T20 World Cup 2022: ಲೈಂಗಿಕ ದೌರ್ಜನ್ಯ ಆರೋಪ: ಸಿಡ್ನಿಯಲ್ಲಿ ಸ್ಟಾರ್ ಕ್ರಿಕೆಟಿಗ ಬಂಧನ!

Danushka Gunatilaka Arrest: ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನ ಮೂಲಕ ಹಲವಾರು ದಿನಗಳವರೆಗೆ ವ್ಯಕ್ತಿಯೊಬ್ಬರ ಜೊತೆ ಮಾತುಕತೆ ನಡೆಸಿದ್ದ ಮಹಿಳೆ ಬಳಿಕ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ನವೆಂಬರ್ 2ರ ಸಂಜೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಹೇಳಿಕೆ ತಿಳಿಸಿದೆ.

Written by - Bhavishya Shetty | Last Updated : Nov 6, 2022, 09:11 AM IST
    • ಶ್ರೀಲಂಕಾದ ಆರಂಭಿಕ ಬ್ಯಾಟರ್ ದನುಷ್ಕಾ ಗುಣತಿಲಕ ಬಂಧನ
    • ಲೈಂಗಿಕ ದೌರ್ಜನ್ಯ ಆರೋಪದಡಿ ಸಿಡ್ನಿಯಲ್ಲಿ ಅರೆಸ್ಟ್
    • ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ದೂರು ನೀಡಿದ್ದರು
T20 World Cup 2022: ಲೈಂಗಿಕ ದೌರ್ಜನ್ಯ ಆರೋಪ: ಸಿಡ್ನಿಯಲ್ಲಿ ಸ್ಟಾರ್ ಕ್ರಿಕೆಟಿಗ ಬಂಧನ!  title=
Danushka Gunathilak

Danushka Gunatilaka Arrest: ಪ್ರಸ್ತುತ ನಡೆಯುತ್ತಿರುವ ICC ಪುರುಷರ T20 ವಿಶ್ವಕಪ್ 2022 ರ ಸಂದರ್ಭದಲ್ಲಿ ಸಿಡ್ನಿಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಆರಂಭಿಕ ಬ್ಯಾಟರ್ ದನುಷ್ಕಾ ಗುಣತಿಲಕ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗುಣತಿಲಕ ಅವರನ್ನು ಭಾನುವಾರ (ನವೆಂಬರ್ 6) ಮುಂಜಾನೆ ಸಿಡ್ನಿಯ ಸೆಂಟ್ರಲ್ ತಂಡದ ಹೋಟೆಲ್‌ನಿಂದ ಬಂಧಿಸಲಾಯಿತು.

ರೋಸ್ ಬೇಯಲ್ಲಿರುವ ನಿವಾಸದಲ್ಲಿ 29 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದರು.  

ಇದನ್ನೂ ಓದಿ: World Cup 2022 ಫೈನಲ್ ನಲ್ಲಿ ಇಂಡೋ-ಪಾಕ್ ಮುಖಾಮುಖಿ! ಹೇಗೆ ಸಾಧ್ಯ? ಏನಿದು ಲೆಕ್ಕಾಚಾರ?

"ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನ ಮೂಲಕ ಹಲವಾರು ದಿನಗಳವರೆಗೆ ವ್ಯಕ್ತಿಯೊಬ್ಬರ ಜೊತೆ ಮಾತುಕತೆ ನಡೆಸಿದ್ದ ಮಹಿಳೆ ಬಳಿಕ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ನವೆಂಬರ್ 2ರ ಸಂಜೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ" ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಹೇಳಿಕೆ ತಿಳಿಸಿದೆ.

