ಶುಕ್ರನ ಸ್ಥಾನ ಪಲ್ಲಟ: ಇನ್ನು 10 ದಿನಗಳಲ್ಲಿ ಈ ರಾಶಿಯವರ ಸಂಪೂರ್ಣ ಭವಿಷ್ಯ ಬದಲಾಗುತ್ತೆ!

ಜ್ಯೋತಿಷ್ಯದ ಪ್ರಕಾರ, ಗ್ರಹವು ರಾಶಿಚಕ್ರವನ್ನು ಬದಲಾಯಿಸಿದಾಗ, ಅದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಕಂಡುಬರುತ್ತದೆ. ಶುಕ್ರ ಗ್ರಹವು ಸಂಪತ್ತು ಮತ್ತು ಐಷಾರಾಮಿಯ ಸಂಕೇತವಾಗಿದೆ. ಶುಕ್ರನ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿಯೋಣ.

Written by - Bhavishya Shetty | Last Updated : Jul 2, 2022, 04:32 PM IST
  • ಸ್ಥಾನ ಪಲ್ಲಟ ಮಾಡಲಿರುವ ಶುಕ್ರ ಗ್ರಹ
  • 12 ರಾಶಿಗಳ ಮೇಲೆ ಬೀರಲಿದೆ ಪರಿಣಾಮ
  • ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೇಳೋದು ಹೀಗೆ
ಶುಕ್ರನ ಸ್ಥಾನ ಪಲ್ಲಟ: ಇನ್ನು 10 ದಿನಗಳಲ್ಲಿ ಈ ರಾಶಿಯವರ ಸಂಪೂರ್ಣ ಭವಿಷ್ಯ ಬದಲಾಗುತ್ತೆ!  title=
Shukra Gochar

ಪ್ರತಿ ತಿಂಗಳು ಅನೇಕ ಗ್ರಹಗಳು ತಮ್ಮ ರಾಶಿಯ ಸ್ಥಳವನ್ನು ಬದಲಾಯಿಸುತ್ತವೆ. ಅಂತೆಯೇ ಜುಲೈ ತಿಂಗಳಲ್ಲಿ 5 ಮಹಾ ಗ್ರಹಗಳು ತಮ್ಮ ರಾಶಿಚಕ್ರವನ್ನು ಬದಲಾಯಿಸಲಿವೆ. ಇದರಲ್ಲಿ ಶುಕ್ರ ಗ್ರಹವೂ ಸೇರಿದೆ. ಜುಲೈ 13 ರಂದು ಶುಕ್ರನು ಮಿಥುನ ರಾಶಿಯಿಂದ ಬುಧ ರಾಶಿಯನ್ನು ಪ್ರವೇಶಿಸಲಿದ್ದಾರೆ. ಆಗಸ್ಟ್ 7 ರವರೆಗೆ ಈ ರಾಶಿಯಲ್ಲಿ ಇದ್ದು, ಆ ಬಳಿಕ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ.

ಇದನ್ನೂ ಓದಿ: IBPS ನಲ್ಲಿ 6035 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ : ಸಂಪೂರ್ಣ ಮಾಹಿತಿ ಇಲ್ಲಿದೆ!

ಜ್ಯೋತಿಷ್ಯದ ಪ್ರಕಾರ, ಗ್ರಹವು ರಾಶಿಚಕ್ರವನ್ನು ಬದಲಾಯಿಸಿದಾಗ, ಅದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಕಂಡುಬರುತ್ತದೆ. ಶುಕ್ರ ಗ್ರಹವು ಸಂಪತ್ತು ಮತ್ತು ಐಷಾರಾಮಿಯ ಸಂಕೇತವಾಗಿದೆ. ಶುಕ್ರನ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿಯೋಣ.

ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯ ಉದ್ಯೋಗಸ್ಥ ವ್ಯಕ್ತಿಗೆ ಶುಕ್ರನ ಸಂಚಾರದಿಂದಾಗಿ ಜೀವನದಲ್ಲಿ ಯಶಸ್ಸನ್ನು ಲಭಿಸುತ್ತದೆ. ಲಾಭಕ್ಕಾಗಿ ಅನೇಕ ಅವಕಾಶಗಳಿವೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವ ಜನರಿಗೆ ಈ ಸಂಚಾರ ವಿಶೇಷವಾಗಿ ಫಲಪ್ರದವಾಗಿರುತ್ತದೆ. ನೀವು ಪ್ರಯಾಣ ಮಾಡಲು ಬಯಸಿದ್ದರೆ ಅದು ಸಹ ಪ್ರಯೋಜನಕಾರಿಯಾಗುತ್ತದೆ. ಯಾರೊಂದಿಗಾದರೂ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ ಅದರಲ್ಲೂ ಲಾಭ ಗಳಿಸುವ ಸಾಧ್ಯತೆಯಿದೆ. ಜೊತೆಗೆ ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತವೆ.

ತುಲಾ: ಈ ರಾಶಿಯವರಿಗೆ ಶುಕ್ರ ಸಂಚಾರದ ಅವಧಿಯಲ್ಲಿ ವಿಶೇಷ ಲಾಭ ಸಿಗಲಿದೆ. ವಿತ್ತೀಯ ಲಾಭದ ಬಲವಾದ ಅವಕಾಶಗಳು ಗೋಚರಿಸಲಿವೆ. ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾರೆ. ಪೂರ್ವಜರ ಆಸ್ತಿಯಿಂದಲೂ ಲಾಭಗಳು ಉಂಟಾಗುತ್ತವೆ. ಕಠಿಣ ಪರಿಶ್ರಮವನ್ನು ಮುಂದುವರಿಸಿ ಮತ್ತು ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ. ನೀವು ವ್ಯವಹಾರದಲ್ಲಿ ದೊಡ್ಡ ವ್ಯವಹಾರವನ್ನು ಆಯ್ದುಕೊಂಡು ಯಶಸ್ಸು ಗಳಿಸುವ ಎಲ್ಲಾ ಸಾಧ್ಯತೆಗಳಿವೆ. ವೃತ್ತಿಜೀವನದಲ್ಲಿ ಮುಂದುವರಿಯಲು ಅನೇಕ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. 

ಧನು: ಉದ್ಯೋಗಸ್ಥರಿಗೆ ಈ ಸಮಯ ಅನುಕೂಲಕರವಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರೆ, ಲಾಭ ಪಡೆಯುವ ಲಕ್ಷಣಗಳಿವೆ. ಕೆಲಸ ಮಾಡುವವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಕಚೇರಿಯಲ್ಲಿನ ಚಿತ್ರಣವು ಬಲವಾಗಿರುತ್ತದೆ. ವೇತನ ಹೆಚ್ಚಳವಾಗುವ ಎಲ್ಲ ಸಾಧ್ಯತೆಗಳಿವೆ.

ಇದನ್ನೂ ಓದಿ: ಉಪರಾಷ್ಟ್ರಪತಿ ಹುದ್ದೆಗೆ ಎನ್.ಡಿ.ಎ ಅಭ್ಯರ್ಥಿಯಾಗಿ ಅಮರಿಂದರ್ ಸಿಂಗ್ ಕಣಕ್ಕೆ ಸಾಧ್ಯತೆ

ಕುಂಭ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವೃತ್ತಿಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳು ಬರುತ್ತವೆ. ಆದಾಯವೂ ಹೆಚ್ಚಾಗಬಹುದು. ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಏರ್ಪಡಲಿದೆ. ಅವರಿಗೆ ಸಹಕಾರ ಸಿಗಲಿದೆ. ಉದ್ಯೋಗಸ್ಥರು ಉತ್ತಮ ಯಶಸ್ಸನ್ನು ಪಡೆಯಬಹುದು. ಪ್ರತಿಯೊಂದು ಕಾರ್ಯದಲ್ಲೂ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ನೀವು ಯಶಸ್ಸನ್ನು ಪಡೆಯುತ್ತೀರಿ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News