ಶರದ್ ಪೂರ್ಣಿಮಾ ದಿನದಂದು ತಾಯಿ ಮಹಾಲಕ್ಷ್ಮಿಗೆ ವಿಶೇಷ ಆರಾಧನೆ: ಹಿಂದೂ ಧರ್ಮದಲ್ಲಿ ದೀಪಗಳ ಹಬ್ಬ ದೀಪಾವಳಿಗೆ ವಿಶೇಷ ಮಹತ್ವವಿದೆ. ಈ ವರ್ಷ ಅಕ್ಟೋಬರ್ 24ರಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಸಂಪತ್ತಿನ ದೇವತೆಯಾದ ತಾಯಿ ಮಹಾಲಕ್ಷ್ಮಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಆದರೆ, ದೀಪಾವಳಿಗೂ 15 ದಿನಗಳ ಮೊದಲು ಶರದ್ ಪೂರ್ಣಿಮಾದಂದು ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.
ದೀಪಾವಳಿ ಹಬ್ಬಕ್ಕೂ 15 ದಿನಗಳ ಮುಂಚೆ ನಿಯಮಾನುಸಾರ ಲಕ್ಷ್ಮಿ ದೇವಿಯನ್ನು ಈ ರೀತಿ ಪೂಜಿಸಿ:
ಅಶ್ವಿನ್ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯನ್ನು ಶರದ್ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಶರದ್ ಪೂರ್ಣಿಮೆಯಂದು ಲಕ್ಷ್ಮಿ ದೇವಿಯ ಆರಾಧನೆಗೆ ವಿಶೇಷ ಮಹತ್ವವಿದೆ. ಶರದ್ ಪೂರ್ಣಿಮಾ ದಿನದಂದು, ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ರಾತ್ರಿಯಿಡೀ ಜಾಗರಣೆ ಇದ್ದು ಲಕ್ಷ್ಮೀದೇವಿಯ ಭಜನೆ ಮತ್ತು ಕೀರ್ತನೆಗಳನ್ನು ನಡೆಸಲಾಗುತ್ತದೆ. ಆ ದಿನದಂದು ರಾತ್ರಿ ದೇವೇಂದ್ರ ಸ್ವತಃ ಭೂಮಿಗೆ ಬರುವನು ಎಂದು ನಂಬಲಾಗಿದೆ.
ಇದನ್ನೂ ಓದಿ- ದಸರಾ-ದೀಪಾವಳಿ ಭವಿಷ್ಯ: ಅಕ್ಟೋಬರ್‌ನಲ್ಲಿ ಬಂಪರ್ ಲಾಭ ಗಳಿಸಲಿದ್ದಾರೆ ಈ ರಾಶಿಯ ಜನ
ಶರದ್ ಪೂರ್ಣಿಮೆಯಂದು, ಲಕ್ಷ್ಮಿ ದೇವಿಯನ್ನು ವಿಧಿ ವಿಧಾನಗಳೊಂದಿಗೆ ಪೂಜಿಸಿ ಜಾಗರಣೆ ಮಾಡುವುದರಿಂದ ತಾಯಿ ಲಕ್ಷ್ಮಿಯ ವಿಶೇಷ ಅನುಗ್ರಹವನ್ನು ಪಡೆಯುತ್ತಾನೆ. ಈ ದಿನ, ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಜನರು ಮನೆಯ ಬಾಗಿಲಿನಿಂದ ಪೂಜಾ ಸ್ಥಳದವರೆಗೆ ಅವಳ ಪಾದಗಳನ್ನು ಮಾಡುತ್ತಾರೆ. ಈ ದಿನ ಹಾಲಿನ ಖೀರ್ ಮಾಡುವ ಸಂಪ್ರದಾಯವೂ ಇದೆ.
ಇದನ್ನೂ ಓದಿ- ದೀಪಾವಳಿಯಂದು ಸೂರ್ಯ ಗ್ರಹಣ, ತುಳಸಿ ಪೂಜೆಯಂದು ಚಂದ್ರಗ್ರಹಣ ಗೋಚರ ! ಈ ರಾಶಿಯವರ ಮೇಲೆ ಬೀರಲಿದೆ ಪರಿಣಾಮ
ಶರದ್ ಪೂರ್ಣಿಮೆಯ ದಿನ ಮುಸ್ಸಂಜೆ ಪೂಜೆ ಮಾಡಿ ಲಕ್ಷ್ಮಿ ದೇವಿಗೆ ವಿಶೇಷ ಖೀರ್ ಅನ್ನು ನೇವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ದಿನ ಖೀರ್‌ನಲ್ಲಿ ಚಂದ್ರನ ಬೆಳಕಿಗೆ ಹಿಡಿಯುವುದರಿಂದ ಅದರಲ್ಲಿ ಅಮೃತದ ಹನಿಗಳು ಬೀಳುತ್ತವೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಹೆಚ್ಚಿನ ಜನರು ರಾತ್ರಿಯಲ್ಲಿ ಚಂದ್ರನ ಬೆಳಕಿನಲ್ಲಿ ಹಸುವಿನ ಹಾಲಿನಿಂದ ಮಾಡಿದ ಖೀರ್ ಅನ್ನು ಇಟ್ಟು ನಂತರ ಅದನ್ನು ಪ್ರಸಾದವಾಗಿ ತೆಗೆದುಕೊಳ್ಳುತ್ತಾರೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.