ಈ ಐದು ರಾಶಿಯವರನ್ನು ಎಂದೂ ಕಾಡುವುದಿಲ್ಲ ಶನಿ ದೇವ! ಇವರ ಮೇಲೆ ಸದಾ ಹರಿಸುತ್ತಾನೆ ಕೃಪಾ ದೃಷ್ಟಿ

Shani Blessing Zodiac Sign : ಶನಿ ದೇವ ಎಂದ ಕೂಡಲೇ ಎಲ್ಲರಿಗೂ ಕಷ್ಟವನ್ನೇ ನೀಡುವಾತ ಎಂದೇನಲ್ಲ. ಶನಿ ಮಹಾತ್ಮ ಕೆಲವೊಂದು ರಾಶಿಯವರ ಮೇಲೆ ಸದಾ ಆಶೀರ್ವಾದವನ್ನೇ ಕರುಣಿಸುತ್ತಾನೆ. ಶನಿಯ ಆಶೀರ್ವಾದದಿಂದ ಇವರು ಜೀವನದಲ್ಲಿ ಯಶಸ್ಸಿನ ಶಿಖರಕ್ಕೆ ಏರುತ್ತಾರೆ.  

Written by - Ranjitha R K | Last Updated : Apr 27, 2023, 12:34 PM IST
  • ಶನಿ ದೇವನಿಗೆ ಗ್ರಹಗಳ ನ್ಯಾಯಾಧೀಶನ ಸ್ಥಾನಮಾನ
  • ಶನಿ ಮಹಾತ್ಮನನ್ನು ಕರ್ಮ ಫಲ ದಾತ ಎಂದೂ ಕರೆಯಲಾಗುತ್ತದೆ.
  • ಶನಿ ಸದಾ ಕೃಪಾ ದೃಷ್ಟಿ ಬೀರುವ ರಾಶಿಗಳು ಇವು
ಈ ಐದು ರಾಶಿಯವರನ್ನು ಎಂದೂ ಕಾಡುವುದಿಲ್ಲ ಶನಿ ದೇವ!  ಇವರ ಮೇಲೆ ಸದಾ ಹರಿಸುತ್ತಾನೆ ಕೃಪಾ ದೃಷ್ಟಿ title=

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ ಶನಿ ದೇವನಿಗೆ ಗ್ರಹಗಳ ನ್ಯಾಯಾಧೀಶನ ಸ್ಥಾನಮಾನವನ್ನು ನೀಡಲಾಗಿದೆ. ಅಂದರೆ ಯಾವುದೇ ಒಬ್ಬ ವ್ಯಕ್ತಿಯು ತಾನು ಮಾಡುವ ಕೆಲಸಗಳಿಗೆ ತಕ್ಕಂತೆ ಫಲ ಪಡೆಯುತ್ತಾನೆ. ಇದೇ ಕಾರಣಕ್ಕೆ ಶನಿ ಮಹಾತ್ಮನನ್ನು ಕರ್ಮ ಫಲ ದಾತ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಶನಿದೇವನ ಹೆಸರು ಕೇಳಿದರೆ ಜನ ಭಯ ಪಡುತ್ತಾರೆ. ಆದರೆ ಶನಿದೇವ ಎಂದ ಮಾತ್ರಕ್ಕೆ ಪ್ರತಿ ಬಾರಿಯೂ ತೊಂದರೆ ಕೊಡುತ್ತಾನೆ ಎಂದಲ್ಲ. ಕೆಲವು ರಾಶಿಯವರ ಮೇಲೆ  ಶನಿ ಮಹಾತ್ಮ ಕೂಡಾ ಸದಾ ಕೃಪಾ ದೃಷ್ಟಿಯನ್ನೇ ಹರಿಸುತ್ತಿರುತ್ತಾನೆ . ಕೆಲವು ರಾಶಿಯವರನ್ನು ಶನಿ ದೇವ ಜೀವನ ಪರ್ಯಂತ ಕಾಡುವುದೇ ಇಲ್ಲವಂತೆ. ಸದಾ ಈ ರಾಶಿಯವರನ್ನು ತನ್ನ ಆಶೀರ್ವಾದದಿಂದ ಹರಸುತ್ತಾ ಇರುತ್ತಾನೆಯಂತೆ.  ಈ ಕಾರಣದಿಂದ ಈ ರಾಶಿಯವರು ತಮ್ಮ ಜೀವನದಲ್ಲಿ ಪ್ರಗತಿ  ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಶನಿದೇವನು ಯಾವ ರಾಶಿಯವರ ಮೇಲೆ ಯಾವಾಗಲೂ ದಯೆ ತೋರುತ್ತಾನೆ ಎನ್ನುವುದನ್ನು ಇಲ್ಲಿ ನೋಡೋಣ. 

