Andre Russell Six breaks The Chair : ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)ನ ಆಲ್-ರೌಂಡರ್ ಆಂಡ್ರೆ ರಸೆಲ್ ಬ್ಯಾಟಿಂಗ್ ಮತ್ತು ಲಾಂಗ್ ಶಾಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ವೆಸ್ಟ್ ಇಂಡೀಸ್‌ನ ರಸೆಲ್ ಲಾಂಗ್ ಮತ್ತೆ ಹೈಟ್ ಸಿಕ್ಸರ್‌ಗಳನ್ನು ಹೊಡೆಯುವುದಕ್ಕೆ ವಿಶ್ವದಾದ್ಯಂತ ಪ್ರಸಿದ್ಧ ಆಟಗಾರನಾಗಿದ್ದರೆ. ಐಪಿಎಲ್‌ನ ಈ ಋತುವಿನಲ್ಲೂ ರಸೆಲ್ ಅನೇಕ ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಇತ್ತೀಚೆಗೆ ಕೋಲ್ಕತ್ತಾ ತಂಡ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಸೆಲ್ ನ ನೆಟ್ಸ್ ಸೆಷನ್‌ನ ವೀಡಿಯೊವನ್ನು ಹಂಚಿಕೊಂಡಿದೆ, ಈ ವೀಡಿಯೊದಲ್ಲಿ ರಸೆಲ್ ಹೊಡೆದ ಹೊಡೆತಕ್ಕೆ ಕುರ್ಚಿ ಮುರಿದು ಹೋಗಿದೆ. ಈ ವಿಡಿಯೋ ಸಧ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ರಸೆಲ್ ಹೊಡೆದ ಹೊಡೆತಕ್ಕೆ ಕುರ್ಚಿ ಮುರಿತು!
ಕೋಲ್ಕತ್ತಾ ಮುಂದಿನ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಎದುರಿಸಲಿದೆ. ಇದಕ್ಕೂ ಮುನ್ನ ರಸೆಲ್ ನೆಟ್ ನಲ್ಲಿ ಬೆವರು ಸುರಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಕೆಕೆಆರ್ ಗೆಲುವು ಅತೀ ಮುಖ್ಯವಾಗಿದೆ. ಈ ಋತುವಿನಲ್ಲಿ ಕೆಕೆಆರ್ ಸತತ ಸೋಲುಗಳನ್ನು ಎದುರಿಸುತ್ತಿದೆ. ರಸೆಲ್ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ, ಇದರಲ್ಲಿ ರಸೆಲ್ ಹೊಡೆದ ಬಾಲ್ ಗೆ ಕುರ್ಚಿ ಮುರಿದಿರುವುದನ್ನು ಕಾಣಬಹುದು. ಇದರಿಂದ ಊಹಿಸಿಕೊಳ್ಳಬಹುದು, ರಸೆಲ್ ಬಿಸಿದ ಬ್ಯಾಟ್ ಅಷ್ಟು ಬಿರುಸಿನದಾಗಿತ್ತು ಎಂಬುವುದನ್ನ ನೋಡಬಹುದು. ಕುರ್ಚಿ ಗತಿನೆ ಹೀಗಾದ್ರೆ, ಗ್ರೌಂಡ್ ಅಲ್ಲಿರುವ ಪ್ರೇಕ್ಷಕರಿಗೆ ಬಡಿದಿದ್ದರೆ ಹೇಗಾಗಿರಬೇಡ ಎಂದು ನೆಟ್ಟಿಗರುಗಾಬರಿಯಾಗಿದ್ದಾರೆ. ವೀಡಿಯೊವನ್ನು ಹಂಚಿಕೊಂಡಿರುವ ಕೋಲ್ಕತ್ತಾ, 'ರಸ್ಸೆಲ್ ಹೊಡೆದ ಪರಿಣಾಮ ಏನಾಗಿದೆ ವಿಡಿಯೋ ಕೊನೆವರೆಗೂ ನೋಡಿ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದೆ.
ಇದನ್ನೂ ಓದಿ : RCB vs RR: ಇಂದು ಆರ್‌ಸಿಬಿಗೆ ಆರ್‌ಆರ್ ಸವಾಲು: ಇಲ್ಲಿದೆ ಸಂಭಾವ್ಯ ಆಟಗಾರರ ಪಟ್ಟಿ
ಈ ವೈರಲ್ ವಿಡಿಯೋವನ್ನು ಇಲ್ಲಿ ನೋಡಿ
ಐಪಿಎಲ್ 2022 ರಲ್ಲಿ ಆಂಡ್ರೆ ರಸೆಲ್
ಆಂಡ್ರೆ ರಸೆಲ್ ತಮ್ಮ ಜೋರಾಗಿ ಬ್ಯಾಟ್ ಬೀಸುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಋತುವಿನಲ್ಲಿಯೂ ರಸೆಲ್ ಅದೇ ಬ್ಯಾಟ್ ಬಿಸಿ ಆಟ ಆಡುತ್ತಿದ್ದಾರೆ. ಐಪಿಎಲ್ 2022 ರಲ್ಲಿ ರಸೆಲ್ ಇದುವರೆಗೆ 7 ಇನ್ನಿಂಗ್ಸ್‌ಗಳಲ್ಲಿ 227 ರನ್ ಗಳಿಸಿದ್ದಾರೆ. ಅಲ್ಲದೆ, 180.15 ಸ್ಟ್ರೈಕ್ ರೇಟ್ ಮತ್ತು 45.40 ರ ಸರಾಸರಿಯಲ್ಲಿ ಈ ರನ್ ಗಳಿಸಿದ್ದಾರೆ. ರಸೆಲ್ ಐಪಿಎಲ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಇಲ್ಲಿಯವರೆಗೆ ಒಟ್ಟು 92 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 178.76 ಸ್ಟ್ರೈಕ್ ರೇಟ್‌ನಲ್ಲಿ 1927 ರನ್ ಗಳಿಸಿದ್ದಾರೆ. ರಸೆಲ್ ಐಪಿಎಲ್‌ನಲ್ಲಿ 10 ಅರ್ಧಶತಕಗಳನ್ನು ಗಳಿಸಿದ್ದಾರೆ.
ಕೆಕೆಆರ್ ಗೆಲ್ಲಲೇಬೇಕು
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಇದುವರೆಗೆ 8 ಪಂದ್ಯಗಳಲ್ಲಿ 5 ಸೋಲು ಕಂಡಿದೆ ಮತ್ತು ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ತಂಡದ ಮುಂದಿನ ಪಂದ್ಯ ಏಪ್ರಿಲ್ 28 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿದೆ ಮತ್ತು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಕೆಕೆಆರ್ ತನ್ನ ಕೊನೆಯ ನಾಲ್ಕು ಪಂದ್ಯಗಳಲ್ಲಿ ಸತತ ಸೋಲುಗಳನ್ನು ಅನುಭವಿಸಿದೆ, ಆದ್ದರಿಂದ ಈ ಪಂದ್ಯವು ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ.
ಇದನ್ನೂ ಓದಿ : PBKS vs CSK, IPL 2022: ಶಿಖರ್ ‘ದಾಖಲೆ’ ಬ್ಯಾಟಿಂಗ್, ಚೆನ್ನೈಗೆ ವಿರೋಚಿತ ಸೋಲು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.