Food Astrology: ನಾವು ಸೇವಿಸುವ ಆಹಾರದಿಂದ ಕೂಡ ನಮ್ಮ ಭಾಗ್ಯ ಬದಲಾಗುತ್ತದೆ ಗೊತ್ತಾ?

Food Astrology: ಜೋತಿಷ್ಯ ಶಾಸ್ತ್ರದ ಪ್ರಕಾರ, ನಾವು ಸೇವಿಸುವ ಅನ್ನ ಕೂಡ ಗ್ರಹಗಳ ಜೊತೆಗೆ ನೇರ ಸಂಬಂಧವನ್ನು ಹೊಂದಿರುತ್ತದೆ. ಜಾತಕದಲ್ಲಿ ಯಾವ ಗ್ರಹದ ಸ್ಥಾನ ಬಲಪಡಿಸಲು ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Apr 19, 2023, 10:55 PM IST
  • ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ನಾವು ಸೇವಿಸುವ ಆಹಾರದೊಂದಿಗೆ ನೇರ ಸಂಬಂಧವನ್ನು ಹೊಂದಿವೆ.
  • ಅಂದರೆ ನಾವು ಸೇವಿಸುವ ಆಹಾರ ಕೂಡ ನಮ್ಮ ಜಾತಕದಲ್ಲಿನ ಗ್ರಹಗಳ ಸ್ಥಾನವನ್ನು ಬಲಪಡಿಸುತ್ತದೆ.
  • ಬನ್ನಿ ಯಾವ ಗ್ರಹದ ಸಂಬಂಧ ಯಾವ ಆಹಾರದೊಂದಿಗೆ ಇದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Food Astrology: ನಾವು ಸೇವಿಸುವ ಆಹಾರದಿಂದ ಕೂಡ ನಮ್ಮ ಭಾಗ್ಯ ಬದಲಾಗುತ್ತದೆ ಗೊತ್ತಾ? title=
ಆಹಾರ ಜೋತಿಷ್ಯ ಸಲಹೆಗಳು

Food Astrololgy: ಜಾತಕದಲ್ಲಿ ಗ್ರಹಗಳ ಸ್ಥಾನ ಬಲಪಡಿಸಲು ಅಂದರೆ, ಅವುಗಳಿಂದ ಸಿಗುವ ಶುಭ ಫಲಗಳನ್ನು ಹೆಚ್ಚಿಸಲು ಜೋತಿಷ್ಯ ಶಾಸ್ತ್ರದಲ್ಲಿ ಹಲವಾರು ಉಪಾಯಗಳನ್ನು ಹೇಳಲಾಗಿದೆ. ಇದಲ್ಲದೆ ರತ್ನಗಳ ಧಾರಣೆ ಹಾಗೂ ಪೂಜೆ ಮಾಡುವುದರಿಂದಲೂ ಕೂಡ ಗ್ರಹಗಳ ಶುಭಫಲಗಳನ್ನು ಪಡೆಯಬಹುದು. ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ನಾವು ಸೇವಿಸುವ ಆಹಾರದೊಂದಿಗೆ ನೇರ ಸಂಬಂಧವನ್ನು ಹೊಂದಿವೆ. ಅಂದರೆ ನಾವು ಸೇವಿಸುವ ಆಹಾರ ಕೂಡ ನಮ್ಮ ಜಾತಕದಲ್ಲಿನ ಗ್ರಹಗಳ ಸ್ಥಾನವನ್ನು ಬಲಪಡಿಸುತ್ತದೆ. ಬನ್ನಿ ಯಾವ ಗ್ರಹದ ಸಂಬಂಧ ಯಾವ ಆಹಾರದೊಂದಿಗೆ ಇದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಸೂರ್ಯ ಗ್ರಹ: ಜೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಬಲಪಡಿಸಿ ಆತನ ಶುಭ ಫಲಿತಾಂಶಗಳನ್ನು ಹೆಚ್ಚಿಸಲು ಬೆಲ್ಲ, ಮಾವು, ಗೋಧಿಯನ್ನು ಸೇವಿಸಬೇಕು ಹಾಗೂ ತಾಮ್ರದ ಪಾತ್ರೆಯಲ್ಲಿರುವ ನೀರನ್ನು ಸೇವಿಸಬೇಕು ಎನ್ನಲಾಗಿದೆ.

