Shukra Gochar: ಶೀಘ್ರದಲ್ಲೇ ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ, ಧನ ಪ್ರಾಪ್ತಿ

Venus Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಪತ್ತು, ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರ ಶೀಘ್ರದಲ್ಲೇ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಮೂರು ರಾಶಿಯವರಿಗೆ ಇದನ್ನು ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jan 8, 2024, 06:45 AM IST
  • ಶುಕ್ರ ರಾಶಿ ಮತ್ತು ನಕ್ಷತ್ರ ಬದಲಾವಣೆಯ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ.
  • ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯದಲ್ಲಿ ಶುಕ್ರನ ರಾಶಿ ಪರಿವರ್ತನೆಯು ಮೂರು ರಾಶಿಯವರ ಜೀವನದಲ್ಲಿ ಭಾರೀ ಬದಲಾವಣೆಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ.
  • ಆ ಅದೃಷ್ಟದ ರಾಶಿಚಕ್ರಗಳು ಯಾವುದು ಎಂದು ತಿಳಿಯೋಣ...
Shukra Gochar: ಶೀಘ್ರದಲ್ಲೇ ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ, ಧನ ಪ್ರಾಪ್ತಿ   title=

Shukra Gochar: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸುಖ-ಸಂತೋಷ, ಸಮೃಡ್ಡಿ, ಪ್ರೀತಿ, ಆಕರ್ಷಣೆ ಮತ್ತು ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗುತ್ತದೆ. ನವಗ್ರಹಗಳಲ್ಲಿ ಅತ್ಯಂತ ಮಂಗಳಕರ ಗ್ರಹ ಎಂತಲೂ ಕರೆಯಲಾಗುವ ಶುಕ್ರನ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ದ್ವಾದಶ ರಾಶಿಗಳ ವೃತ್ತಿ, ಆರ್ಥಿಕ ಸ್ಥಿತಿ, ಪ್ರೇಮ ಜೀವನ ಮತ್ತು ವೈವಾಹಿಕ ಜೀವನದ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. 

ಶುಕ್ರ ಗೋಚರ: 
ಸದ್ಯ ವೃಶ್ಚಿಕ ರಾಶಿಯಲ್ಲಿ ಉಪಸ್ಥಿತನಿರುವ ಶುಕ್ರನು ಶೀಘ್ರದಲ್ಲೇ ಜನವರಿ 18, 2024 ರಂದು, ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸುತ್ತಿದೆ. ನಂತರ 
ಜನವರಿ 29, 2024 ರಂದು ಪೂರ್ವಾಷಾಡ ನಕ್ಷತ್ರವನ್ನು ಪ್ರವೇಶಿಸಲಿರುವ ಶುಕ್ರ ಫೆಬ್ರವರಿ 9, 2024 ರಂದು, ಉತ್ತರಾಷಾಢ ನಕ್ಷತ್ರಕ್ಕೆ ಪದಾರ್ಪಣೆ ಮಾಡಲಿದ್ದಾನೆ. ಇದಾದ ಮೂರೇ ದಿನಗಳಲ್ಲಿ 12 ಫೆಬ್ರವರಿ 2024 ರಂದು ಶುಕ್ರನು ಮಕರ ರಾಶಿಗೆ ಸಾಗಲಿದ್ದಾನೆ. 

ಶುಕ್ರ ಸಂಚಾರದ ಪರಿಣಾಮ: 
ಶುಕ್ರ ರಾಶಿ ಮತ್ತು ನಕ್ಷತ್ರ ಬದಲಾವಣೆಯ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯದಲ್ಲಿ ಶುಕ್ರನ ರಾಶಿ ಪರಿವರ್ತನೆಯು ಮೂರು ರಾಶಿಯವರ ಜೀವನದಲ್ಲಿ ಭಾರೀ ಬದಲಾವಣೆಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಚಕ್ರಗಳು ಯಾವುದು ಎಂದು ತಿಳಿಯೋಣ... 

ಇದನ್ನೂ ಓದಿ- Shani Dosha: ಶನಿ ದೋಷದಿಂದ ಪರಿಹಾರಕ್ಕೆ ಸರಳ ಉಪಾಯಗಳು

ಶುಕ್ರ ರಾಶಿ ಪರಿವರ್ತನೆ: ಈ ರಾಶಿಯವರ ಬದುಕನ್ನೇ ಬದಲಾಯಿಸಲಿದ್ದಾನೆ ಸಂಪತ್ತು, ಐಷಾರಾಮಿಕಾರಕ ಶುಕ್ರ:- 
ವೃಷಭ ರಾಶಿ: 

ಶುಕ್ರನ ರಾಶಿ ಪರಿವರ್ತನೆಯು ವೃಷಭ ರಾಶಿಯವರ ಜೀವನದಲ್ಲಿ ಭಾರೀ ಬದಲಾವಣೆಗಳನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಬಹು ದಿನಗಳ ಕನಸು ನನಸಾಗಲಿದೆ. ವೃತ್ತಿ ಬದುಕಿನಲ್ಲಿ ಬಂಪರ್ ಪ್ರಗತಿಯನ್ನು ಕಾಣುವಿರಿ. ಸ್ವಂತ ಉದ್ಯಮ ಮಾಡುವವರಿಗೆ ವಿದೇಶ ವ್ಯವಹಾರದಿಂದ ಭಾರೀ ಲಾಭವಾಗಲಿದೆ. ವೈವಾಹಿಕ ಜೀವನವೂ ಉತ್ತಮವಾಗಿರಲಿದೆ. 

ತುಲಾ ರಾಶಿ: 
ಶುಕ್ರ ಸಂಚಾರದಲ್ಲಿನ ಬದಲಾವಣೆಯು ತುಲಾ ರಾಶಿಯವರ ಜೀವನದಲ್ಲಿಯೂ ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಈ ಸಂದರ್ಭದಲ್ಲಿ ತುಲಾ ರಾಶಿಯವರು ಹೊಸ ಮನೆ, ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ಮಾತವಲ್ಲ, ಹೊಸ ಉದ್ಯೋಗ ಪ್ರಾಪ್ತಿಯಾಗುವ ಸಂಭವವಿದ್ದು ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ. ವ್ಯಾಪಾರಸ್ಥರಿಗೂ ಒಳ್ಳೆಯ ಲಾಭ ನಿರೀಕ್ಷೆಯಿದೆ. 

ಇದನ್ನೂ ಓದಿ- Sun-Saturn Naksthra Gochar 2024: ಶತಮಾನದ ಬಳಿಕ ಸೂರ್ಯ-ಶನಿಯಿಂದ ನಕ್ಷತ್ರ ಪರಿವರ್ತನೆ, ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!

ಮಕರ ರಾಶಿ: 
ಶುಕ್ರ ರಾಶಿ ಬದಲಾವಣೆಯು ಮಕರ ರಾಶಿಯವರ ಜೀವನದಲ್ಲಿಯೂ ಹಲವು ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ವೃತ್ತಿ ವ್ಯವಹಾರದಲ್ಲಿ ಭಾರೀ ಪ್ರಗತಿಯನ್ನು ಕಾಣುವಿರಿ. ಆತ್ಮ ವಿಶ್ವಾಸ ಹೆಚ್ಚಾಗಲಿದ್ದು ದಾಂಪತ್ಯ ಸುಖ ಹೆಚ್ಚಾಗಲಿದೆ. ಜೀವನದಲ್ಲಿ ಪ್ರಗತಿಯ ಹೊಸ ಹಾದಿಗಳು ತೆರೆಯಲಿದ್ದು ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ಏಳ್ಗೆ ಹೊಂದುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News