ನವದೆಹಲಿ: ಆಶ್ ಬಾರ್ಟಿ ಕರೋಲಿನಾ ಪ್ಲಿಸ್ಕೋವಾ ಅವರನ್ನು 6-3 6-7 (4) 6-3 ಸೆಟ್‌ಗಳಿಂದ ಸೋಲಿಸುವ ಮೂಲಕ ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆ ಮೂಲಕ 41 ವರ್ಷಗಳ ನಂತರ ಈ ಪ್ರಶಸ್ತಿ ಗೆದ್ದ ಮೊದಲ ಆಸ್ಟ್ರೇಲಿಯಾದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಫೈನಲ್‌ನಲ್ಲಿ ಜೆಕ್ ಕರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸಿದ್ದಾರೆ.
Destiny fulfilled 🇦🇺@AshBarty is our new Ladies' Singles Champion 🏆#Wimbledon pic.twitter.com/Yeh7wldDuv
— Wimbledon (@Wimbledon) July 10, 2021
ಇದನ್ನೂ ಓದಿ: IPL 2021: ಎಂ.ಎಸ್.ಧೋನಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
1980 ರಲ್ಲಿ ಇವೊನ್ನೆ ಗೂಲಾಗೊಂಗ್ ನಂತರ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಸಿಂಗಲ್ಸ್ ಟ್ರೋಫಿಯನ್ನು ಗೆದ್ದ ಮೊದಲ ಆಸ್ಟ್ರೇಲಿಯಾ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಬಾರ್ಟಿ ಅವರು ಗೂಲಾಗೊಂಗ್‌ನಿಂದ ಸ್ಫೂರ್ತಿ ಪಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಹರ್ಭಜನ್ ಸಿಂಗ್, ಗೀತಾ ಬಸ್ರಾ ದಂಪತಿಗೆ ಗಂಡು ಮಗು
2019 ರಲ್ಲಿ ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ತನ್ನ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ 25 ವರ್ಷದ ಬಾರ್ಟಿ, 1980 ರಲ್ಲಿ ತನ್ನ ಆಲ್ ಇಂಗ್ಲೆಂಡ್ ಕ್ಲಬ್ ಪ್ರಶಸ್ತಿ ಪಡೆದ ಎವೊನೆ ಗೂಲಾಗೊಂಗ್ ಅನ್ನು ಅನುಕರಿಸಿದಳು. "ನಾನು ಇವೊನ್ನೆಯನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ನಾನು ಭಾವಿಸುತ್ತೇನೆ" ಎಂದು ಬಾರ್ಟಿ ಹೇಳಿದರು.
🇦🇺 @ashbarty 🤝 Evonne Goolagong Cawley 🇦🇺
Whether it's 2021 or 1971, you always remember your first...#Wimbledon pic.twitter.com/djzUM8Buft
— Wimbledon (@Wimbledon) July 10, 2021
ವಿಂಬಲ್ಡನ್‌ನಲ್ಲಿ 15 ವರ್ಷದ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಹತ್ತು ವರ್ಷಗಳ ನಂತರ, ಬಾರ್ಟಿ ಅವರು ಶನಿವಾರದ ಫೈನಲ್‌ಗೆ ಬಂದರು, ಅವರು ಪ್ಲಿಸ್ಕೋವಾ ವಿರುದ್ಧ ಆಡಿದ ಏಳು ಪಂದ್ಯಗಳಲ್ಲಿ ಐದನ್ನು ಗೆದ್ದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.