ಅಲೆಸ್ಟೆರ್ ಕುಕ್ ದ್ವಿಶತಕ: ಮುನ್ನಡೆ ಕಾಯ್ದುಕೊಂಡು ಇಂಗ್ಲೆಂಡ್

    

Last Updated : Dec 28, 2017, 05:33 PM IST
ಅಲೆಸ್ಟೆರ್ ಕುಕ್  ದ್ವಿಶತಕ: ಮುನ್ನಡೆ ಕಾಯ್ದುಕೊಂಡು ಇಂಗ್ಲೆಂಡ್ title=

ನವದೆಹಲಿ: ಬಾಕ್ಸಿಂಗ್ ಡೇ ಟೆಸ್ಟ್ 3ನೇ ದಿನದಂದು  ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ನ ಆರಂಭಿಕ ಅಲೇಸ್ಟೇರ್ ಕುಕ್ ತಮ್ಮ ಐದನೇ ಟೆಸ್ಟ್ ದ್ವಿಶತಕವನ್ನು ಗಳಿಸಿದರು. ಆ ಮೂಲಕ ಇಂಗ್ಲೆಂಡ ತಂಡದ ಮುನ್ನಡೆಗೆ ಕಾರಣರಾಗಿದ್ದಾರೆ.ಸದ್ಯ 244 ರನ್ ಗಳಿಸಿ ಕ್ರಿಸ್ ನಲ್ಲಿರುವ ಕುಕ್ ತ್ರಿಶತಕದತ್ತ ದಾಪುಗಾಲು ಹಾಕಿದ್ದಾರೆ.

ಆ ಮೂಲಕ ಈ ಮೂವತ್ತು-ಮೂರು ವರ್ಷ ವಯಸ್ಸಿನ ಕುಕ್ ರವರು  ವಾಲಿ ಹ್ಯಾಮಂಡ್ (ಇಂಗ್ಲೆಂಡ್) ಮತ್ತು ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) ನಂತರ  ವಿದೇಶದಲ್ಲಿ  ಎರಡು ದ್ವಿಶತಕ ಗಳಿಸಿದ ಮೂರನೇ ಆಟಗಾರ ಎನ್ನುವ ಸಾಧನೆ ಮಾಡಿದರು. 

ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಅಶಿಸ್ ಸರಣಿಯನ್ನು  ಸೋತಿರುವ ಇಂಗ್ಲೆಂಡ್ ನಂತರ ಹೆಮ್ಮೆಯಿಂದ ಆಡುತ್ತಿರುವ ಇಂಗ್ಲೆಂಡ್ ತಂಡವು ದಿನ ಎರಡು ದಿನದ ಊಟದ ನಂತರದ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ವನ್ನು  327 ರನ್ಗಳಿಗೆ ಕಟ್ಟಿಹಾಕಿತು. ಇದಕ್ಕೆ ಉತ್ತರವಾಗಿ, ಜೋ ರೂಟ್-ನೇತೃತ್ವದ ತಂಡವು ಆರಂಭಿಕ ಆಟಗಾರ ಮಾರ್ಕ್ ಸ್ಟೋನ್ಮನ್ ಮತ್ತು ಜೇಮ್ಸ್ ವಿನ್ಸ್ರನ್ನು 15 ಮತ್ತು 17 ರಂತೆ ಕ್ರಮವಾಗಿ ಔಟಾದ ನಂತರ 80-2 ಕ್ಕೆ ಇಳಿದ ಪ್ರವಾಸಿ ತಂಡ ನಂತರ , ಜೋ ರೂಟ್ (61) ಮತ್ತು ಸ್ಟುವರ್ಟ್ ಬ್ರಾಡ್ (56) ಜೊತೆಯಲ್ಲಿ ಕುಕ್ ಇಂಗ್ಲೆಂಡ್ ತಂಡವನ್ನು ಸುಸ್ಥಿತಿಗೆ ತಂದರು. 

ಈಗ ಇಂಗ್ಲೆಂಡ್ ತಂಡವು  3 ವಿಕೆಟ್ಗಳಿಂದ 164 ರನ್ ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ  ಆಷ್ಟ್ರೇಲಿಯಾ ತಂಡವು  3-0 ಮುನ್ನಡೆ ಸಾಧಿಸಿದೆ.

Trending News