Surya Grahan 2023: ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಪ್ರಮುಖ ಖಗೋಳ ಘಟನೆಗಳು. ಹಿಂದೂ ಧರ್ಮ ಮತ್ತು ಜ್ಯೋತಿಷ್ಯದಲ್ಲಿಯೂ ಈ ಗ್ರಹಣಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸುವುದಿಲ್ಲ. ವರ್ಷದ ಮೊದಲ ಸೂರ್ಯಗ್ರಹಣವು 20 ಏಪ್ರಿಲ್ 2023 ರಂದು ಗುರುವಾರ ಸಂಭವಿಸಲಿದೆ. ಈ ಗ್ರಹಣವು ಬೆಳಿಗ್ಗೆ 07:04 ರಿಂದ ಮಧ್ಯಾಹ್ನ 12:29 ರವರೆಗೆ ಇರುತ್ತದೆ. ಈ ಸೂರ್ಯಗ್ರಹಣವು ಮೇಷ ರಾಶಿ ಮತ್ತು ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸಲಿದೆ. ಕೆಲವು ರಾಶಿಗಳ ಜನರ ಮೇಲೆ ಇದು ಮಂಗಳಕರ ಪರಿಣಾಮವನ್ನು ಬೀರುತ್ತದೆ.
ವೃಷಭ ರಾಶಿ : ಈ ಸೂರ್ಯಗ್ರಹಣವು ವೃಷಭ ರಾಶಿಯವರಿಗೆ ಅದೃಷ್ಟ ಹೊತ್ತು ಬರಲಿದೆ. ಈ ಜನರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಆದಾಯ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ವ್ಯಾಪಾರ ಮಾಡುವವರಿಗೆ ಲಾಭ ಇರಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಯಾವುದೇ ಹಳೆಯ ಆಸೆ ಇಡೇರಬಹುದು.
ಇದನ್ನೂ ಓದಿ : ಗುರು - ಚಂದ್ರನಿಂದ ಗಜಕೇಸರಿ ಯೋಗ.. ಈ 4 ರಾಶಿಗಳ ಆದಾಯದಲ್ಲಿ ಹೆಚ್ಚಳ, ಕೈ ಹಿಡಿಯುವುದು ಅದೃಷ್ಟ!
ಮಿಥುನ ರಾಶಿ: ವರ್ಷದ ಮೊದಲ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ ಒಳ್ಳೆಯದು. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಹಳೆಯ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಉದ್ಯೋಗ-ವ್ಯವಹಾರಗಳಿಗೆ ಸಮಯವು ಅನುಕೂಲಕರವಾಗಿರುತ್ತದೆ. ಪ್ರಗತಿ ಸಿಗಲಿದೆ. ಆದಾಯ ಹೆಚ್ಚಲಿದೆ. ಕೂಲಂಕುಷವಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಂಡರೆ ಒಳ್ಳೆಯದು.
ಧನು ರಾಶಿ: ವರ್ಷದ ಸೂರ್ಯಗ್ರಹಣವು ಧನು ರಾಶಿಯವರಿಗೆ ಅತ್ಯುತ್ತಮವಾಗಿದೆ. ಹೂಡಿಕೆಯಿಂದ ಲಾಭವಾಗಲಿದೆ. ನೀವು ಗೌರವ, ಸ್ಥಾನ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ಶತ್ರುಗಳನ್ನು ಸೋಲಿಸಲಾಗುವುದು. ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ.
ಇದನ್ನೂ ಓದಿ : ಇನ್ನು 24 ಗಂಟೆ.. ಈ ರಾಶಿಗಳ ಬದುಕಿನ ದಿಕ್ಕು ಬದಲಿಸುವನು ಶುಕ್ರ ! ಹಠಾತ್ ಧನಲಾಭ, ಸಮಾಜದಲ್ಲಿ ಗೌರವ ಪ್ರಾಪ್ತಿ
ಮೀನ ರಾಶಿ: ಈ ಸೂರ್ಯಗ್ರಹಣವು ಮೀನ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಆದಾಯ ಹೆಚ್ಚಲಿದೆ. ಕಚೇರಿಯಲ್ಲಿ ನಿಮ್ಮ ಬಾಸ್ ಜೊತೆಗಿನ ಒಡನಾಟ ಚೆನ್ನಾಗಿರಲಿದೆ. ಅದು ಭವಿಷ್ಯದಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಜೀವನದಲ್ಲಿ ಮುಂದೆ ಸಾಗುವಿರಿ. ಪ್ರಗತಿ ಸಿಗಲಿದೆ.
ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.