ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ 8ರ ಬಾಲೆ: EBC ತಲುಪಿದ ಅತ್ಯಂತ ಕಿರಿಯ ಭಾರತೀಯಳೇ ಈ ಬೆಂಗಳೂರಿನ ಸಾಧಕಿ

Aadya Bennur: ಈಕೆ 8 ವರ್ಷ ವಯಸ್ಸಿನ ಬಾಲೆ. ಆದರೆ ಈ ಪುಟ್ಟ ವಯಸ್ಸಲ್ಲಿ ಈಕೆಯ ಸಾಧನೆ ಅಂತಿಂಥದ್ದಲ್ಲ. ಅದೆಷ್ಟೋ ತೊಂದರೆಗಳನ್ನು ಎದುರಿಸಿದ ಆದ್ಯಾ ಕಡೆಗೂ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ್ದಾರೆ. ಅಷ್ಟೇ ಅಲ್ಲದೆ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯಳು ಎಂಬ ಕೀರ್ತಿಗೆ ಆದ್ಯಾ ಭಾಜನರಾಗಿದ್ದಾರೆ.

Written by - Bhavishya Shetty | Last Updated : Mar 11, 2024, 01:55 PM IST
    • ಎಂಟು ದಿನಗಳಲ್ಲಿ 65 ಕಿಮೀ ಭಯಾನಕ ಭೂಪ್ರದೇಶವನ್ನು ಚಾರಣ ಮಾಡಿದ ಆದ್ಯಾ
    • ಅದೆಷ್ಟೋ ತೊಂದರೆಗಳನ್ನು ಎದುರಿಸಿದ ಆದ್ಯಾ ಕಡೆಗೂ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ್ದಾರೆ
    • ಆದ್ಯಾಗೆ ಈ ಸಾಧನೆ ಮಾಡಲು ಪ್ರೇರೇಪಣೆ ನೀಡಿದ್ದು, ಲಾಕ್‌ಡೌನ್ ಅವಧಿ
ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ 8ರ ಬಾಲೆ: EBC ತಲುಪಿದ ಅತ್ಯಂತ ಕಿರಿಯ ಭಾರತೀಯಳೇ ಈ ಬೆಂಗಳೂರಿನ ಸಾಧಕಿ  title=
Adya Bennur

Aadya Bennur: ಚಾರಣ ಅಂದ್ರೆ ಸಾಮಾನ್ಯದ ಮಾತಲ್ಲ. ಬೆಟ್ಟ ಗುಡ್ಡ ಶಿಖರಗಳನ್ನೇ ಗುರಿಯಾಗಿಸಿ ಚಾರಣ ಹೊರಡುವ ಅನೇಕ ಪ್ರಕೃತಿ ಪ್ರೇಮಿಗಳಿದ್ದಾರೆ. ಇಂತಹ ಚಾರಣದ ಮುಖೇನ ಅನೇಕರು ಹೆಸರು ಕೂಡ ಮಾಡಿದ್ದಾರೆ. ಅಂತವರಲ್ಲಿ ಬೆಂಗಳೂರು ಮೂಲದ ಆದ್ಯಾ ಬೆನ್ನೂರು ಕೂಡ ಒಬ್ಬರು.

ಈಕೆ 8 ವರ್ಷ ವಯಸ್ಸಿನ ಬಾಲೆ. ಆದರೆ ಈ ಪುಟ್ಟ ವಯಸ್ಸಲ್ಲಿ ಈಕೆಯ ಸಾಧನೆ ಅಂತಿಂಥದ್ದಲ್ಲ. ಅದೆಷ್ಟೋ ತೊಂದರೆಗಳನ್ನು ಎದುರಿಸಿದ ಆದ್ಯಾ ಕಡೆಗೂ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ್ದಾರೆ. ಅಷ್ಟೇ ಅಲ್ಲದೆ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯಳು ಎಂಬ ಕೀರ್ತಿಗೆ ಆದ್ಯಾ ಭಾಜನರಾಗಿದ್ದಾರೆ.

ಇದನ್ನೂ ಓದಿ:  ನೀರಿನ ಸಮಸ್ಯೆಯೇ ಮೂಲ : ಬೆಂಗಳೂರಿನ ಹುಡುಗರಿಗೆ ಸಿಗುತ್ತಿಲ್ಲವಂತೆ ವಧು : ಅಳಲು ತೋಡಿಕೊಂಡ IT ಉದ್ಯೋಗಿ

ಎಂಟು ದಿನಗಳಲ್ಲಿ 65 ಕಿಮೀ ಭಯಾನಕ ಭೂಪ್ರದೇಶವನ್ನು ಚಾರಣ ಮಾಡಿದ ಆದ್ಯಾ, ತನ್ನ ತಂದೆ ಹರ್ಷ ಬೆನ್ನೂರ್ ಜೊತೆ, ಜೂನ್ 24 ರಂದು ಎವರೆಸ್ಟ್ ಬೇಸ್ ಕ್ಯಾಂಪ್’ನಲ್ಲಿ 5,364 ಮೀ ಎತ್ತರದಲ್ಲಿ ಭಾರತೀಯ ಧ್ವಜವನ್ನು ಹಾರಿಸಿದ್ದಾರೆ.

