂತ್ರಗಳ ಪಠಣದ ಸಂಖ್ಯೆಯಲ್ಲಿ ಯಾವುದೇ ದೋಷವಿರಬಾರದು. ಆದ್ದರಿಂದ ಬಹುತೇಕ ಜನರು ರುದ್ರಾಕ್ಷಿ ಮಾಲೆಗಳೊಂದಿಗೆ ಜಪಿಸುತ್ತಾರೆ.

ಇದನ್ನೂ ಓದಿ: Name Astrology: ಈ ಹೆಸರು ಹೊಂದಿರುವ ಹುಡುಗಿಯರು ವೃತ್ತಿಜೀವನದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ

ಜಪಮಾಲೆಯನ್ನು ನೇತುಹಾಕಬೇಡಿ

ಪೂಜೆಯ ಸಮಯದಲ್ಲಿ ಮಂತ್ರ ಪಠಿಸುವಾಗ ಯಾವಾಗಲೂ ಒಂದು ಜಪಮಾಲೆಯನ್ನು ಮಾತ್ರ ಬಳಸಿ. ಜಪ ಮಾಡಿದ ನಂತರ ಹಾರವನ್ನು ಎಂದಿಗೂ ನೇತುಹಾಕಬೇಡಿ. ಇದು ಅದರ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಮಾಲೆಯನ್ನು ಯಾವಾಗಲೂ ಶುಭ್ರವಾದ ಬಟ್ಟೆಯಲ್ಲಿ ಸುತ್ತಿ ಇಡಬೇಕು.

ಮಂತ್ರ ಪಠಿಸುವ ವೇಳೆ ಈ ಬೆರಳು ಮುಟ್ಟಬೇಡಿ

ಮಂತ್ರವನ್ನು ಪಠಿಸುವಾಗ ಜಪಮಾಲೆಯನ್ನು ತೋರು ಬೆರಳಿನಿಂದ ಮುಟ್ಟಬಾರದು. ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಅದೇ ರೀತಿ ಪಠಣದ ವೇಳೆ ಸೀನುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಧ್ಯಾನದ ಫಲವನ್ನು ನೀಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು-ತುಳಸಿಯನ್ನು ಹಾಕಿ ಮತ್ತು ಅದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಇಂತಹ ಸಮಸ್ಯೆ ಇದ್ದರೆ ಈ ನೀರನ್ನು ತಲೆಗೆ ಮತ್ತು ಎರಡೂ ಕಣ್ಣುಗಳಿಗೆ ಹಚ್ಚಿ. ಇದರಿಂದ ಸಮಸ್ಯೆ ಆಗುವುದಿಲ್ಲ.

ಇದನ್ನೂ ಓದಿ: Mercury Transit 2022: ಶೀಘ್ರದಲ್ಲಿಯೇ ಈ ರಾಶಿಯ ಜನರ ಭಾಗ್ಯ ಫಳಫಳ ಹೊಳೆಯಲಿದೆ, ಕಾರಣ ಇಲ್ಲಿದೆ

ಭಂಗಿಯನ್ನು ನೋಡಿಕೊಳ್ಳಿ

ಮಂತ್ರಗಳನ್ನು ಪಠಿಸುವಾಗ ಕೆಲವು ವಿಷಯಗಳನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವಾಗಲೂ ನೆಲದ ಆಸನದ ಮೇಲೆ ಕುಳಿತು ಮಂತ್ರಗಳನ್ನು ಪಠಿಸಬೇಕು. ನೀವು ಕುಳಿತುಕೊಳ್ಳುವ ಆಸನದಿಂದ ನಿಮ್ಮ ಪಾದಗಳನ್ನು ಎಂದಿಗೂ ಎತ್ತಿಇಡಬೇಡಿ. ಹೀಗಾಗಿ ನೀವು ಕುಳಿತುಕೊಳ್ಳುವ ಭಂಗಿಯನ್ನು ನೋಡಿಕೊಂಡು ಮಂತ್ರ ಪಠಿಸಲು ಸಿದ್ಧರಾಗಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News