ಈ ವೇಗದ ಬೌಲರ್ ಶೀಘ್ರದಲ್ಲಿ ಟೀಮ್ ಇಂಡಿಯಾಗೆ ಬರಲಿದ್ದಾರೆ ಎಂದ ರವಿಶಾಸ್ತ್ರಿ...!

ಪಂಜಾಬ್ ಕಿಂಗ್ಸ್ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಐಪಿಎಲ್ 2022 ರಲ್ಲಿ ಇದುವರೆಗೆ 8 ಪಂದ್ಯಗಳಲ್ಲಿ ಕೇವಲ 3 ವಿಕೆಟ್ಗಳನ್ನು ಪಡೆದಿದ್ದಾರೆ. 

Written by - Zee Kannada News Desk | Last Updated : Apr 27, 2022, 06:20 PM IST
  • ಪಂಜಾಬ್ ಕಿಂಗ್ಸ್ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಐಪಿಎಲ್ 2022 ರಲ್ಲಿ ಇದುವರೆಗೆ 8 ಪಂದ್ಯಗಳಲ್ಲಿ ಕೇವಲ 3 ವಿಕೆಟ್ಗಳನ್ನು ಪಡೆದಿದ್ದಾರೆ.
ಈ ವೇಗದ ಬೌಲರ್ ಶೀಘ್ರದಲ್ಲಿ ಟೀಮ್ ಇಂಡಿಯಾಗೆ ಬರಲಿದ್ದಾರೆ ಎಂದ ರವಿಶಾಸ್ತ್ರಿ...! title=

ನವದೆಹಲಿ: ಪಂಜಾಬ್ ಕಿಂಗ್ಸ್ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಐಪಿಎಲ್ 2022 ರಲ್ಲಿ ಇದುವರೆಗೆ 8 ಪಂದ್ಯಗಳಲ್ಲಿ ಕೇವಲ 3 ವಿಕೆಟ್ಗಳನ್ನು ಪಡೆದಿದ್ದಾರೆ.ಆದರೆ ಕೆಲವೊಮ್ಮೆ ಸಂಖ್ಯೆಗಳು ಆಟಗಾರನ ಚಿತ್ರಣವನ್ನು ಸಂಪೂರ್ಣವಾಗಿ ಚಿತ್ರಿಸದೇ ಇರಬಹುದು, ಆದರೆ ಮುಂಬರುವ ದಿನಗಳಲ್ಲಿ ಅವರೊಬ್ಬ ಭವಿಷ್ಯದ ಟೀಮ್ ಇಂಡಿಯಾ ಆಟಗಾರನಾಗುತ್ತಾರೆ ಎಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಆದಾಗ್ಯೂ,ಟಿ 20ಯಲ್ಲಿ ಪ್ರತಿ ಎಸೆತವು ಕೂಡ ಪ್ರಮುಖವಾಗುತ್ತದೆ, ಅದರಲ್ಲೂ ಅವರು ತಮಗೆ ಸಿಕ್ಕಿರುವ 24 ಎಸೆತಗಳಲ್ಲಿ ಪಂದ್ಯದ ಚಿತ್ರಣವನ್ನು ಬದಲಾಯಿಸಬೇಕಾಗುತ್ತದೆ.ಈಗ ಆರ್ಶದೀಪ್ ಅವರ ವಿಚಾರಕ್ಕೆ ಬರುವುದಾದರೆ ಅವರು ವಿಕೆಟ್ ಗಳನ್ನು ಪಡೆಯಲು ಸಫಲರಾಗದೇ ಇದ್ದರೂ ಸಹಿತ ತಮ್ಮ ಬೌಲಿಂಗ್ ಮೂಲಕ ಪರಿಣಾಮಕಾರಿಯಗುತ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿದು ದೌರ್ಭಾಗ್ಯದ ಸರ್ಕಾರ : ಸಿದ್ದರಾಮಯ್ಯ

ಅರ್ಶ್ದೀಪ್ 6 ರೊಳಗಿನ ಎಕಾನಮಿ ರೇಟ್‌ನೊಂದಿಗೆ ಅವರು ಬೌಲಿಂಗ್ ಮಾಡುತ್ತಿದ್ದಾರೆ.ಅದರಲ್ಲೂ ಅವರು ಡೆತ್ ಓವರ್ ನಲ್ಲಿ 5.66 ರ ಎಕಾನಮಿ ರೇಟ್ ನ್ನು ಹೊಂದಿದ್ದಾರೆ, ಇದು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಕಗಿಸೊ ರಬಾಡ ಅವರಂತಹ ಬೌಲರ್ ಗಳಿಗಿಂತಲೂ ಉತ್ತಮವಾಗಿದೆ.ಹಾಗಾಗಿಯೇ ಈಗ ಈ ಪಂಜಾಬಿನ ಯುವ ಬೌಲರ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

ಇದನ್ನು ಓದಿ: SRH ಟೀಂ ಮ್ಯಾಚ್ ವಿನ್ನರ್‌ಗಳು ಈ 2 ಬೌಲರ್‌ಗಳು : ಇವರ ವೇಗಕ್ಕೆ ಎದುರಾಳಿ ಎದೆಯಲ್ಲಿ ಗಡ ಗಡ!

ಈಗ ಈ ಯುವ ಆಟಗಾರನ ಕುರಿತಾಗಿ ಮಾತನಾಡಿದ ರವಿಶಾಸ್ತ್ರಿ 'ಯಾರಾದರೂ ಚಿಕ್ಕ ವಯಸ್ಸಿನವರಾಗಿದ್ದಾಗ ಅಂತ ಬೌಲರ್ ಗೆ ಡೆತ್ ಓವರ್ ನಲ್ಲಿ ಅವಕಾಶ ನೀಡಿದಾಗ ಅದನ್ನು ಆರ್ಶ್ ದೀಪ್ ರಂತಹ ಆಟಗಾರರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆ.ಅವರು ಶೀಘ್ರದಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News