ಸಿಂಹ ರಾಶಿಯಲ್ಲಿ ಶುಕ್ರನ ಸಂಚಾರ: ಇನ್ನೊಂದು ವಾರದಲ್ಲಿ ಬದಲಾಗಲಿದೆ ಈ ರಾಶಿಯವರ ಭವಿಷ್ಯ

Sun-Venus Conjunction: ಈ ತಿಂಗಳಾಂತ್ಯಕ್ಕೆ ಶುಕ್ರನು ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಸಿಂಹ ರಾಶಿಯಲ್ಲಿ ಶುಕ್ರ ಮತ್ತು ಸೂರ್ಯ ಸಂಯೋಗ ಸಂಭವಿಸಲಿದೆ. ಈ ಸಂಯೋಗವು ಮೂರು ರಾಶಿಯ ಜನರಿಗೆ ಭಾರೀ ಅದೃಷ್ಟವನ್ನು ತರಲಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Aug 24, 2022, 08:21 AM IST
  • ಆಗಸ್ಟ್ 31, 2022 ರಂದು ಶುಕ್ರ ಗ್ರಹವು ಸಿಂಹ ರಾಶಿಯಲ್ಲಿ ಸಾಗಲಿದೆ.
  • ಅದೇ ಸಮಯದಲ್ಲಿ, ಗ್ರಹಗಳ ರಾಜನಾದ ಸೂರ್ಯನು ಇನ್ನೂ ತನ್ನದೇ ಆದ ರಾಶಿಚಕ್ರ ಚಿಹ್ನೆಯಾದ ಸಿಂಹದಲ್ಲಿ ಇರುತ್ತಾನೆ.
  • ಸೂರ್ಯ-ಶುಕ್ರ ಯುತಿ ಕೆಲವು ರಾಶಿಚಕ್ರಗಳಿಗೆ ಭಾರೀ ಲಾಭ ತರಲಿದೆ
ಸಿಂಹ ರಾಶಿಯಲ್ಲಿ ಶುಕ್ರನ ಸಂಚಾರ: ಇನ್ನೊಂದು ವಾರದಲ್ಲಿ ಬದಲಾಗಲಿದೆ ಈ ರಾಶಿಯವರ ಭವಿಷ್ಯ  title=
Sun-Venus Conjunction effect

ಸಿಂಹ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರ ಸಂಯೋಗದ ಪರಿಣಾಮ: ಈ ತಿಂಗಳಾಂತ್ಯಕ್ಕೆ ಅಂದರೆ ಆಗಸ್ಟ್ 31, 2022 ರಂದು ಶುಕ್ರ ಗ್ರಹವು ಸಿಂಹ ರಾಶಿಯಲ್ಲಿ ಸಾಗಲಿದೆ. ಅದೇ ಸಮಯದಲ್ಲಿ, ಗ್ರಹಗಳ ರಾಜನಾದ ಸೂರ್ಯನು ಇನ್ನೂ ತನ್ನದೇ ಆದ ರಾಶಿಚಕ್ರ ಚಿಹ್ನೆಯಾದ ಸಿಂಹದಲ್ಲಿ ಇರುತ್ತಾನೆ. ಶುಕ್ರನ ರಾಶಿ ಪರಿವರ್ತನೆಯಿಂದ ಯಶಸ್ಸು, ಆತ್ಮವಿಶ್ವಾಸವನ್ನು ನೀಡುವ ಗ್ರಹವಾದ ಸೂರ್ಯ ಮತ್ತು ಸೌಂದರ್ಯ, ಐಷಾರಾಮಿ ಜೀವನವನ್ನು ಪ್ರತಿಬಿಂಬಿಸುವ ಶುಕ್ರ ಎರಡೂ ಗ್ರಹಗಳು  ಸಿಂಹ ರಾಶಿಯಲ್ಲಿ ಸೇರಿಕೊಳ್ಳಲಿವೆ. ಸಿಂಹ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರ ಸಂಯೋಗವು ಮೂರು ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ಸೂರ್ಯ-ಶುಕ್ರ ಯುತಿ- ಈ ರಾಶಿಚಕ್ರಗಳಿಗೆ ಭಾರೀ ಲಾಭ:
ವೃಷಭ ರಾಶಿ:
ಸಿಂಹ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರ ಸಂಯೋಜನೆಯು ವೃಷಭ ರಾಶಿಯವರ ಜೀವನದಲ್ಲಿ ಸಕಲ ಸುಖವನ್ನು ನೀಡಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಪ್ರಾಪ್ತಿಯಾಗಲಿದೆ. ಉದ್ಯೋಗಸ್ಥರು ವೃತ್ತಿ ರಂಗದಲ್ಲಿ ಉನ್ನತ ಹುದ್ದೆಗೇರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಈ ಸಮಯವೂ ವೃತ್ತಿ ಜೀವನ, ವೈಯಕ್ತಿಕ ಜೀವನದ ದೃಷ್ಟಿಯಿಂದ ತುಂಬಾ ಅನುಕೂಲಕರವಾಗಿದೆ.

ಇದನ್ನೂ ಓದಿ- ಆಗಸ್ಟ್‌ನಲ್ಲಿ ಗ್ರಹಗಳ ಬದಲಾವಣೆ: ಈ ರಾಶಿಯವರಿಗೆ ಅದೃಷ್ಟ 

ಸಿಂಹ ರಾಶಿ: ಸಿಂಹ ರಾಶಿಯಲ್ಲಿಯೇ ಗ್ರಹಗಳ ರಾಜನಾದ ಸೂರ್ಯ ಮತ್ತು  ಸೌಂದರ್ಯ, ಐಷಾರಾಮಿ ಜೀವನಕಾರಕನಾದ ಶುಕ್ರರ ಸಂಯೋಗವು ಈ  ರಾಶಿಯವರಿಗೆ ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ. ಈ ರಾಶಿಯವರಿಗೆ ಹಠಾತ್ ಧನ ಯೋಗ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಈ ಸಮಯದಲ್ಲಿ ಮುಟ್ಟಿದ್ದೆಲ್ಲಾ ಚಿನ್ನ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ದಾಂಪತ್ಯ ಜೀವನವೂ ಮಧುರವಾಗಿರಲಿದೆ.

ಇದನ್ನೂ ಓದಿ- Shani ಸೇರಿದಂತೆ ತನ್ನ ಸ್ವಂತ ರಾಶಿಯಲ್ಲಿ ಗೋಚರಿಸಿದ 3 ಗ್ರಹಗಳು, 3 ರಾಶಿಗಳಿಗೆ ಭಾರಿ ಲಾಭ

ತುಲಾ ರಾಶಿ: ತುಲಾ ರಾಶಿಯವರಿಗೆ ಸೂರ್ಯ ಮತ್ತು ಶುಕ್ರರ ಸಂಯೋಗವು ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದ್ದು, ಉತ್ತಮ ಜೀವನವನ್ನು ಅನುಭವಿಸುವಿರಿ.ಮಕ್ಕಳ ಕಡೆಯಿಂದ ಶುಭ ಸುದ್ದಿಗಳನ್ನು ಕೇಳುವ ಸಾಧ್ಯತೆ ಇದೆ. ಮನೆ-ವಾಹನ ಖರೀದಿ ಯೋಗವೂ ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News