ಶನಿ ಕೃಪಾ ದೃಷ್ಟಿ ಬೀರುವ ರಾಶಿಗಳು : 
ವೃಷಭ ರಾಶಿ :
ಈ ರಾಶಿಯ ಅಧಿಪತಿ ಶುಕ್ರ. ಜ್ಯೋತಿಷ್ಯ ನಂಬಿಕೆಯ ಪ್ರಕಾರ ಶುಕ್ರ ಮತ್ತು ಶನಿಯ ನಡುವೆ ಸ್ನೇಹವಿದೆ. ಆದ್ದರಿಂದ ಈ ರಾಶಿಯವರ ಶನಿದೇವ ಹೆಚ್ಚು ಕೆಟ್ಟ ಪ್ರಭಾವ ಬೀರುವುದಿಲ್ಲ. ವೃಷಭ ರಾಶಿಯವರ ಜಾತಕದಲ್ಲಿ ಶನಿ ಸಾಡೇ ಸಾತಿ ನಡೆಯುತ್ತಿರುವಾಗಲೂ ಈ ರಾಶಿಯವರನ್ನು ಶನಿ ದೇವ ಅಷ್ಟಾಗಿ ಕಾಡುವುದಿಲ್ಲವಂತೆ. ಈ ರಾಶಿಯವರ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಬಹಳ ಕಾಲ ಆ ಸಮಸ್ಯೆಯಿಂದ ಅವರು ಬಳಲು ವುದಿಲ್ಲ. ಇವರ ಜೀವನದಲ್ಲಿ ಸಮಸ್ಯೆ ಎಷ್ಟು ಬೇಗ ಬರುತ್ತದೆಯೋ ಅಷ್ಟೇ ಬೇಗ ನಿವಾರಣೆ ಕೂಡಾ ಆಗುತ್ತದೆ. 

ಇದನ್ನೂ ಓದಿ : Mangala Shukra Yuti: ಐದು ದಿನಗಳ ಬಳಿಕ ಈ ರಾಶಿಯವರಿಗೆ ಹಣದ ಮಳೆಯನ್ನೇ ಸುರಿಸಲಿದ್ದಾರೆ ಮಂಗಳ-ಶುಕ್ರ!

ಕರ್ಕಾಟಕ ರಾಶಿ : 
ಕರ್ಕಾಟಕ ರಾಶಿಯವರಿಗೆ ಕೂಡಾ ಶನಿದೇವ ಹೆಚ್ಚು ತೊಂದರೆ ಕೊಡುವುದಿಲ್ಲ. ಈ ರಾಶಿಯವರು ಶನಿದೇವನ ಕೃಪೆಯಿಂದ ಸಂಪತ್ತು ಮತ್ತು ಗೌರವವನ್ನು ಪಡೆಯುತ್ತಾರೆ. ಆದರೆ, ಜಾತಕದಲ್ಲಿ ಅಶುಭ ದೆಸೆ, ಅಂತರದೆಸೆ, ಮಹಾದೆಸೆ ನಡೆಯುತ್ತಿದ್ದರೆ, ಸಾಡೇ ಸಾತಿ ಸಂದರ್ಭದಲ್ಲಿ ಸ್ವಲ್ಪ ಮಟ್ಟಿನ ಕಷ್ಟಗಳನ್ನು ಎದುರಿಸಬೇಕಾಗಬಹುದು. ಈ ರಾಶಿಯವರು  ಶನಿದೇವನ ಕೃಪೆಯಿಂದ ಪ್ರಗತಿ ಹೊಂದುತ್ತಾರೆ.