ಈ ಚಾರಣದ ಸಂದರ್ಭದಲ್ಲಿ ಆದ್ಯಾ ಕೇವಲ ಗುರಿಯ ಬಗ್ಗೆ ಹವಣಿಸದೆ ಸ್ವಚ್ಛತೆಗೂ ಆದ್ಯತೆ ನೀಡುತ್ತಾ, ತನ್ನ ಹಾದಿಯಲ್ಲಿ ಸಿಗುತ್ತಿದ್ದ ಕಸವನ್ನು ಸಂಗ್ರಹಿಸುತ್ತಾ, ಪರ್ವತದ ತುದಿ ತಲುಪಿದ್ದಾಳೆ.  

ಅಂದಹಾಗೆ ಆದ್ಯಾಗೆ ಈ ಸಾಧನೆ ಮಾಡಲು ಪ್ರೇರೇಪಣೆ ನೀಡಿದ್ದು, ಲಾಕ್‌ಡೌನ್ ಅವಧಿ. ಆದ್ಯಾ ಲಾಕ್‌ಡೌನ್ ಸಮಯವನ್ನು ಫಿಟ್‌ನೆಸ್ ಕಾಯ್ದುಕೊಳ್ಳಲೆಂದು ಬಳಸಿಕೊಂಡರು. ಅದಾದ ನಂತರ ಅಂದರೆ ಲಾಕ್‌ಡೌನ್ ಸಡಿಲಗೊಂಡ ನಂತರ, ದಿನಕ್ಕೆ 15+ ಕಿಮೀ ಸೈಕ್ಲಿಂಗ್‌ ಮಾಡುತ್ತಿದ್ದರು. ಈ ಬಗ್ಗೆ ಮಾತನಾಡಿದ ಆದ್ಯಾ, “ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಾವು ಆಡಬಹುದಾದ ಏಕೈಕ ಕ್ರೀಡೆಯಾದ ಕಾರಣ ನಾನು ಲಾನ್ ಟೆನ್ನಿಸ್ ಅನ್ನು ಸಹ ಕಲಿತಿದ್ದೇನೆ” ಎಂದಿದ್ದಾರೆ.

ಬಹುರಾಷ್ಟ್ರೀಕೃತ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಕೆಲಸ ಮಾಡುವ ಹರ್ಷ ಬೆನ್ನೂರ್, “ನಾವು ನೇಪಾಳಕ್ಕೆ ಹೊರಡುವ ಮೊದಲು EBC ಬಗ್ಗೆ ಅಧ್ಯಯನ ಮಾಡಿದೆವು. ಅವಳು ಈಗಾಗಲೇ ಫಿಟ್ ಆಗಿದ್ದರಿಂದ ನಾವು ಅವಳನ್ನು ಪ್ರೈಮ್ ಫಿಟ್‌ನೆಸ್‌’ಗೆ ತರಲು ಸಾಧ್ಯವಾಯಿತು” ಎಂದಿದ್ದಾರೆ.

“ವೈಯಕ್ತಿಕವಾಗಿ, ಹೆಚ್ಚಿನ ದಿನಗಳು ನನಗೆ ಕಠಿಣವಾಗಿದ್ದವು ಏಕೆಂದರೆ ನಾನು ಆದ್ಯಾಳ ಬಗ್ಗೆ ಚಿಂತೆ ಮಾಡುತ್ತಿದ್ದೆ. ಅವಳ ವಯಸ್ಸಿನ ಕೆಲವೇ ಕೆಲವು ಮಕ್ಕಳು ಈ ರೀತಿಯ ಪ್ರಯತ್ನವನ್ನು ಮಾಡಿದ್ದಾರೆ ಎಂದು ನನಗೆ ಗೊತ್ತಿತ್ತು. ನಾನು ಅವಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾ ಅವಳ ಹಿಂದೆ ನಡೆಯುತ್ತಿದ್ದೆ. ಅನೇಕರಿಗೆ ಎತ್ತರಗಳ ಬಗ್ಗೆ ಇರುತ್ತದೆ. ಆದರೆ ಈಕೆಗೆ ಫಿಟ್ನೆಸ್ ಚೆನ್ನಾಗಿದ್ದ ಕಾರಣ ಅಷ್ಟೊಂದು ಕಷ್ಟ ಎನಿಸಲಿಲ್ಲ” ಎಂದಿದ್ದಾರೆ. .

