ಬೆಂಗಳೂರು: ಭಾರತದ ದಂತಕಥೆ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವೇ ದ್ರಾವಿಡ್ ಅವರು ತಮ್ಮ ತಂದೆಯ ಹಾದಿಯನ್ನು ಅನುಸರಿಸುತ್ತಿದ್ದಾರೆ. ಹೌದು ಈಗ ಇಂಟರ್ಜೋನಲ್ ಪಂದ್ಯಾವಳಿಯಲ್ಲಿ ಕರ್ನಾಟಕ U-14 ತಂಡವನ್ನು ಮುನ್ನಡೆಸಲು ಮುಂದಾಗಿರುವುದರಿಂದ ಭವಿಷ್ಯದ ಜೂನಿಯರ್ ದ್ರಾವಿಡ್ ಕ್ರಿಕೆಟ್ ನಲ್ಲಿ ಈಗ ನಿಚ್ಚಳ ಹೆಜ್ಜೆಯನ್ನಿರಿಸಿದ್ದಾರೆ.
ಅನ್ವೇ ಅವರು ಕರ್ನಾಟಕದ ಪರವಾಗಿ ಜೂನಿಯರ್ ಕ್ರಿಕೆಟ್ ಆಡುತ್ತಿದ್ದಾರೆ ಮತ್ತು ಈಗಾಗಲೇ ಅವರು ಆಗಾಗ್ಗೆ ತಮ್ಮ ನಿರಂತರ ಪ್ರದರ್ಶನದಿಂದಾಗಿ ಗಮನ ಸೆಳೆದಿದ್ದಾರೆ.ಕುತೂಹಲಕಾರಿ ಸಂಗತಿ ಎಂದರೆ ಅನ್ವೇ ದ್ರಾವಿಡ ಕೂಡ ತಂದೆಯಂತೆ ವಿಕೆಟ್‌ಕೀಪರ್ ಆಗಿದ್ದಾರೆ.ವಿಶೇಷವೆಂದರೆ ಅನ್ವೇ ಯ ಅಣ್ಣ ಸಮಿತ್ ಕೂಡ ಕ್ರಿಕೆಟಿಗರಾಗಿದ್ದಾರೆ. 2019/20 ಋತುವಿನಲ್ಲಿ U-14 ಮಟ್ಟದಲ್ಲಿ ಎರಡು ದ್ವಿಶತಕಗಳನ್ನು ಸಿಡಿಸಿದಾಗ ಸಮಿತ್ ಗಮನ ಸೆಳೆದಿದ್ದರು. ಸಮಿತ್ ಈಗಾಗಲೇ U-14 ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಮತ್ತು ಅನ್ವೇ ಕೂಡ ಆ ನಿಟ್ಟಿನಲ್ಲಿ ಹೆಸರು ಮಾಡಲು ಮುಂದಾಗಿದ್ದಾರೆ.
Anvay Dravid, #RahulDravid ‘s younger son to lead #Karnataka U-14 team in the inter zonal tournament (South Zone) pic.twitter.com/ynvwtbLN6G
— Manuja (@manujaveerappa) January 19, 2023
ರಾಹುಲ್ ದ್ರಾವಿಡ್ ತರಬೇತುದಾರರಾಗಿರುವ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ.ಹೈದರಾಬಾದ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ತಂಡ 12 ರನ್‌ಗಳ ಜಯ ಸಾಧಿಸಿದೆ.2 ನೇ ಏಕದಿನ ಪಂದ್ಯ ಶನಿವಾರ (ಜನವರಿ 21) ರಾಯ್‌ಪುರದಲ್ಲಿ ನಡೆಯಲಿದೆ. 3ನೇ ಏಕದಿನ ಪಂದ್ಯ ಜನವರಿ 24 ರಂದು ಇಂದೋರ್‌ನಲ್ಲಿ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.