Astro Tips: ಗ್ರಹದೋಷ ನಿವಾರಣೆಗೆ ನೀರಿನಲ್ಲಿ ಈ ಪದಾರ್ಥವನ್ನು ಸೇರಿಸಿ ಸ್ನಾನ ಮಾಡಿ..!

ಗ್ರಹದೋಷ ನಿವಾರಣೆಗೆ ಪರಿಹಾರ: ಜಾತಕದಲ್ಲಿ ಯಾವುದೇ ಗ್ರಹದಲ್ಲಿ ಯಾವುದೇ ದೋಷವಿದ್ದರೆ ಅದಕ್ಕೆ ಸಂಬಂಧಿಸಿದ ಅಶುಭ ಫಲಿತಾಂಶಗಳು ಸಂಭವಿಸಲು ಪ್ರಾರಂಭಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಈ ದೋಷವನ್ನು ಸಮಯಕ್ಕೆ ಸರಿಯಾಗಿ ತೆಗೆದುಹಾಕುವುದು ಮುಖ್ಯ.

Written by - Puttaraj K Alur | Last Updated : Sep 19, 2023, 09:07 PM IST
  • ವ್ಯಕ್ತಿಯ ಜಾತಕದಲ್ಲಿ ಗ್ರಹದೋಷವಿದ್ದರೆ ಆತನ ಕೆಲಸದಲ್ಲಿ ಅಡತಡೆಗಳು ಶುರುವಾಗುತ್ತವೆ
  • ಕೆಲವರಿಗೆ ಹಗಲಿರುಳು ದುಡಿದರೂ ಯಶಸ್ಸು ಸಿಗಲ್ಲ, ಸಂಪಾದನೆಯಿದ್ದರೂ ಉಳಿತಾಯ ಸಾಧ್ಯವಾಗಲ್ಲ
  • ನಿರಂತರ ವೈಫಲ್ಯದ ಜೊತೆಗೆ ಮನೆಯಲ್ಲಿ ಬಡತನವು ಮೇಲುಗೈ ಸಾಧಿಸುತ್ತದೆ
Astro Tips: ಗ್ರಹದೋಷ ನಿವಾರಣೆಗೆ ನೀರಿನಲ್ಲಿ ಈ ಪದಾರ್ಥವನ್ನು ಸೇರಿಸಿ ಸ್ನಾನ ಮಾಡಿ..! title=
ಗೃಹದೋಷಕ್ಕೆ ಪರಿಹಾರಗಳು

ನವದೆಹಲಿ: ಕಠಿಣ ಪರಿಶ್ರಮದ ಬಳಿಕವೂ ಅನೇಕರು ಉತ್ತಮ ಫಲಿತಾಂಶಗಳನ್ನು ಪಡೆಯುವುದಿಲ್ಲ. ಕೆಲವರಿಗೆ ಹಗಲಿರುಳು ದುಡಿದರೂ ಯಶಸ್ಸು ಸಿಗುವುದಿಲ್ಲ. ಸಂಪಾದನೆ ಇದ್ದರೂ ಉಳಿತಾಯ ಸಾಧ್ಯವಾಗುವುದಿಲ್ಲ. ಆಗ ಯಾರೇ ಆಗಲಿ ಈ ವಿಷಯಗಳ ಗೊಂದಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಗ್ರಹಗಳ ದೋಷಗಳು ಇದರ ಹಿಂದಿನ ಕಾರಣವಾಗಿರಬಹುದು.

ಹೌದು, ವ್ಯಕ್ತಿಯ ಜಾತಕದಲ್ಲಿ ಗ್ರಹದೋಷವಿದ್ದರೆ ಅವನ ಅಥವಾ ಅವಳ ಕೆಲಸದಲ್ಲಿ ಅಡತಡೆಗಳು ಶುರುವಾಗುತ್ತವೆ. ವೈಫಲ್ಯವು ನಿರಂತರವಾಗಿ ಸಂಭವಿಸಲು ಪ್ರಾರಂಭಿಸುತ್ತದೆ. ಮನೆಯಲ್ಲಿ ಬಡತನವು ಮೇಲುಗೈ ಸಾಧಿಸುತ್ತದೆ ಮತ್ತು ವ್ಯಕ್ತಿಯು ಪ್ರತಿ ಪೈಸೆಯ ಮೇಲೆ ಅವಲಂಬಿತನಾಗುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇಂತಹ ಹಲವು ಸುಲಭ ಪರಿಹಾರಗಳನ್ನು ಸೂಚಿಸಲಾಗಿದ್ದು, ಇದನ್ನು ಅನುಸರಿಸಿ ಗ್ರಹದೋಷಗಳಿಂದ ಪರಿಹಾರ ಪಡೆಯಬಹುದು. ಈ ಪರಿಹಾರಗಳಲ್ಲಿ ಒಂದು ಸ್ನಾನ ಮಾಡುವುದು. 

ಇದನ್ನೂ ಓದಿ: ಕನಸಿನಲ್ಲಿ ಸೆಕ್ಸ್ ನ ಅರ್ಥ ಏನು? ರಿಯಲ್ ಲೈಫ್ ಮೇಲೆ ಅದರ ಪ್ರಭಾವ ಹೇಗಿರುತ್ತದೆ?