ತಮ್ಮ ಸಾಧನೆಯ ಬಗ್ಗೆ ಮಾತನಾಡಿದ ಆದ್ಯಾ, “ಪರ್ವತದ ಸಂಪೂರ್ಣ ಗಾತ್ರವನ್ನು ಕಂಡು ನಾನು ವಿಸ್ಮಯಗೊಂಡೆ. ಅದಕ್ಕೂ ಮುನ್ನ ನಾನು ಅಂದುಕೊಂಡಿದ್ದು, EBC ತನಕ ಮಾತ್ರ ಏಕೆ? ಮೌಂಟ್ ಎವರೆಸ್ಟ್ ಶಿಖರವನ್ನು ಕೂಡ ತಲುಪಲು ಕೊಂಚ ನಡೆಯೋಣ ಎಂದು… ಆದರೆ ಇಬಿಸಿ ತಲುಪುತ್ತಿದ್ದಂತೆ ಮೌಂಟ್ ಎವರೆಸ್ಟ್ ಶಿಖರ ನನ್ನ ಮುಂದಿನ ಗುರಿಯಾಗಲಿದೆ ಎಂದು ಅರಿವಾಯಿತು” ಎಂದರು.

EBCಯ ಟ್ರೆಕ್ ನಿಜವಾಗಿಯೂ ಒಂದು ಪಾಠದಂತಾಗಿತ್ತು. “ಹೊಸ ಆಹಾರ, ಮಲಗಲು ಸರಿಯಾದ ಸ್ಥಳದ ಕೊರತೆ, ಅಷ್ಟು ಸ್ವಚ್ಛವಲ್ಲದ ಸ್ನಾನಗೃಹಗಳಿಗೆ ಹೊಂದಿಕೊಳ್ಳುವುದು,,, ಹೀಗೆ ಜೀವನವು ಒಂದು ಸವಾಲಿನ ಅನುಭವವಾಗಿತ್ತು. ಆದರೂ ಮಾನಸಿಕವಾಗಿ ಸದೃಢವಾಗಿರುವುದು ಹೇಗೆಂದು ಕಲಿತೆ. ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿಯೇ ಮುಖ್ಯ ಎಂಬುದು ತಿಳಿಯಿತು. ಸಣ್ಣ ಹೆಜ್ಜೆಗಳಿಂದ ದೊಡ್ಡ ಗುರಿಯ ಹಾದಿ ಸುಗಮವಾಗುತ್ತದೆ. ಛಲ ಬಿಡದೆ ಸಣ್ಣ ಪುಟ್ಟ ಹೆಜ್ಜೆಗಳನ್ನಿಡುವುದೇ ಮೇಲೇರುವ ದಾರಿ. ಎಂಟು ದಿನಗಳಲ್ಲಿ ಸಾವಿರಾರು ಸಣ್ಣ ಹೆಜ್ಜೆಗಳ ನಂತರ, ನಾನು ಇಬಿಸಿಯನ್ನು ತಲುಪಲು ಸಾಧ್ಯವಾಯಿತು” ಎಂದು ಆದ್ಯಾ ಹೇಳಿದರು.

ಇನ್ನು ಇದಾದ ಬಳಿಕ ಆದ್ಯಾ ಕಣ್ಣು ಬಿದ್ದಿದ್ದು, ಕಿಲಿಮಂಜಾರೋ ಪರ್ವತ, ಆ ಸಂದರ್ಭದಲ್ಲಿ ಬೆಂಗಳೂರಿನ ಗ್ರೀನ್‌ ಫೀಲ್ಡ್ ಪಬ್ಲಿಕ್ ಸ್ಕೂಲ್‌’ನಲ್ಲಿ ಓದುತ್ತಿದ್ದ ಆದ್ಯ ಬೆನ್ನೂರ್, ಆಫ್ರಿಕಾದ 19,340 ಅಡಿ ಎತ್ತರದ ಶಿಖರವನ್ನು ಏರುವ ಸಾಹಸ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಗುರಿ ತಲುಪುವಲ್ಲಿ ಯಶಸ್ವಿಯಾದ ಆದ್ಯಾ, ಕಿಲಿಮಂಜಾರೋ ಪರ್ವತ ಏರಿದ ವಿಶ್ವದ ಅತ್ಯಂತ ಕಿರಿಯಳು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:  ನಯನತಾರಾ.. ತ್ರಿಶಾ ಇಬ್ಬರೂ ಅಲ್ಲ.. ಭಾರತದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ಸೌತ್‌ ನಟಿ ಈಕೆ!    

(ಸೂಚನೆ: ಈ ಸುದ್ದಿ 2022-23ರಲ್ಲಿ ಪ್ರಕಟಗೊಂಡಿದ್ದು, ಪ್ರಸ್ತುತತೆ ಅನುಗುಣವಾಗಿ ಓದಿಕೊಳ್ಳಬೇಕಾಗಿ ವಿನಂತಿ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News