ಚಂದ್ರ ಗ್ರಹ: ಚಂದ್ರನ ಪ್ರಭಾವ ನೇರವಾಗಿ ನಮ್ಮ ಮನಸ್ಸಿನ ಮೇಲೆ ಇರುತ್ತದೆ. ಜಾತಕದಲ್ಲಿ ಚಂದ್ರ ಬಲ ಹೆಚ್ಚಿಸಲು ಹಾಲು ಹಾಗೂ ಹಾಲಿನಿಂದ ತಯಾರಿಸಿದ ಉತ್ಪನ್ನಗಳು, ಕಬ್ಬು, ಸಕ್ಕರೆ, ಸಿಹಿ ಹಾಗೂ ಐಸ್ ಕ್ರೀಂ ಇತ್ಯಾದಿ ಪದಾರ್ಥಗಳ ಸೇವನೆ ಉತ್ತಮ ಎಂದು ಪರಿಗಣಿಸಲಾಗಿದೆ. ಬೆಳ್ಳಿ ಪಾತ್ರೆಯಲ್ಲಿಟ್ಟ ನೀರನ್ನು ಕುಡಿಯುವುದರಿಂದ ಕುಂಡಲಿಯಲ್ಲಿ ಚಂದ್ರಬಲ ಹೆಚ್ಚಾಗುತ್ತದೆ.

ಮಂಗಳ ಗ್ರಹ: ಕುಂಡಲಿಯಲ್ಲಿ ಮಂಗಳನ ಸ್ಥಾನ ಬಲಪಡಿಸಲು ಜೇನು ತುಪ್ಪ, ಜೋಳ, ಬೆಲ್ಲ ಹಾಗೂ ಚನ್ನಂಗಿ ಬೇಳೆ ಸೇವಿಸುವುದು ಉತ್ತಮ ಎಂದು ಭಾವಿಸಲಾಗಿದೆ. ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ಲಾಭದಾಯಕವಾಗಿದೆ.

ಬುಧ ಗ್ರಹ: ಹಸಿರು ಬೇಳೆ, ಬಟಾಣಿ, ಹೆಸರು ಬೇಳೆ, ಹಸಿರು ತರಕಾರಿ ಸೇವಿಸಬೇಕು ಮತ್ತು ಬೆಳ್ಳಿಯ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿ ಕುಡಿದರೆ, ಜಾತಕದಲ್ಲಿ ಬುಧನ ಸ್ಥಾನಕ್ಕೆ ಬಲ ಸಿಗುತ್ತದೆ.

ದೇವಗುರು ಬೃಹಸ್ಪತಿ: ಗುರುವಿನ ಶುಭಫಲಗಳನ್ನು ಹೆಚ್ಚಿಸಲು ಕಡಲೆ ಬೇಳೆ, ಕಡಲೆ ಹಿಟ್ಟು, ಬಾಳೆಹಣ್ಣು, ಅರಿಶಿಣ, ಮೆಕ್ಕೆ ಜೋಳ, ಹಳದಿ ಬೇಳೆ, ಹಳದಿ ಹಣ್ಣುಗಳನ್ನು ಸೇವಿಸುವುದು ಉತ್ತಮ.

ಶುಕ್ರ ಗ್ರಹ: ಜಾತಕದಲ್ಲಿ ಶುಕ್ರಬಲ ಹೆಚ್ಚಿಸಲು ತ್ರಿಫಲಾ, ಕಲ್ಲುಸಕ್ಕರೆ, ದಾಲ್ಚಿನಿ, ಮೂಲಂಗಿ ಇತ್ಯಾದಿಗಳನ್ನು ಆಹಾರದಲ್ಲಿ ಉಪಯೋಗಿಸಬೇಕು.

ಶನಿ ಗ್ರಹ: ಶನಿಯ ಪ್ರಕೊಪದಿಂದ ಪಾರಾಗಲು ಸಾಸಿವೆ ಹಾಗೂ ಎಳ್ಳೆಣ್ಣೆ, ಕರಿ ಉಪ್ಪು, ಉದ್ದಿನ ಬೇಳೆ, ಕರಿಮೆಣಸು, ತಮಾಲ ಪತ್ರ, ಉಪ್ಪಿನ ಕಾಯಿಯನ್ನು ಸೇವಿಸಬೇಕು.

ಇದನ್ನೂ ಓದಿ-Solar Eclipse 2023: 84 ವರ್ಷಗಳ ಬಳಿಕ ನಾಳೆ 'ಹಂಸ ರಾಜ ಯೋಗ' ನಿರ್ಮಾಣ, ಚಿನ್ನದಂತೆ ಹೊಳೆಯಲಿದೆ ಈ ಜನರ ಭಾಗ್ಯ!

ರಾಹು ಮತ್ತು ಕೇತು: ಈ ಛಾಯಾಗ್ರಹಗಳ ಅಶುಭ ಫಲಗಳಿಂದ ಪಾರಾಗಲು ಎಳ್ಳೆಣ್ಣೆ ಹಾಗೂ ಸಾಸಿವೆ ಎಣ್ಣೆ, ಉದ್ದಿನ ಬೇಳೆಯನ್ನು ಆಧಾರದಲ್ಲಿ ಬಳಸುವುದು ಉತ್ತಮ.

ಇದನ್ನೂ ಓದಿ-SBI ನಿಂದ ಹಿಡಿದು HDFC ವರೆಗೆ ಈ 6 ಬ್ಯಾಂಕ್ ಗಳು FD ಮೇಲೆ ಶೇ.9.5 ರಷ್ಟು ಬಡ್ಡಿ ನೀಡುತ್ತಿವೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News