ಸೂರ್ಯ ಪ್ರಭಾವ: ಜಾತಕದಲ್ಲಿ ಸೂರ್ಯನ ಅಶುಭ ಪ್ರಭಾವವಿದ್ದರೆ, ಸ್ನಾನ ಮಾಡುವಾಗ ನೀರಿನಲ್ಲಿ ಕುಂಕುಮ, ಏಲಕ್ಕಿ, ದೇವದಾರು ಮರದ ಪುಡಿ, ಕೆಂಪು ಹೂವುಗಳು ಮತ್ತು ದ್ರಾಕ್ಷಾರಸವನ್ನು ಮಿಶ್ರಣ ಮಾಡಿ. ಈ ನೀರಿನಿಂದ ಸ್ನಾನ ಮಾಡುವುದರಿಂದ ಸೂರ್ಯನ ಅಶುಭಗಳು ಕಡಿಮೆಯಾಗುತ್ತವೆ.

ಮಂಗಳ ಗ್ರಹ: ಮಂಗಳ ಗ್ರಹವು ವ್ಯಕ್ತಿಯ ಜಾತಕದ ಮೇಲೆ ನಕಾರಾತ್ಮಕ ಪ್ರಭಾವವನ್ನು ಹೊಂದಿದ್ದರೆ, ಸ್ನಾನ ಮಾಡುವಾಗ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಸ್ನಾನ ಮಾಡುವ ನೀರಿನಲ್ಲಿ ಕೆಂಪು ಚಂದನ, ಬಳ್ಳಿ ತೊಗಟೆ ಮತ್ತು ಬೆಲ್ಲವನ್ನು ಬೆರೆಸಿ ಸೇವಿಸಿದರೆ ತುಂಬಾ ಪ್ರಯೋಜನಕಾರಿ.

ಬುಧ ಗ್ರಹ: ಬುಧ ಗ್ರಹದ ಲಾಭವನ್ನು ಪಡೆಯಲು ನೀರಿನಲ್ಲಿ ಅಕ್ಕಿ, ಗೋರೋಚನ, ಮುತ್ತು ವಿಧಾರ ಮತ್ತು ಜಾಯಿಕಾಯಿಯನ್ನು ಬೆರೆಸಿ ಸ್ನಾನ ಮಾಡಬೇಕು. ಇದು ಲಾಭದಾಯಕವಾಗಿದೆ.

ಗುರು ಗ್ರಹ: ಗುರುಗ್ರಹದಿಂದ ಶುಭ ಫಲಿತಾಂಶಗಳನ್ನು ಪಡೆಯಲು, ಹಳದಿ ಸಾಸಿವೆ, ಅರಿಶಿನ ಮತ್ತು ಮಲ್ಲಿಗೆ ಹೂವುಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಬೇಕು.

ಶುಕ್ರ ಗ್ರಹ: ಶುಕ್ರನಿಗೆ ಬಿಳಿ ಏಲಕ್ಕಿ, ಕುಂಕುಮ, ಬಿಳಿ ಚಂದನ ಮತ್ತು ಹಾಲು ಬೆರೆಸಿದ ನೀರಿನಿಂದ ಸ್ನಾನ ಮಾಡಬೇಕು.

ಶನಿ ಗ್ರಹ: ಶನಿಯ ಧನಾತ್ಮಕ ದೃಷ್ಟಿಯನ್ನು ಪಡೆಯಲು ಮತ್ತು ಅವರ ಕೋಪದಿಂದ ದೂರವಿರಲು ಬಯಸಿದರೆ, ನೀವು ಸ್ನಾನದ ನೀರಿನಲ್ಲಿ ಕಪ್ಪು ಎಳ್ಳು, ಸುಗಂಧ, ಜಿರಿಗೆ, ಶಮೀ ಮರದ ಪುಡಿಯನ್ನು ಬೆರೆಸಿ ಸ್ನಾನ ಮಾಡಬೇಕು.

ಇದನ್ನೂ ಓದಿ: ನಿಮ್ಮ ಲವ್ ಲೈಫ್ ಕುರಿತು ತಿಳಿದುಕೊಳ್ಳಬೇಕೆ? ಅಂಗೈಯಲ್ಲಿ ಈ ರೇಖೆ ಇದೆಯಾ ನೋಡಿ!

ಚಂದ್ರ: ನಿಮಗೆ ಚಂದ್ರನ ಮಂಗಳಕರ ಪರಿಣಾಮವಾಗದಿದ್ದರೆ, ಸ್ನಾನದ ನೀರಿನಲ್ಲಿ ಪಂಚಗವ್ಯ, ಬಿಳಿ ಚಂದನ ಮತ್ತು ಬಿಳಿ ಹೂವುಗಳನ್ನು ಬೆರೆಸಿ ಸ್ನಾನ ಮಾಡಿ. ಇದರಿಂದ ಸಾಕಷ್ಟು ಲಾಭವಿದೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News