Shukra Gochar 2023: ಮುಂದಿನ 29 ದಿನಗಳವರೆಗೆ ಈ ರಾಶಿಯವರಿಗೆ ಸಿಗುತ್ತೆ ಅಪಾರ ಹಣ, ಕೀರ್ತಿ, ಪ್ರಗತಿ

Venus Transit: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಸಂಪತ್ತು ಐಶ್ವರ್ಯಕಾರಕ ಎಂದು ಬಣ್ಣಿಸಲ್ಪಡುವ ಶುಕ್ರನು ಇತ್ತೀಚೆಗಷ್ಟೇ ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾರೆ. ಜುಲೈ 7, 2023ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿರುವ ಶುಕ್ರನು ಕೆಲವು ರಾಶಿಯವರಿಗೆ ಅಪಾರ ಹಣ, ಕೀರ್ತಿಯನ್ನು ನೀಡಲಿದ್ದಾನೆ ಎಂದು ನಂಬಲಾಗಿದೆ. 

Written by - Yashaswini V | Last Updated : Jun 9, 2023, 07:32 AM IST
  • ಮೇ 30 ರಂದು ಕರ್ಕಾಟಕ ರಾಶಿಚಕ್ರವನ್ನು ಪ್ರವೇಶಿಸಿರುವ ಶುಕ್ರ
  • ಜುಲೈ 7, 2023ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿರುವ ಶುಕ್ರ
  • ಶುಕ್ರ ರಾಶಿ ಪರಿವರ್ತನೆಯಿಂದ ಮೂರು ರಾಶಿಯವರಿಗೆ ಬಂಪರ್ ಲಾಭ
Shukra Gochar 2023: ಮುಂದಿನ 29 ದಿನಗಳವರೆಗೆ ಈ ರಾಶಿಯವರಿಗೆ ಸಿಗುತ್ತೆ ಅಪಾರ ಹಣ, ಕೀರ್ತಿ, ಪ್ರಗತಿ title=

Venus in Cancer  Benefits: ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಪತ್ತು-ಐಷಾರಾಮಿ, ಪ್ರೀತಿ, ಆಕರ್ಷಣೆ, ಪ್ರಣಯದ ಅಂಶವಾಗಿರುವ ಶುಕ್ರನು ವ್ಯಕ್ತಿಯ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದಾಗ ಬಹಳಷ್ಟು ಸಂಪತ್ತು ಮತ್ತು ವೈಭವವನ್ನು ನೀಡುತ್ತಾನೆ. ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಶುಕ್ರನು ಇತ್ತೀಚೆಗೆ  ಮೇ 30 ರಂದು ರಾಶಿ ಪರಿವರ್ತನೆ ಹೊಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ. 

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಮುಂದಿನ 29 ದಿನಗಳವರೆಗೆ ಎಂದರೆ ಜುಲೈ 7, 2023 ರವರೆಗೆ ಶುಕ್ರನು ಕರ್ಕಾಟಕ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ. ಶುಕ್ರನ ರಾಶಿ ಪರಿವರ್ತನೆಯು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ. ಆದಾಗ್ಯೂ, ಈ ಸಮಯವು ಮೂರು ರಾಶಿಯವರಿಗೆ ಅಪಾರ ಹಣ, ಕೀರ್ತಿ, ಪ್ರಗತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಇದನ್ನೂ ಓದಿ- ಶನಿಯ ಹಿಮ್ಮುಖ ಚಲನೆಯಿಂದ ತ್ರಿಕೋನ ರಾಜಯೋಗ ನಿರ್ಮಾಣ: ಈ ರಾಶಿಯವರಿಗೆ ಧನ ಯೋಗ

ಕರ್ಕಾಟಕ ರಾಶಿಯಲ್ಲಿ ಶುಕ್ರನ ಪ್ರವೇಶ: ಜುಲೈ 7 ರವರೆಗೆ ಈ ರಾಶಿಯವರಿಗೆ ಬಂಪರ್ ಲಾಭ: 
ಮೇಷ ರಾಶಿ: 

ಶುಕ್ರ ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಬಂಪರ್ ಲಾಭವನ್ನು ನೀಡಲಿದೆ. ಮಾತ್ರವಲ್ಲದೆ, ಇವರ ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದ್ದು ದೊಡ್ಡ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯೂ ಇದೆ. ಉದ್ಯೋಗಸ್ಥರಿಗೆ ನಿಮ್ಮ ಪರಿಶ್ರಮ ಮೇಲಾಧಿಕಾರಿಗಳ ಗಮನಕ್ಕೆ ಬರಲಿದ್ದು ಇದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ಮಿಥುನ ರಾಶಿ: 
ಸಂಪತ್ತು-ಐಷಾರಾಮಿ ಜೀವನದ ಅಂಶವಾಗಿರುವ ಶುಕ್ರ ಸಂಚಾರವು ಮಿಥುನ ರಾಹಿಯವರ ಜೀವನದಲ್ಲಿಯೂ ಮಂಗಳಕರ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಸಂಪತ್ತು ಹೆಚ್ಚಾಗಲಿದ್ದು ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶವೂ ಲಭ್ಯವಾಗಲಿದೆ. ಹಣದ ಹರಿವು ಹೆಚ್ಚಾಗುವುದರಿಂದ ನೀವು ನಿಮಗೆ ಅಗತ್ಯವಿರುವ ಸೌಕರ್ಯಗಳನ್ನು ಸಹ ಪಡೆದು ಸುಖ-ಸಂತೋಷದ ಜೀವನವನ್ನು ಅನುಭವಿಸುವಿರಿ. 

ಇದನ್ನೂ ಓದಿ- Surya Gochara: ವಾರದ ಬಳಿಕ ಸೂರ್ಯನಂತೆ ಕಂಗೊಳಿಸಲಿದೆ ಈ ರಾಶಿಯವರ ಅದೃಷ್ಟ

ಮೀನ ರಾಶಿ: 
ಶುಕ್ರನ ರಾಶಿ ಪರಿವರ್ತನೆಯು ಮೀನಾ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ದೊಡ್ಡ ಆರ್ಡರ್ ಕೈ ಸೇರುವ ಸಾಧ್ಯತೆ ಇದ್ದು ಹಠಾತ್ ಧನಲಾಭವಾಗಲಿದೆ. ಉದ್ಯೋಗಸ್ಥರಿಗೆ ಪ್ರಾಮೋಷನ್ ಸಿಗುವ ಸಾಧ್ಯತೆ ಇದ್ದರೆ, ಕಲೆ, ನಟನೆಯಂತಹ ಕಲಾತ್ಮಕ ಜೀವನದಲ್ಲಿ ಇರುವವರಿಗೆ ನಿಮ್ಮ ಕನಸಿನ ಅವಕಾಶಗಳು ದೊರೆತು ಅಪಾರ ಕೀರ್ತಿ, ಯಶಸ್ಸಿನ ಜೊತೆಗೆ ಕೈತುಂಬಾ ಹಣವನ್ನು ಕೂಡ ಸಂಪಾದಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News