"ಸದ್ಯ ಚಾಲ್ತಿಯಲ್ಲಿರುವ ತನಿಖೆಗಳ ಭಾಗವಾಗಿ ನಿನ್ನೆ ರೋಸ್ ಬೇನಲ್ಲಿರುವ ವಿಳಾಸದಲ್ಲಿ ವಿಶೇಷ ಪೋಲೀಸ್ ಪಡೆ ಸಿಸಿಟಿವಿ ದೃಶ್ಯ ಪರೀಕ್ಷೆಯನ್ನು ನಡೆಸಿತು. ಈ ಸಂದರ್ಭದಲ್ಲಿ ಗುಣತಿಲಕ ಅವರು ಕಂಡುಬಂದಿದ್ದು, ಹೆಚ್ಚಿನ ವಿಚಾರಣೆಯ ಹಿನ್ನೆಲೆಯಲ್ಲಿ ಸಿಡ್ನಿಯ ಸಸೆಕ್ಸ್ ಸ್ಟ್ರೀಟ್‌ನಲ್ಲಿರುವ ಅವರನ್ನು ಬಂಧಿಸಲಾಯಿತು” ಎಂದು ಪೊಲೀಸರು ತಿಳಿಸಿದ್ದಾರೆ.

"ಗುಣತಿಲಕ ಅವರನ್ನು ಸಿಡ್ನಿ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಷ್ಟೇ ಅಲ್ಲದೆ, ಒಪ್ಪಿಗೆಯಿಲ್ಲದೆ ಲೈಂಗಿಕ ಸಂಭೋಗ ನಡೆಸಿದ್ದಾರೆ ಎಂದು ಆರೋಪ ಹೊರಿಸಲಾಗಿದೆ. ಇನ್ನು ಈ ಸಂಬಂಧ ಕೋರ್ಟ್ ನಲ್ಲಿಯೂ ಜಾಮೀನು ನಿರಾಕರಣೆಯಾಗಿದೆ.

ಏಷ್ಯಾ ಕಪ್ 2022 ರ ಚಾಂಪಿಯನ್ ಶ್ರೀಲಂಕಾ 2022 ರ T20 ವಿಶ್ವಕಪ್‌ನ ಸೂಪರ್ 12 ಹಂತದ 1 ನೇ ಗುಂಪಿನಲ್ಲಿತ್ತು. ಆದರೆ ಸೆಮಿಫೈನಲ್‌ಗೆ ತೆರಳಲು ವಿಫಲವಾಯಿತು. ಶನಿವಾರ (ನವೆಂಬರ್ 5) ಸಿಡ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ತನ್ನ ಅಂತಿಮ ಸೂಪರ್ 12 ಪಂದ್ಯದಲ್ಲಿ ಶ್ರೀಲಂಕಾ ಸೋತಿತು.

ಇದನ್ನೂ ಓದಿ: R Ashwin : ಜಿಂಬಾಬ್ವೆ ಟೀಂಗೆ ಆಘಾತಕಾರಿ ಸಂಗತಿ ತಿಳಿಸಿದ ಆರ್.ಅಶ್ವಿನ್!

ಗುಣತಿಲಕ 2022 ರ T20 ವಿಶ್ವಕಪ್‌ನಿಂದ ಮೊದಲ ಸುತ್ತಿನಲ್ಲಿ ಮಂಡಿರಜ್ಜು ಗಾಯದಿಂದ ಹೊರಗುಳಿದಿದ್ದರು. ಅವರ ಬದಲಿಗೆ ಅಶೆನ್ ಬಂಡಾರ ಅವರನ್ನು ತಂಡದಲ್ಲಿ ಸೇರಿಸಲಾಯಿತು. ಆದರೆ ಆಸ್ಟ್ರೇಲಿಯಾದಲ್ಲಿ ತಂಡದೊಂದಿಗೆ ಉಳಿದಿದ್ದರು. ಅವರು ನವೆಂಬರ್ 2015 ರಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ ನಂತರ ಶ್ರೀಲಂಕಾ ಪರ ಎಂಟು ಟೆಸ್ಟ್, 47 ODI ಮತ್ತು 46 T20I ಗಳನ್ನು ಆಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News