ನಾನು ಶತಕ ಬಾರಿಸಲು ಬಳಸಿದ್ದು ಈ ಕ್ರಿಕೆಟಿಗನ ಬ್ಯಾಟ್: ಚೊಚ್ಚಲ ಶತಕದ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ

Abhishek Sharma: ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಅಭಿಷೇಕ್ ಅದ್ಭುತ ಶತಕ ಸಿಡಿಸಿದ್ದಾರೆ. ಇದೀಗ ಈ ಯಶಸ್ಸಿಗೆ ಬಳಸಿದ್ದ ಬ್ಯಾಟ್ ಬಗ್ಗೆ ಮಹತ್ವದ ವಿಷಯ ಹಂಚಿಕೊಂಡಿದ್ದಾರೆ.

Written by - Bhavishya Shetty | Last Updated : Jul 8, 2024, 03:36 PM IST
    • ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಅಭಿಷೇಕ್ ಅದ್ಭುತ ಶತಕ ಸಿಡಿಸಿದ್ದಾರೆ.
    • ಈ ಯಶಸ್ಸಿಗೆ ಬಳಸಿದ್ದ ಬ್ಯಾಟ್ ಬಗ್ಗೆ ಮಹತ್ವದ ವಿಷಯ ಹಂಚಿಕೊಂಡಿದ್ದಾರೆ
    • ಶತಕ ಗಳಿಸಿದ ನಂತರ ಮಾತನಾಡಿದ ಅಭಿಷೇಕ್ ಶರ್ಮಾ
ನಾನು ಶತಕ ಬಾರಿಸಲು ಬಳಸಿದ್ದು ಈ ಕ್ರಿಕೆಟಿಗನ ಬ್ಯಾಟ್: ಚೊಚ್ಚಲ ಶತಕದ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ title=
Abhishek Sharma

Abhishek Sharma: ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ ವೃತ್ತಿ ಜೀವನದ ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆ ಔಟಾಗಿದ್ದರು. ಆದರೆ ಆ ಬಳಿಕ ಎರಡನೇ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ತನ್ನ ವಿರುದ್ಧ ಮೂಡಿದ್ದ ಪ್ರಶ್ನೆಗಳಿಗೆಲ್ಲಾ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಇದನ್ನೂ ಓದಿ: Actor Achyuth Kumar: ನಟ ಅಚ್ಯುತ್ ಕುಮಾರ್ ನಿಜಕ್ಕೂ ಯಾರು, ಎಲ್ಲಿಯವರು ಗೊತ್ತಾ? ಇವರ ಪತ್ನಿ ಕೂಡ ಫೇಮಸ್ ನಟಿ!!

ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಅಭಿಷೇಕ್ ಅದ್ಭುತ ಶತಕ ಸಿಡಿಸಿದ್ದಾರೆ. ಇದೀಗ ಈ ಯಶಸ್ಸಿಗೆ ಬಳಸಿದ್ದ ಬ್ಯಾಟ್ ಬಗ್ಗೆ ಮಹತ್ವದ ವಿಷಯ ಹಂಚಿಕೊಂಡಿದ್ದಾರೆ.

ಶತಕ ಗಳಿಸಿದ ನಂತರ ಮಾತನಾಡಿದ ಅಭಿಷೇಕ್ ಶರ್ಮಾ, ತಾನು ಶುಭಮನ್ ಗಿಲ್ ಬ್ಯಾಟ್‌ ಬಳಸಿ ಈ ಶತಕ ಬಾರಿಸಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಇದಕ್ಕಾಗಿ ಅಭಿಷೇಕ್ ವಿಶೇಷ ಧನ್ಯವಾದ ಕೂಡ ತಿಳಿಸಿದ್ದಾರೆ. ಅಂದಹಾಗೆ ಐಪಿಎಲ್‌’ನಲ್ಲೂ ಅಭಿಷೇಕ್ ಗಿಲ್‌ ಬಳಿ ಹಲವಾರು ಬಾರಿ ಬ್ಯಾಟ್ ಕೇಳಿದ್ದರಂತೆ.

ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಭಿಷೇಕ್ 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 100 ರನ್ ಗಳಿಸಿ 'ಪಂದ್ಯ ಶ್ರೇಷ್ಠ ಆಟಗಾರ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ: ತನಗಿಂತ 10 ವರ್ಷ ಹಿರಿಯ ಯುವತಿ ಜೊತೆ ಅಭಿಷೇಕ್ ಶರ್ಮಾ ಡೇಟಿಂಗ್!? ಟೀಂ ಇಂಡಿಯಾ ಜೊತೆ ಸಂಬಂಧ ಹೊಂದಿದ ಈಕೆ ಬೇರಾರು ಅಲ್ಲ…

"ಇಂದು ನಾನು ಶುಬ್‌ಮನ್ ಗಿಲ್ ಬ್ಯಾಟ್‌ ಮೂಲಕ ಆಡಿದ್ದೇನೆ. ಹಾಗಾಗಿ ಬ್ಯಾಟ್‌’ಗೂ ಧನ್ಯವಾದಗಳು. ಯಾವುದೇ ಪಂದ್ಯವಿರಲಿ ಅಥವಾ ನಾನು ಪ್ರದರ್ಶನ ನೀಡಬೇಕಾದ ಸಂದರ್ಭ ಬರಲಿ ಆಗ ನಾನು ಸಾಮಾನ್ಯವಾಗಿ ಅವರ ಬ್ಯಾಟ್ ಅನ್ನು ತೆಗೆದುಕೊಳ್ಳುತ್ತೇನೆ” ಎಂದಿದ್ದಾರೆ. ಇನ್ನು ಶತಕ ಬಾರಿಸಿದ ಸಂಭ್ರಮದಲ್ಲಿದ್ದ ಅಭಿಷೇಕ್, ಈ ಸಾಧನೆಯ ಕ್ರೆಡಿಟ್ ಅನ್ನು ತನ್ನ ತಂದೆಗೆ ಅರ್ಪಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News