ತುಲಾ ರಾಶಿ :
ಶನಿದೇವನ ನೆಚ್ಚಿನ ರಾಶಿಗಳಲ್ಲಿ ತುಲಾ ಕೂಡಾ ಒಂದು. ಶನಿಯ ಉಚ್ಛ ರಾಶಿಯ ಕಾರಣ, ಇವರ ಮೇಲೆ ಸದಾ ಶನಿಯ ಆಶೀರ್ವಾದ ಇರುತ್ತದೆ.  ತುಲಾ ರಾಶಿಯವರು ಇತರರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಆಧರಿಸಿ ಶನಿ ದೇವ ಈ ರಾಶಿಯವರ ಮೇಲೆ ಕರುಣೆ ತೋರುತ್ತಾನೆ. ಶನಿದೇವನ ಕೃಪೆಯಿಂದ ಈ ರಾಶಿಯವರು ಹೆಚ್ಚು   ಯಶಸ್ಸು ಪಡೆಯುತ್ತಾರೆ. ಈ ರಾಶಿಯವರಿಗೆ ಅವರ ಶ್ರಮದ ಫಲವೂ ಸಿಗುತ್ತದೆ. ಜೀವನದಲ್ಲಿ ಯಶಸ್ಸಿನ ಜೊತೆಗೆ ಉನ್ನತ ಸ್ಥಾನಗಳನ್ನು ತಲುಪುತ್ತಾರೆ.

ಇದನ್ನೂ ಓದಿ : Lucky Zodiac Signs: ಈ ರಾಶಿಯವರ ಮೇಲೆ ಸದಾ ಇರುತ್ತೆ ತಾಯಿ ಲಕ್ಷ್ಮಿ ಕೃಪೆ

ಮಕರ ರಾಶಿ : 
ಮಕರ ರಾಶಿಯವರ ಮೇಲೆ  ಯಾವಾಗಲೂ ಶನಿ ದೇವನ ಆಶೀರ್ವಾದ ಇರುತ್ತದೆ.  ಶನಿ ಈ ರಾಶಿಯ ಅಧಿಪತಿಯೂ ಹೌದು. ಹಾಗಾಗಿ ಈ ರಾಶಿಯವರ ಮೇಲೆ ತುಸು ಹೆಚ್ಚೇ ಕರುಣೆ ಇಟ್ಟಿರುತ್ತಾನೆ. ಮಕರ ರಾಶಿಯವರು ಶನಿದೆಸೆಯ ಕಾರಣದಿಂದ ಕೆಟ್ಟ ಪರಿಣಾಮಗಳನ್ನು ಅನುಭವಿಸುವುದು ಅಪರೂಪ. ಶನಿದೇವನ ಅನುಗ್ರಹದಿಂದ ಈ ರಾಶಿಯ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ. 

ಕುಂಭ ರಾಶಿ : 
ಶನಿದೇವನು ಈ ರಾಶಿಯವರಿಗೆ ತೊಂದರೆ  ಕೊಡುವುದು ಅತ್ಯಂತ ವಿರಳ. ಮಕರ ರಾಶಿಯ ಜೊತೆಗೆ ಶನಿ ಈ ರಾಶಿಯ ಅಧಿಪತಿಯೂ ಹೌದು. ಹಾಗಾಗಿ  ಕುಂಭ ರಾಶಿಯವರಣ್ಣು ಸದಾ ಹರಸುತ್ತಾ ಇರುತ್ತಾನೆ.  ಶನಿಯ ಆಶೀರ್ವಾದ ಇರುವುದರಿಂದ ಈ ರಾಶಿಯವರು ಜೀವನದಲ್ಲಿ ಹೆಚ್ಚು ತೊಂದರೆ ಅನುಭವಿಸಬೇಕಿಲ್ಲ. ಈ ರಾಶಿಯವರ ಮೇಲೆ ಲಕ್ಷ್ಮೀ ದೇವಿಯ ದಯೆ ಕೂಡಾ ಹೆಚ್ಚಾಗಿರುತ್ತದೆ. ಈ ಜನರು ಕಷ್ಟಪಟ್ಟು ಕೆಲಸ ಮಾಡಿದರೆ, ಅವರ ಶ್ರಮದ ದುಪ್ಪಟ್ಟು ಯಶಸ್ಸು ಅವರದ್ದಾಗುತ್ತದೆ. 

ಇದನ್ನೂ ಓದಿ : ಮೇ ತಿಂಗಳಿನಲ್ಲಿ 4 ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರಿಗೆ ಬಂಪರ್ ಲಾಭ

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News